ನವದೆಹಲಿ:ಗೂಗಲ್​ ಒಡೆತನದ ಯೂಟ್ಯೂಬ್, ತನ್ನ ವಿಡಿಯೋ ಕ್ರಿಯೆಟರ್ಸ್​ಗಳಿಗೆ ಎಚ್ಚರಿಕೆ ಸಂದೇಶವೊಂದನ್ನು ರವಾನಿಸಿದೆ. ಕಡಿಮೆ ಗುಣಮಟ್ಟದ ಮಕ್ಕಳ ವಿಡಿಯೋಗಳನ್ನು ನವೆಂಬರ್​ನಿಂದ ಡಿಮಾನಿಟೈಸ್ ಮಾಡುವುದಾಗಿ ಹೇಳಿದೆ.
ಪ್ರಾಥಮಿಕವಾಗಿ ಯುವ ಪ್ರೇಕ್ಷಕರನ್ನು ಗುರಿಯಾಗಿಸುವ ಯೂಟ್ಯೂಬ್ ಚಾನಲ್‌ಗಳನ್ನು “ಮಕ್ಕಳಿಗಾಗಿ ರಚಿಸಲಾಗಿದೆ” ಎಂದು ವರ್ಗೀಕರಿಸಲಾಗಿದೆ. ನಿರ್ದಿಷ್ಟ ಮಕ್ಕಳ ಮಾನಿಟೈಸೆನ್​ ಪಾಲಿಸಿಗೆ ಅನುಗುಣವಾಗಿ ಯೂಟ್ಯೂಬ್​ ಚಾನೆಲ್​ಗಳು ಹೆಚ್ಚು ಗುಣಮಟ್ಟದ ವಿಡಿಯೋಗಳನ್ನು ನೀಡಬೇಕಿದೆ ಎಂದು ಯೂಟ್ಯೂಬ್​ನ ಉತ್ಪನ್ನ ನಿರ್ವಹಣೆ, ಮಕ್ಕಳು ಮತ್ತು ಕುಟುಂಬ ನಿರ್ದೇಶಕರಾದ ಜೇಮ್ಸ್​ ಬೆಸೆರ್​ ಹೇಳಿದ್ದಾರೆ.
ಉದಾಹರಣೆಯಾಗಿ, ತುಂಬಾ ಕಮರ್ಸಿಯಲ್​ ಅಥವಾ ಪ್ರಚಾರದ ಅಥವಾ ನಕಾರಾತ್ಮಕ ವರ್ತನೆಗಳು ಪ್ರೋತ್ಸಾಹಿಸುವಂತಹ ವಿಡಿಯೋಗಳನ್ನು ಯೂಟ್ಯೂಬ್​ ಪಾರ್ಟ್ನರ್​ ಪ್ರೊಗ್ರಾಮ್​ನಿಂದ ತೆಗೆದು ಹಾಕಲಾಗುವುದು ಎಂದು ಯೂಟ್ಯೂಬ್​ ತಿಳಿಸಿದೆ. ವೈಯಕ್ತಿಕ ವಿಡಿಯೋಗಳು ಸಹ ಈ ನಿಯಮಗಳನ್ನು ಉಲ್ಲಂಘಿಸಿದ್ದೇ ಆದಲ್ಲಿ ಅವುಗಳನ್ನು ಜಾಹೀರಾತು ಇಲ್ಲದಂತೆ ಸೀಮಿತಗೊಳಿಸಲಾಗುವುದು ಎಂದು ತಿಳಿಸಿದೆ.
ಅಕ್ಟೋಬರ್‌ನಲ್ಲಿ, ಯೂಟ್ಯೂಬ್​ನಲ್ಲಿ ಪ್ರಾಥಮಿಕವಾಗಿ ಮಕ್ಕಳು ಮತ್ತು ಕುಟುಂಬದ ವಿಷಯವನ್ನು ರಚಿಸುವ ಚಾನಲ್‌ಗಳಿಗಾಗಿ ಹೆಚ್ಚುವರಿ ಹಣ ಗಳಿಕೆ ನೀತಿಗಳನ್ನು ಹಂಚಿಕೊಂಡಿದೆ. ಇಲ್ಲಿಯವರೆಗೂ ಯೂಟ್ಯೂಬ್​​ 1.8 ಮಿಲಿಯನ್​ಗೂ ಅಧಿಕ ವಿಡಿಯೋಗಳನ್ನು ಮಕ್ಕಳ ಸುರಕ್ಷತಾ ನೀತಿಯ ಉಲ್ಲಂಘನೆ ಅಡಿಯಲ್ಲಿ ತೆಗೆದುಹಾಕಿದೆ.
ಇನ್ನು ಯೂಟ್ಯೂಬ್ ಕಿಡ್ಸ್’ ಎಂಬುದು ಪ್ರತ್ಯೇಕವಾದ ಅಪ್ಲಿಕೇಶನ್ ಆಗಿದ್ದು, ಇದು ಯೂಟ್ಯೂಬ್‌ನ ಫಿಲ್ಟರ್ ಮಾಡಿದ ಆವೃತ್ತಿಯಾಗಿದ್ದು, ನಿರ್ದಿಷ್ಟ ವಿಷಯ ನೀತಿಗಳನ್ನು ಹೊಂದಿದೆ ಮತ್ತು ಕಡಿಮೆ ಚಾನಲ್‌ಗಳು ಮತ್ತು ವೀಡಿಯೊಗಳು ಅದರಲ್ಲಿ ಲಭ್ಯವಿದೆ.(ಏಜೆನ್ಸೀಸ್​)
ವಾಟ್ಸ್​ಆ್ಯಪ್​ ಸ್ಟೇಟಸ್​ ಹಾಕಿ ಪಾಕ್​ ಗೆಲುವನ್ನು ಸಂಭ್ರಮಿಸಿದ ಬೆನ್ನಲ್ಲೇ ಶಿಕ್ಷಕಿಗೆ ಕಾದಿತ್ತು ಬಿಗ್​ ಶಾಕ್​..!

ಸುಲಿಗೆ ಕೇಸ್​ನಲ್ಲಿ ಬಂಧಿಯಾದ ಗ್ಯಾಂಗ್​ಸ್ಟರ್​ ಗರ್ಲ್​ಫ್ರೆಂಡ್​​ ಹಿನ್ನೆಲೆ ಕೇಳಿದ್ರೆ ದಂಗಾಗ್ತೀರಾ..!

ಯಾರು ಇಲ್ಲದ ವೇಳೆ ಪ್ರಿಯಕರನ ಮನೆಗೆ ಪ್ರೇಯಿಸಿ ಎಂಟ್ರಿ: ನೂಡಲ್ಸ್​ ತಿಂದು, ವಿಷ ಸೇವಿಸಿ ಆತ್ಮಹತ್ಯೆಗೆ ಶರಣು..!

ಅಮ್ಮಾ ಸಾಯಿಸ್ಬೇಡ… ಬಿಟ್ಬಿಡು.. ಎಂದ್ರೂ ಕೇಳಲಿಲ್ಲ; ಮಕ್ಕಳಿಗೂ ಬೆಂಕಿ ಹಚ್ಚಿ ಆತ್ಮಹತ್ಯೆ ಮಾಡಿಕೊಂಡ ಗೃಹಿಣಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − six =
Remember me
