ನವದೆಹಲಿ:ಕರೊನಾ ವೈರಸ್​ ತಡೆಗಟ್ಟಲು ಎರಡನೇ ಅಥವಾ ಮೂರನೇ ಹಂತದ ಲಾಕ್​ಡೌನ್​ ಘೋಷಿಸಿದರೆ, ಭಾರತದ ಆರ್ಥಿಕ ವ್ಯವಸ್ಥೆಗೆ ವಿನಾಶಕಾರಿಯಾಗಿ ಪರಿಣಮಿಸಲಿದೆ ಎಂದು ಆರ್​ಬಿಐ ಮಾಜಿ ಗವರ್ನರ್​ ರಘುರಾಮ್​ ರಾಜನ್​ ಹೇಳಿದ್ದಾರೆ.
ಲಾಕ್​​ಡೌನ್​ ವಿಸ್ತರಿಸಿದರೆ ಭಾರತದ ಆರ್ಥಿಕತೆಯ ವಿಶ್ವಾಸಾರ್ಹತೆಯೇ ನಶಿಸಿ ಹೋಗಲಿದೆ. ಕರೊನಾವನ್ನು ತಡೆಗಟ್ಟುವಲ್ಲಿ ಶೇ.100 ಯಶಸ್ಸು ಕಾಣುವ ಗುರಿ ಹೊಂದಬೇಕಿಲ್ಲ, ಅದೂ ಸಾಧ್ಯವೂ ಅಲ್ಲ. ಹೀಗಾಗಿ ಆರ್ಥಿಕ ಚಟುವಟಿಕೆಗಳ ಮರು ಆರಂಭವನ್ನು ಸೂಕ್ತವಾಗಿ ನಿರ್ವಹಿಸಬೇಕು ಎಂದು ಅವರು ಸಲಹೆ ನೀಡಿದ್ದಾರೆ.
ಕಾಂಗ್ರೆಸ್​ ಮುಖಂಡ ರಾಹುಲ್​ ಗಾಂಧಿ ಜತೆಗೆ ಅವರು ನಡೆಸಿದ ಸಂವಾದದಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದನ್ನು ಪಕ್ಷದ ಸಾಮಾಜಿಕ ಜಾಲತಾಣಗಳಲ್ಲಿ ಅಪ್​ಲೋಡ್​ ಮಾಡಲಾಗಿದೆ.
ಕರೊನಾದಿಂದಾಗಿ ಸಂಕಷ್ಟದಲ್ಲಿರುವ ಜನರಿಗೆ ನೆರವು ನೀಡಲು ಅಂದಾಜು 65,000 ಕೋಟಿ ರೂ.ಗಳ ಅಗತ್ಯವಿದೆ. ಭಾರತದ ಜಿಡಿಪಿಯನ್ನು ಪರಿಗಣಿಸುವುದಾದರೆ, ಈ ಮೊತ್ತವನ್ನು ಭರಿಸುವುದು ಸಾಧ್ಯವಾಗಲಿದೆ ಎಂದು ರಾಜನ್​ ಹೇಳಿದ್ದಾರೆ.
ಲಾಕ್​ಡೌನ್​ ತೆರವುಗೊಳಿಸುವ ಜಾಣ್ಮೆಯನ್ನು ಭಾರತ ತೋರಿಸಲೇಬೇಕಿದೆ. ಆರ್ಥಿಕ ಚಟುವಟಿಕೆಗಳಿಗೆ ಹಂತಹಂತವಾಗಿ ಅವಕಾಶ ನೀಡಬೇಕು. ಏಕೆಂದರೆ, ದೇಶದ ಎಲ್ಲ ಶ್ರೇಣಿಯ ಜನರನ್ನು ಅತ್ಯಂತ ದೀರ್ಘ ಕಾಲದವರೆಗೆ ಪೋಷಿಸುವ ಶಕ್ತಿ ಭಾರತಕ್ಕಿಲ್ಲ ಎಂದೂ ಹೇಳಿದ್ದಾರೆ. ಹೀಗಾಗಿ ಆರ್ಥಿಕ ವ್ಯವಸ್ತೆಯನ್ನು ಪುನಶ್ಚೇತನಗೊಳಿಸುವ ಕಾರ್ಯಕ್ಕೆ ಚಾಲನೆ ನೀಡುವುದು ಅತ್ಯಗತ್ಯವಾಗಿದೆ ಎಂದು ರಘುರಾಜನ್​ ಹೇಳಿದ್ದಾರೆ.
ಕರೊನೋತ್ತರ ವಿಶ್ವದಲ್ಲಿ ಭಾರತವಾಗಲಿದೆ ಆರ್ಥಿಕ ಸೂಪರ್​ ಪವರ್​, ಜಾಗತಿಕ ಅರ್ಥ ವ್ಯವಸ್ಥೆ ಮರುಚಿಂತನೆಗೆ ಭಾರತದ ಮುಂದಾಳತ್ವ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 − 7 =
Remember me
