ಬೆಂಗಳೂರು:ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್ ಅವರ ಇಂದಿರಾ ನಗರ ಕಾ ಗೂಂಡಾ ಜಾಹೀರಾತು ಜಾಲತಾಣಗಳಲ್ಲಿ ಸಕತ್ ಸದ್ದು ಮಾಡಿತ್ತು. ಇದೀಗ ಇದನ್ನೇ ನೆಟ್ಟಿಗರು, ಟ್ರೋಲಿಗರು ಸಕತ್ ಆಗಿ ಎಂಜಾಯ್ ಮಾಡುತ್ತಿದ್ದಾರೆ. ರಾಹುಲ್ ದ್ರಾವಿಡ್ ಹೆಸರಲ್ಲಿ ಚಿತ್ರ ವಿಚಿತ್ರ ಮಿಮ್ಸ್​ ಹರಿಬಿಡುತ್ತಿದ್ದಾರೆ.
ರಾಹುಲ್ ದ್ರಾವಿಡ್ ಅವರನ್ನು ಕನ್ನಡದ ಚಿತ್ರಗಳಿಗೆ ಹೋಲಿಸಿ ಮೆಮ್ಸ್​ನ್ನು ಹಾಕಿರುವುದು ಜಾಲತಾಣಗಳಲ್ಲಿ ವೈರಲ್ ಆಗಿವೆ. ಕನ್ನಡದ ಉಗ್ರಂ, ರೌಡಿ ಅಳಿಯ, ಕೋಟಿಗೊಬ್ಬ, ದಾರಿ ತಪ್ಪಿದ ಮಗ ಎಂಬ ಸಿನಿಮಾಗಳಿಗೆ ಹೋಲಿಸಿ ಟ್ರೋಲ್ ಮಾಡಿದ್ದಾರೆ. ನಮ್ಮ ರಾಹುಲ್ ದ್ರಾವಿಡ್ ಅವರಿಗೆ ಕನ್ನಡದ ಯಾವ ಸಿನಿಮಾಗಳು ಹೊಂದುತ್ತವೆ ನೋಡಿ ಎಂದು ಹಾಕಿಕೊಂಡಿದ್ದಾರೆ.
https://twitter.com/raajcar/status/1381121923581501441?ref_src=twsrc%5Etfw%7Ctwcamp%5Etweetembed%7Ctwterm%5E1381121923581501441%7Ctwgr%5E%7Ctwcon%5Es1_&ref_url=https%3A%2F%2Ftv9kannada.com%2Fentertainment%2Fsandalwood%2Frahul-dravid-viral-ad-video-makes-netizens-to-suggest-kannada-movie-titles-that-suits-to-him-mdn-212203.html
ಭಾರತ ಕಂಡ ಅಪರೂಪದ ಕ್ರಿಕೆಟ್ ತಾರೆಗಳಲ್ಲಿ ಒಬ್ಬರು ರಾಹುಲ್​ ದ್ರಾವಿಡ್​. ಟೆಸ್ಟ್ ಪಂದ್ಯಗಳಲ್ಲಿ 10 ಸಾವಿರಕ್ಕೂ ಅಧಿಕ ರನ್ನುಗಳನ್ನು ಗಳಿಸುವ ಮೂಲಕ ಸಚಿನ್ ತೆಂಡೂಲ್ಕರ್ ಮತ್ತು ಸುನಿಲ್ ಗವಾಸ್ಕರ್ ನಂತರ ಮೂರನೇಯ ಭಾರತೀಯ ಎಂಬ ಹೆಗ್ಗಳಿಕೆ ಇವರದ್ದು.
ಜಾಹೀರಾತು ಒಂದರಲ್ಲಿ ಕನ್ನಡದಿಂದ ಇವರು ಮಾತನಾಡಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್​ ಆಗಿದೆ. ಈ ವಿಡಿಯೋ ಅನ್ನು ವಿರಾಟ್​ ಕೊಹ್ಲಿ ಶೇರ್​ ಮಾಡಿಕೊಂಡಿದ್ದಾರೆ. ಅವರು ಇದನ್ನು ಶೇರ್​ ಮಾಡಿಕೊಳ್ಳಲು ಕಾರಣ, ಅತ್ಯಂತ ಮೃದು ಸ್ವಭಾವದವರು ಎನಿಸಿಕೊಂಡಿರುವ ರಾಹುಲ್​ ದ್ರಾವಿಡ್​ಗೆ ಅತ್ಯಂತ ಕೋಪದಿಂದ ಇದರಲ್ಲಿ ಮಾತನಾಡಿದ್ದಾರೆ. ರಾಹುಲ್​ ಅವರ ಇಂಥ ರೂಪ ನಾವು ನೋಡೇ ಇರಲಿಲ್ಲ ಎಂದು ಕೊಹ್ಲಿ ತಮಾಷೆಯಾಗಿ ಕ್ಯಾಪ್ಷನ್​ ಹಾಕಿದ್ದಾರೆ.
Never seen this side of Rahul bhai 🤯🤣pic.twitter.com/4W93p0Gk7m
— Virat Kohli (@imVkohli)April 9, 2021

ಈ ವಿಡಿಯೋದಲ್ಲಿ ಟ್ರಾಫಿಕ್​ ಜಾಮ್​ನಲ್ಲಿ ಸಿಲುಕಿರುವ ರಾಹುಲ್​ ಮಹಿಳೆ ಸೇರಿದಂತೆ ಅನೇಕ ಮಂದಿಗೆ ಸಿಟ್ಟಿನಿಂದ ಬೈಯುವುದನ್ನು ಕಾಣಬಹುದು. ಬ್ಯಾಟ್​ನಿಂದ ಕಾರಿನ ಗಾಜನ್ನು ಒಡೆಯುತ್ತಿರುವ ಅವರು, ಒಮ್ಮೆ ಕನ್ನಡದಿಂದ ಒಡೆದ್ಹಾ​ಕ್​ಬಿಡ್ತೀನಿ ಎಂದು ಆಕ್ರೋಶದಿಂದ ಹೇಳಿದ್ದಾರೆ.
ಅಸಲಿಗೆ ಇದೇನೂ ನಿಜವಾದ ವಿಡಿಯೋ ಅಲ್ಲ. ಬದಲಿಗೆ ಜಾಹೀರಾತಿಗೆ ಪೂರಕವಾಗಿ ಇಂಥದ್ದೊಂದು ವಿಡಿಯೋ ಮಾಡಲಾಗಿದೆ. ಮೃದು ಸ್ವಭಾವದ ದ್ರಾವಿಡ್​ ಅವರಿಗೂ ಸಿಟ್ಟುಬರುತ್ತದೆ ಎಂದು ಜಾಹೀರಾತನ್ನು ಹೋಲಿಕೆ ಮಾಡಲು ಇದನ್ನು ಬಳಸಲಾಗಿದೆ. ಆದರೆ ಕನ್ನಡಿಗರು ಮಾತ್ರ ಇಂಥ ದೊಡ್ಡ ಸ್ಟಾರ್​ ಬಾಯಲ್ಲಿ ಕನ್ನಡ ಬಂದದ್ದನ್ನು ಕೇಳಿ ಖುಷಿಯಿಂದ ಶೇರ್​ ಮಾಡಿಕೊಳ್ಳುತ್ತಿದ್ದಾರೆ.
ರಾಹುಲ್​ ದ್ರಾವಿಡ್​ಗೆ ಕೋಪ ಉಕ್ಕೇರಿದಾಗ ಬಂತು ಕನ್ನಡದ ನುಡಿ… ‘ಒಡೆದ್​ಹಾಕ್​​ ​​ಬಿಡ್ತೀನಿ….’

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × two =
Remember me
