ನವದೆಹಲಿ:ಭಾರತದ ವಾಯುಸೇನೆ 36 ರಫೇಲ್ ಯುದ್ಧ ವಿಮಾನ ಖರೀದಿಗೆ ಮಾಡಿಕೊಂಡ ಒಪ್ಪಂದದಲ್ಲಿ ಕಿಕ್​ಬ್ಯಾಕ್ ಪಾವತಿಯಾಗಿದೆ. ಇದಕ್ಕೆ ಸಂಬಂಧಿಸಿ ಹೊಸ ದಾಖಲೆಗಳು ಲಭ್ಯವಾಗಿವೆ ಎಂದು ಫ್ರಾನ್ಸ್​ನ ಆನ್​ಲೈನ್ ಜರ್ನಲ್ ‘ಮೀಡಿಯಾಪಾರ್ಟ್’ ಮತ್ತೊಂದು ವರದಿ ಪ್ರಕಟಿಸಿದೆ. 36 ರಫೇಲ್ ಫೈಟರ್ ಜೆಟ್ ಮಾರಾಟ ಡೀಲ್ ಕುದುರಿಸುವುದಕ್ಕಾಗಿ ಫ್ರೆಂಚ್ ವಿಮಾನ ಉತ್ಪಾದಕ ಕಂಪನಿ ಡಸಾಲ್ಟ್ ಮಧ್ಯವರ್ತಿ ಸುಶೇನ್ ಗುಪ್ತಾಗೆ ರಹಸ್ಯವಾಗಿ 7.5 ದಶಲಕ್ಷ ಯೂರೋ (650 ದಶಲಕ್ಷ ರೂ.) ಕಮಿಷನ್ ಅನ್ನು ಪಾವತಿಸಿದೆ. ಇದಕ್ಕೆ ಸಂಬಂಧಿಸಿದ ಸಾಕ್ಷ್ಯಾಧಾರಗಳು ಭಾರತ ಮತ್ತು ಭಾರತದ ತನಿಖಾಸಂಸ್ಥೆಗಳಿಗೆ ಲಭ್ಯವಾಗಿದ್ದರೂ ತನಿಖೆ ನಡೆಸುವಲ್ಲಿ ವಿಫಲವಾಗಿವೆ ಎಂದು ವರದಿ ಟೀಕಿಸಿದೆ. ಕಳೆದ ಏಪ್ರಿಲ್ ತಿಂಗಳಲ್ಲಿ ಇದೇ ಜರ್ನಲ್ ಮೂರು ಕಂತಿನ ರಫೇಲ್ ಕಿಕ್​ಬ್ಯಾಕ್ ವರದಿಯನ್ನು ಪ್ರಕಟಿಸಿತ್ತು. 59,000 ಕೋಟಿ ರೂಪಾಯಿ ಮೌಲ್ಯದ ರಫೇಲ್ ಡೀಲ್​ನಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬುದನ್ನು ಸಾರುವುದಕ್ಕೆ ಈ ಜರ್ನಲ್ ಇದೀಗ ನಕಲಿ ಇನ್ವಾಯ್್ಸ ಗಳ ಪ್ರತಿಯೊಂದಿಗೆ ಹೊಸ ವರದಿಯನ್ನು ಪ್ರಕಟಿಸಿದೆ. ಈ ವರದಿ ಪ್ರಕಾರ, ರಫೇಲ್ ಜೆಟ್ಸ್ ಮಾರಾಟ ಡೀಲ್ ಕುದುರಿಸುವುದಕ್ಕಾಗಿ ಸುಶೇನ್ ಗುಪ್ತಾಗೆ ಡಸಾಲ್ಟ್ ಕಂಪನಿ ಹಣ ಪಾವತಿಸಿದ್ದಕ್ಕಿರುವ ಸಾಕ್ಷ್ಯಗಳು 2018ರ ಅಕ್ಟೋಬರ್ 11ರಂದು ಸಿಬಿಐ ಮತ್ತು ಜಾರಿ ನಿರ್ದೇಶನಾಲಯಕ್ಕೆ (ಇಡಿ) ರವಾನೆಯಾಗಿದೆ. ಅಗಸ್ಟಾ ವೆಸ್ಟ್​ಲ್ಯಾಂಡ್ ವಿವಿಐಪಿ ಹೆಲಿಕಾಪ್ಟರ್ ಹಗರಣದ ತನಿಖೆ ನಡೆಸುತ್ತ ಸಾಕ್ಷ್ಯಗಳನ್ನು ಸಂಗ್ರಹಿಸುತ್ತಿರುವಾಗ ರಫೇಲ್ ಡೀಲ್ ಕಿಕ್​ಬ್ಯಾಕ್ ಸಾಕ್ಷ್ಯಗಳು ಅವುಗಳಿಗೆ ಸಿಕ್ಕಿವೆ. ಆದರೂ, ಈ ತನಿಖಾ ಸಂಸ್ಥೆಗಳು ತನಿಖೆ ನಡೆಸದೆ ಸುಮ್ಮನಿವೆ. ಕಿಕ್​ಬ್ಯಾಕ್ ಹಣವನ್ನು 2013ಕ್ಕೂ ಮೊದಲೇ ಪಾವತಿಸಲಾಗಿದೆ.
ಸಿಬಿಐ ಪ್ರತಿಕ್ರಿಯೆ ಇಲ್ಲ:ರಫೇಲ್ ಡೀಲ್ ಸಂಬಂಧ ಅಧಿಕೃತ ದೂರು ದಾಖಲಾಗಿ ವಾರದೊಳಗೆ ದಾಖಲೆಗಳು ಸಿಬಿಐ ಮತ್ತು ಇಡಿ ಕಚೇರಿಗಳನ್ನು ತಲುಪಿವೆ. ಆದಾಗ್ಯೂ, ತನಿಖೆ ನಡೆಸದಿರುವಂತೆ ಸಿಬಿಐ ನಿರ್ಧಾರ ಮಾಡಿದೆ. ಭ್ರಷ್ಟಾಚಾರ ನಡೆದಿರುವ ಬಗ್ಗೆ ಸಾಕ್ಷ್ಯಗಳಿದ್ದರೂ ಅದನ್ನು ತನಿಖಾ ಸಂಸ್ಥೆ ನಿರ್ಲಕ್ಷಿಸಿದೆ ಎಂದು ಮೀಡಿಯಾಪಾರ್ಟ್ ಆರೋಪಿಸಿದೆ.
2007-12ರ ಅವಧಿಯಲ್ಲಿ ಕಿಕ್​ಬ್ಯಾಕ್:ಮಧ್ಯವರ್ತಿ ಸುಶೇನ್ ಗುಪ್ತಾ ಅವರ ಇಂಟರ್​ಸ್ಟೆಲ್ಲರ್ ಟೆಕ್ನಾಲಜೀಸ್ ಗೆ 2007-2012ರ ಅವಧಿಯಲ್ಲಿ 7.5 ದಶಲಕ್ಷ ಯೂರೋ (650 ದಶಲಕ್ಷ ರೂ.) ಕಮಿಷನ್ ಡಸಾಲ್ಟ್​ನಿಂದ ಪಾವತಿಯಾಗಿದೆ. ಮಾರಿಷಸ್ ಮೂಲಕ ನಕಲಿ ಇನ್ವಾಯ್್ಸ ಸೃಷ್ಟಿಸಿ ಇದನ್ನು ಪಾವತಿಸಲಾಗಿದೆ. ಆಗ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಸ್ತಿತ್ವದಲ್ಲಿತ್ತು. 2018ರ ಅಕ್ಟೋಬರ್ 4ರಂದು ದೂರು ದಾಖಲಾಗಿದೆ. ಅದರಲ್ಲಿ 2015ರಿಂದ ಶಂಕಾಸ್ಪದ ಚಟುವಟಿಕೆ ನಡೆದಿದೆ. ಇದು ಬಿಜೆಪಿ ಆಡಳಿತದ ಸಮಯ ಎಂಬ ಉಲ್ಲೇಖವಿದೆ.
ಮಧ್ಯವರ್ತಿಯ ಟಿಪ್ಪಣಿ:ಮಧ್ಯವರ್ತಿ ಸುಶೇನ್ ಗುಪ್ತಾ 2012ರ ಸೆಪ್ಟೆಂಬರ್​ನಲ್ಲಿ ಬರೆದ ಟಿಪ್ಪಣಿ ಪ್ರಕಾರ, ಬ್ಯಾಂಕ್ ದಾಖಲೆ ಮತ್ತು ಇನ್ವಾಯ್್ಸ ಪ್ರಕಾರ ಸುಶೇನ್ ಗುಪ್ತಾ ಅವರ ಬೇನಾಮಿ ಕಂಪನಿ 2002-2006ರಲ್ಲಿ 9,14,488 ಯೂರೋವನ್ನು ಪಡೆದುಕೊಂಡಿದೆ. ಇದಲ್ಲದೆ, ‘ರಿಸ್ಕ್ ತೆಗೆದುಕೊಂಡಾಗಿದೆ. ನಿಮ್ಮ ಏಜೆಂಟ್​ಗೆ ನಾವು ಹಣಪಾವತಿಸಿದ್ದೇವೆ. ಈಗ ಕಾನೂನು ಪ್ರಕಾರ ಸಮರ್ಥನೀಯವಾದ ರೀತಿಯಲ್ಲಿ ಡೀಲ್ ನಡೆಯುವಂತೆ ನೋಡಿಕೊಳ್ಳುವ ಹೊಣೆ ನಿಮ್ಮದು. ಕಚೇರಿಯಲ್ಲಿ ಕುಳಿತವರು ಹಣ ಕೇಳುತ್ತಿದ್ದಾರೆ. ನಾವು ಅವರಿಗೆ ಪಾವತಿಸದಿದ್ದರೆ ಅವರು ನಮ್ಮನ್ನು ಜೈಲಿಗೆ ಕಳುಹಿಸಲಿದ್ದಾರೆ’ ಎಂಬ ಉಲ್ಲೇಖ ಟಿಪ್ಪಣಿಯಲ್ಲಿದೆ.
ಡಾ.ವಿಜಯ ಸಂಕೇಶ್ವರ ಅವರಿಗೆ ‘ಪದ್ಮಶ್ರೀ’ ಪ್ರಶಸ್ತಿ ಪ್ರದಾನ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 4 =
Remember me
