ನವದೆಹಲಿ:ಫ್ರಾನ್ಸ್​ನಿಂದ ಭಾರತಕ್ಕೆ ಆಗಮಿಸಿರುವ ಐದು ರಫೇಲ್ ಯುದ್ಧ ವಿಮಾನಗಳು ಭಾರತೀಯ ವಾಯುಪಡೆಗೆ ಅಧಿಕೃತವಾಗಿ ಸೇರ್ಪಡೆಯಾಗಲು ಅಂಬಾಲಾ ವಾಯುನೆಲೆಯಲ್ಲಿ ಸಿದ್ಧವಾಗಿವೆ.
ರಕ್ಷಣಾ ಸಚಿವ ರಾಜನಾಥ ಸಿಂಗ್, ಫ್ರಾನ್ಸ್​ನ ರಕ್ಷಣಾ ಸಚಿವೆ ಫ್ಲಾರೆನ್ಸ್ ಪಾರ್ಲಿ, ಸೇನೆಯ ಹಿರಿಯ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಹಾಜರಿರಲಿದ್ದು, ಈಗಾಗಲೇ ಫ್ಲಾರೆನ್ಸ್ ಪಾರ್ಲಿ ಅವರು ದೆಹಲಿಗೆ ಆಗಮಿಸಿದ್ದಾರೆ. ರಾಜನಾಥ್​ ಸಿಂಗ್​ ಅವರು ರಫೇಲ್​ ಯುದ್ಧ ವಿಮಾನಗಳನ್ನು ಔಪಚಾರಿಕವಾಗಿ ಭಾರತೀಯ ವಾಯುಪಡೆಗೆ ಸೇರಿಸಲಿದ್ದಾರೆ.
ಇದನ್ನೂ ಓದಿ:ಒಂದು ದಾಖಲೆಗಾಗಿ ಕೋಟಿ ರೂ. ಲಂಚ: 5 ಎಕರೆ ಜಮೀನು, 8 ಖಾಲಿ ಚೆಕ್, ಸರ್ಕಾರಿ ನೌಕರರ ಲಂಚಾವತಾರ ಬಯಲು!
ಕಾರ್ಯಕ್ರಮದ ಬಳಿಕ ರಾಜನಾಥ ಸಿಂಗ್ ಹಾಗೂ ಪಾರ್ಲಿ ದ್ವಿಪಕ್ಷೀಯ ಸಭೆ ನಡೆಸಲಿದ್ದು, ರಕ್ಷಣಾ ಸಹಕಾರ ಕುರಿತು ಮಹತ್ವದ ಮಾತುಕತೆ ನಡೆಸಲಿದ್ದಾರೆ ಎನ್ನಲಾಗಿದೆ. ವಿಶೇಷವಾಗಿ ಹಿಂದು ಮಹಾಸಾಗರ ಮತ್ತು ಶಾಂತ ಸಾಗರದಲ್ಲಿ ಸಹಕಾರ, ಜಂಟಿ ಸಮರಾಭ್ಯಾಸ ಕುರಿತು ಚರ್ಚೆ ನಡೆಯುವ ಸಾಧ್ಯತೆ ಇದೆ.
59 ಸಾವಿರ ಕೋಟಿ ವೆಚ್ಚದಲ್ಲಿ 36 ರಫೇಲ್ ಸಮರ ವಿಮಾನಗಳನ್ನು ಫ್ರಾನ್ಸ್​ನಿಂದ ಭಾರತ ಖರೀದಿಸುತ್ತಿದೆ. ಈ ಪೈಕಿ ಈ ಐದು ರಫೇಲ್ ವಿಮಾನಗಳು ಜುಲೈ 29ರಂದು ಭಾರತಕ್ಕೆ ಆಗಮಿಸಿವೆ. ಫ್ರಾನ್ಸ್​ನ ಡಸ್ಸಾಲ್ಟ್ ಏವಿಯೇಷನ್ ರಫೇಲ್ ವಿಮಾನಗಳನ್ನು ನಿರ್ವಿುಸಿದೆ. 2021ರೊಳಗೆ 36 ವಿಮಾನಗಳೂ ಭಾರತಕ್ಕೆ ಹಸ್ತಾಂತರವಾಗಲಿದೆ.(ಏಜೆನ್ಸೀಸ್​)
#WATCHFlorence Parly, Minister of Armed Forces of France arrives at Delhi's Palam airport. She is the chief guest for Rafale induction ceremony at Air Force Station, Ambalapic.twitter.com/Z2V086HouC
— ANI (@ANI)September 10, 2020

Rafale fighter aircraft at the Indian Air Force station in Ambala, today morning.
Defence Minister Rajnath Singh will formally induct the five Rafale fighter aircraft into the Indian Air Force, today.pic.twitter.com/Pgz82SeCHv
— ANI (@ANI)September 10, 2020

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × one =
Remember me
