ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಜೈಪುರದಲ್ಲಿ ಮಹಿಳಾ ವಿದ್ಯಾರ್ಥಿಗಳು ಹಲವಾರು ಪ್ರಶ್ನೆಗಳನ್ನ ಕೇಳಿದ್ದಾರೆ. ಜೈಪುರದ ಮಹಾರಾಣಿ ಕಾಲೇಜಿನ ವಿದ್ಯಾರ್ಥಿಗಳೊಂದಿಗೆ ರಾಹುಲ್​​ ಗಾಂಧಿ ಸಂವಾದ ನಡೆಸಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.53 ವರ್ಷದ ಮಾಜಿ ಕಾಂಗ್ರೆಸ್ ಅಧ್ಯಕ್ಷರಾದ 53 ವರ್ಷದ ಮಹಿಳೆಯೊಬ್ಬರು ರಾಹುಲ್​ಗೆ ಕೇಳಿರುವ ಪ್ರಶ್ನೆ ಮತ್ತು ಅದಕ್ಕೆ ರಾಹುಲ್​ ನೀಡಿರುವ ಉತ್ತರದ ವಿಡಿಯೋಗೆ ನೆಟ್ಟಿಗರು ಹೆಚ್ಚಿನ ಸಂಖ್ಯೆಯಲ್ಲಿ ಕಾಮೆಂಟ್​​ ಮಾಡುತ್ತಿದ್ದಾರೆ.
ನೀವು ಇಷ್ಟು ಹ್ಯಾಂಡ್​​ಸಮ್​ ಯಂಗ್​ ಮ್ಯಾನ್ ಯಾಕೆ ನೀವು ಮದುವೆಯಾಗುತ್ತಿಲ್ಲ ಎಂದು ರಾಹುಲ್​ ಗಾಂಧಿಗೆ ಮಹಿಳೆ ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಉತ್ತರಿಸಿದ ರಾಹುಲ್​​, ನಾನು ಕಾಂಗ್ರೆಸ್​​ ಪಕ್ಷದ ಕೆಲಸಗಳಲ್ಲಿ ಬ್ಯುಸಿಯಾಗಿದ್ದೇನೆ. ಹಾಗಾಗಿ ನಾನು ಇನ್ನೂ ಮದುವೆಯಾಗಿಲ್ಲ ಎಂದು ಹೇಳಿದ್ದಾರೆ.ಅವರ ನೆಚ್ಚಿನ ತಿನಿಸುಗಳ ಬಗ್ಗೆ ಕೇಳಿದಾಗ, ಹಾಗಲಕಾಯಿ, ಬಟಾಣಿ ಮತ್ತು ಪಾಲಕ್ ಹೊರತುಪಡಿಸಿ ಎಲ್ಲವನ್ನೂ ಚೆನ್ನಾಗಿ ತಿನ್ನುತ್ತೇನೆ ಎಂದು ಅವರು ಹೇಳಿದ್ದಾರೆ.
Some quick questions by students of Maharani College | Jaipur, RajasthanStudent to Rahul Gandhi :- What's your reaction on insta reel meme Khatam tata bye bye !!😀👇 Listen here the anwerspic.twitter.com/aTwZ9yeRBS
ಇನ್ನು ಅವರು ಹೋಗೋಕೆ ಇಷ್ಟ ಪಡುವಂತಹ ನೆಚ್ಚಿನ ಪ್ರವಾಸಿ ತಾಣದ ಬಗ್ಗೆ ಕೇಳಿದಾಗ ನಾನು ಹೋಗದಿರುವ ಎಲ್ಲಾ ಜಾಗಗಳನ್ನೂ ನೋಡುವ ಕುತೂಹಲ ನನಗಿದೆ ಎಂದಿದ್ದಾರೆ.
ನಂತರದಲ್ಲಿ ಅವರಿಗೆ​​ ನೀವು ಮುಖಕ್ಕೆ ಯಾವ ಕ್ರೀಮ್​ ಮತ್ತು ಸೋಪ್​ ಬಳಸುತ್ತೀರಿ ಎಂಬ ಪ್ರಶ್ನೆಯನ್ನೂ ಕೇಳಲಾಯಿತು. ಇದಕ್ಕೆ ಉತ್ತರಿಸಿದ ಅವರು ನಾನು ಏನನ್ನೂ ಹಚ್ಚುವುದಿಲ್ಲ ನೀರಿನಲ್ಲಿ ಮುಖ ತೊಳೆಯುತ್ತೇನೆ ಎಂದಿದ್ದಾರೆ.
ಒಟ್ಟಾರೆಯಾಗಿ ರಾಹುಲ್ ಗಾಂಧಿ ಜತೆ ಸಂವಾದ ನಡೆಸಿದ ಜೈಪುರದ ಮಹಾರಾಣಿ ಕಾಲೇಜಿನ ವಿದ್ಯಾರ್ಥಿನಿಯರು, ರಾಹುಲ್​ ಗಾಂಧಿಗೆ ಸಾಕಷ್ಟು ಪ್ರಶ್ನೆಗಳನ್ನ ಕೇಳಿದ್ದು, ಅದರಲ್ಲಿ ಮದುವೆ ವಿಚಾರ ವೈರಲ್​ ಆಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 1 =
Remember me
