ಮುಂಬೈ:ವಿಶ್ವವೇ ಬೆರಗಾಗುವಂತಹ ಮದುವೆ ಮಾಡುತ್ತಿರುವ ಅಂಬಾನಿ ಕುಟುಂಬ ಸಡಗರದಲ್ಲಿ ಮಿಂದೇಳುತ್ತಿದೆ. ಮುಖೇಶ್​ ಮತ್ತು ನೀತಾ ಅಂಬಾನಿ ಪುತ್ರ ಅನಂತ್​ ಮತ್ತು ರಾಧಿಕಾ ಮರ್ಚೆಂಟ್​ ಮದುವೆ ಜು.12ರಂದು ನಡೆಯಲಿದ್ದು, ಮದುವೆಪೂರ್ವ ಕಾರ್ಯಕ್ರಮಗಳು ಎಲ್ಲರ ಗಮನಸೆಳೆಯುತ್ತಿವೆ. ಇದೀಗ ಹಲ್ದಿ(ಅರಿಶಿಣ ಶಾಸ್ತ್ರ ಕಾರ್ಯಕ್ರಮ)ದಲ್ಲಿ ರಾಧಿಕಾ ಅತ್ಯಾಕರ್ಷಕವಾದ ಲೆಹಂಗಾದ ದುಪ್ಪಟ್ಟಾ ಧರಿಸಿದ್ದು ವಿಡಿಯೋ ವೈರಲ್​ ಆಗುತ್ತಿದೆ.
ಇದನ್ನೂ ಓದಿ:ಅಕ್ರಮ ಹಣ ವರ್ಗಾವಣೆ ಪ್ರಕರಣ: ಜಾಕ್ವೆಲಿನ್ ಫರ್ನಾಂಡೀಸ್‌ಗೆ ಇಡಿ ಮತ್ತೆ ಸಮನ್ಸ್
ಲೆಹಂಗಾ ಮತ್ತು ದುಪ್ಪಟ್ಟಾವನ್ನು ಸಂಪೂರ್ಣವಾಗಿ ಮಲ್ಲಿಗೆ ಮತ್ತು ಚೆಂಡು ಹೂವುಗಳಿಂದ ಅಲಂಕರಿಸಲಾಗಿದೆ. ಮಲ್ಲಿಗೆ ಹೂವುಗಳು ದುಪ್ಪಟ್ಟಾ ಅಲಂಕಿಸಿದ್ದರೆ, ಬಾರ್ಡರ್​ಗೆ ಚೆಂಡುಹೂವುಗಳನ್ನು ಜೋಡಿಸಲಾಗಿದೆ. ಅಷ್ಟೇ ಅಲ್ಲ, ಆಭರಣಗಳಿಗೂ ಮಲ್ಲಿಗೆ ಹೂವುಗಳನ್ನು ಜೋಡಿಸಲಾಗಿದೆ. ಅದ್ಭುತವಾದ ಈ ಡಿಸೈನ್​ಎಂತಹವರ ಕಣ್ಣು ಹುಬ್ಬೇರಿಸುವಂತೆ ಮಾಡುತ್ತಿದೆ.
ಈ ದುಪ್ಪಟ್ಟಾವನ್ನು ಜುಲೈ 8ರಂದು ನಡೆದ ಅರಿಶಿಣ ಸಮಾರಂಭದಲ್ಲಿ ರಾಧಿಕಾ ಮರ್ಚೆಂಟ್ ತೊಟ್ಟಿದ್ದರು. ಹಳದಿ ಲೆಹೆಂಗಾ ಇದಾಗಿದ್ದು, ಮಲ್ಲಿಗೆ ಹೂವುಗಳಿಂದ ದುಪಟ್ಟಾ ಅಲಂಕರಿಸಲಾಗಿದೆ. ಹಳದಿ ಲೆಹಂಗಾಕ್ಕೆಮ್ಯಾಚ್​ಆಗುವಂತೆ ಹಳದಿ ಚೆಂಡು ಹೂವುಗಳನ್ನು ಪೋಣಿಸಲಾಗಿದೆ. ಹೂವಿನ ದುಪಟ್ಟಾ, ಆಭರಣ ಧರಿಸಿ ರಾಧಿಕಾ ಫೋಟೋಶೂಟ್​ ಮಾಡಿಸಿಕೊಂಡಿದ್ದಾರೆ. ಇದನ್ನು ಸೆಲೆಬ್ರಿಟಿ ಸ್ಟೈಲಿಸ್ಟ್ ರಿಯಾ ಕಪೂರ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
ಇನ್ನು ಈ ಲೆಹಂಗಾ ಮತ್ತು ದುಪ್ಪಟ್ಟಾವನ್ನು ಅನಾಮಿಕಾ ಖನ್ನಾ ವಿನ್ಯಾಸಗೊಳಿಸಿದ್ದಾರೆ. ಮುಂಬೈ-ಬಾಂದ್ರಾದ ಕುರ್ಲಾ ಕಾಂಪ್ಲೆಕ್ಸ್‌ನಲ್ಲಿರುವ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ನಲ್ಲಿ ಜುಲೈ 12ರಂದು ರಾಧಿಕಾ ಮತ್ತು ಅನಂತ್ ಅಂಬಾನಿ ಮದುವೆ ನಡೆಯಲಿದೆ.
ಪುರಿ ಜಗನ್ನಾಥ ‘ರತ್ನ ಭಂಡಾರ್’ 46ವರ್ಷದ ನಂತರ ತೆರೆಯಲಿದೆ! ಭಕ್ತರಲ್ಲಿ ಹೆಚ್ಚಿದ ಕುತೂಹಲ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten + 6 =
Remember me
