ನವದೆಹಲಿ:ರಫೇಲ್ ಯುದ್ಧ ವಿಮಾನಗಳ ಮತ್ತೊಂದು ಬ್ಯಾಚನ್ನು ಮುಂದಿನ ತಿಂಗಳು ಭಾರತಕ್ಕೆ ಹಸ್ತಾಂತರಿಸುವುದಕ್ಕೆ ಫ್ರಾನ್ಸ್​​ನ ಡಸಾಲ್ಟ್ ಏವಿಯೇಷನ್ ಸಿದ್ಧತೆ ನಡೆಸಿದೆ. ಇದು ಎರಡನೇ ಬ್ಯಾಚ್ ಆಗಿದ್ದು, ಮೊದಲ ಬ್ಯಾಚಿನ ವಿಮಾನಗಳು ಜುಲೈ 29ಕ್ಕೆ ಭಾರತಕ್ಕೆ ಆಗಮಿಸಿದ್ದು, ಸೆಪ್ಟೆಂಬರ್​ 10ರಂದು ಅಂಬಾಲ ವಾಯುನೆಲೆಯಲ್ಲಿ ಭಾರತೀಯ ವಾಯುಪಡೆ ಸೇರ್ಪಡೆಗೊಂಡಿತ್ತು.
ಎರಡನೇ ಬ್ಯಾಚಿನ ವಿಮಾನಗಳನ್ನು ಸ್ವೀಕರಿಸುವುದಕ್ಕೆ ಅಗತ್ಯ ಸಿದ್ಧತೆ ನಡೆಸಲು ಪ್ರಾಜೆಕ್ಟ್​ ನ ಅಸಿಸ್ಟೆಂಟ್ ಚೀಫ್ ಆಫ್ ಏರ್ ಸ್ಟಾಫ್ ನೇತೃತ್ವದ ಪರಿಣತರ ತಂಡ ಫ್ರಾನ್ಸ್​ಗೆ ತೆರಳಿದೆ. ವಾಯುಪಡೆಯ ಪೈಲಟ್​ಗಳಿಗೆ ಬ್ಯಾಚ್​ಗಳಲ್ಲಿ ಫ್ರಾನ್ಸ್​ನ ಸೇಂಟ್ ಡಿಝಿಯೆರ್ ವಾಯುನೆಲೆಯಲ್ಲಿ ತರಬೇತಿ ಒದಗಿಸಲಾಗುತ್ತಿದೆ.
ಇದನ್ನೂ ಓದಿ:PHOTOS|ಫ್ರೆಂಚ್​ ನಿರ್ಮಿತ ರಫೇಲ್​ ಸೇನೆ ಸೇರಿದ ಕ್ಷಣ : ಚೀನಾಕ್ಕೆ ಪರೋಕ್ಷ ಎಚ್ಚರಿಕೆ ನೀಡಿದ ರಕ್ಷಣಾ ಸಚಿವ
ಭಾರತ ಸರ್ಕಾರ ಫ್ರಾನ್ಸ್ ಜತೆಗೆ 36 ರಫೇಲ್ ಯುದ್ಧ ವಿಮಾನ ಖರೀದಿಯ ಒಪ್ಪಂದ ಮಾಡಿಕೊಂಡಿದೆ. ಇದರ ಮೊತ್ತ 59,000 ಕೋಟಿ ರೂಪಾಯಿ ಆಗಿದೆ. ಮೊದಲ ಬ್ಯಾಚಿನಲ್ಲಿ 5 ವಿಮಾನಗಳನ್ನು ಡಸಾಲ್ಟ್​ ಕಂಪನಿ ಕಳುಹಿಸಿತ್ತು. (ಏಜೆನ್ಸೀಸ್)
ಬಲೂಚ್​ನಲ್ಲಿ ತೈಲ,ಅನಿಲ ಕಾರ್ಮಿಕ ಕಾವಲು ಪಡೆ ಮೇಲೆ ಉಗ್ರ ದಾಳಿ: 7 ಯೋಧರು ಸೇರಿ 14 ಬಲಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 5 =
Remember me
