ನವದೆಹಲಿ:ಕ್ರಿಕೆಟ್​ ಕ್ಷೇತ್ರದ ಪ್ರಮುಖ ಬೆಳವಣಿಗೆಯಲ್ಲಿ, ಭಾರತ ಕ್ರಿಕೆಟ್​ ತಂಡದ ಹೆಡ್​ ಕೋಚ್​ ಸ್ಥಾನವನ್ನು ಅಲಂಕರಿಸಲು ಕರ್ನಾಟಕದ ಹಿರಿಯ ಆಟಗಾರ ರಾಹುಲ್​ ದ್ರಾವಿಡ್​ ಸಮ್ಮತಿ ಸೂಚಿಸಿದ್ದಾರೆ. ದುಬೈನಲ್ಲಿ ಅಕ್ಟೋಬರ್​ 17 ರಿಂದ ನವೆಂಬರ್​ 14 ರವರೆಗೆ ನಡೆಯಲಿರುವ ಟಿ20 ವರ್ಲ್ಡ್​ ಕಪ್​ನ ನಂತರ ಅವರು ಕಾರ್ಯಾರಂಭ ಮಾಡಲಿದ್ದಾರೆ ಎನ್ನಲಾಗಿದೆ.
ಕಳೆದ 6 ವರ್ಷಗಳಿಂದ ಭಾರತದ ಎ ಟೀಂ ಮತ್ತು ಅಂಡರ್​ 19 ಟೀಂಗಳ ಉಸ್ತುವಾರಿ ವಹಿಸಿಕೊಂಡಿರುವ 48 ವರ್ಷದ ದ್ರಾವಿಡ್, ಆರಂಭಿಕವಾಗಿ ಈ ಬಗ್ಗೆ ಹಿಂಜರಿಕೆ ತೋರಿದರು. ಆದರೆ, ನಿನ್ನೆ ಐಪಿಎಲ್​ ಫೈನಲ್ಸ್​ನ ಸಮಯದಲ್ಲಿ ಬಿಸಿಸಿಐ ಅಧ್ಯಕ್ಷ ಸೌರವ್​ ಗಂಗೂಲಿ ಮತ್ತು ಕಾರ್ಯದರ್ಶಿ ಜಯ್​ ಷಾ ಅವರೊಂದಿಗೆ ಮಾತನಾಡಿ ಒಪ್ಪಿಗೆ ಪಡೆಯುವಲ್ಲಿ ಯಶಸ್ವಿಯಾದರು ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ಪಿಟಿಐ ವರದಿ ಮಾಡಿದೆ.
ಇದನ್ನೂ ಓದಿ:ಈ ವರ್ಷ ಐಪಿಎಲ್ ಗೆಲ್ಲಲು ಕೆಕೆಆರ್ ಅರ್ಹವಾಗಿತ್ತು: ಎಂ.ಎಸ್​.ಧೋನಿ
ಭಾರತದ ಜನಪ್ರಿಯ ಬ್ಯಾಟ್ಸ್​ಮನ್​ ಆಗಿದ್ದು, ಹಾಲಿ ಬೆಂಗಳೂರಿನ ನ್ಯಾಷನಲ್ ಕ್ರಿಕೆಟ್​ ಅಕಾಡೆಮಿಯ ಮುಖ್ಯಸ್ಥರಾಗಿರುವ ದ್ರಾವಿಡ್​, ಹೆಡ್​ ಕೋಚ್​ ಸ್ಥಾನಕ್ಕೆ ವಿದಾಯ ಹೇಳುತ್ತಿರುವ ಹಿರಿಯ ಆಟಗಾರ ರವಿ ಶಾಸ್ತ್ರಿ ಅವರ ಸ್ಥಾನ ಪಡೆಯಲಿದ್ದಾರೆ. ರಾಹುಲ್​ ದ್ರಾವಿಡ್​ರ ತರಬೇತಿ ವ್ಯವಸ್ಥೆಯಲ್ಲಿ ಭಾರತಕ್ಕೆ ಈಗಾಗಲೇ ರಿಷಭ್​ ಪಂತ್​, ಅವೇಶ್​ ಖಾನ್​, ಪೃಥ್ವಿ ಶಾ, ಹನುಮ ವಿಹಾರಿ, ಶುಬ್ಮಾನ್​ ಗಿಲ್​ರಂಥ ಆಟಗಾರರು ಲಭಿಸಿದ್ದಾರೆ.(ಏಜೆನ್ಸೀಸ್)
‘ರಾಮನ ಹೆಸರಲ್ಲಿ ಹಣದ ಅವ್ಯವಹಾರ ನಡೆದಿದೆ’ – ಆರ್​ಎಸ್​ಎಸ್​ ವಿರುದ್ಧ ಎಚ್​ಡಿಕೆ ಆರೋಪ

ದುರ್ಗಾ ಪ್ರತಿಮೆಯ ವಿಸರ್ಜನೆಗೆ ತೆರಳುತ್ತಿದ್ದ ಭಕ್ತರ ಮೇಲೆ ಹರಿದ ಕಾರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × two =
Remember me
