ನವದೆಹಲಿ:ಸಲ್ಮಾನ್​ ಖಾನ್​ ಬಾಲಿವುಡ್​ನ ದಿ ಮೋಸ್ಟ್​ ಎಲಿಜಿಬಿಲ್​ ಬ್ಯಾಚುಲರ್​ ಎಂದರೆ ತಪ್ಪಾಗಲಾರದು. 58 ವರ್ಷವಾದರೂ ಈಗಲೂ ಫಿಟ್​ ಆಗಿರುವ ಸಲ್ಮಾನ್​ ಯಾವುದಾದರೂ ಒಂದು ಕಾರಣಕ್ಕೆ ಸುದ್ದಿಯಾಗುತ್ತಾರೆ ಎಂದರೆ ಅದು ಮದುವೆಯ ವಿಚಾರಕ್ಕೆ. ಬಾಲಿವುಡ್​ನಲ್ಲಿ ಚಿತ್ರದ ಹೊರತಾಗಿ ಮದುವೆಯ ಕಾರಣಕ್ಕೆ ಸಲ್ಮಾನ್​ ಹೇಗೆ ಸುದ್ದಿಯಾಗುತ್ತಾರೋ ಅದೇ ರೀತಿ ರಾಜಕೀಯ ವಲಯದಲ್ಲಿ ರಾಹುಲ್​ ಗಾಂಧಿ ಕೂಡ ಈ ಒಂದು ಕಾರಣಕ್ಕೆ ಆಗಿಂದಾಗೆ ಸೌಂಡ್​ ಮಾಡುತ್ತಿರುತ್ತಾರೆ.
ಸಲ್ಮಾನ್​ ಖಾನ್​ ಹೊರತಾಗಿ ರಾಹುಲ್​ ಗಾಂಧಿ ಕೂಡ ಮದುವೆಯ ವಿಚಾರವಾಗಿ ಆಗಿಂದಾಗೆ ಸೌಂಡ್​ ಮಾಡುತ್ತಿರುತ್ತಾರೆ. ಕೆಲವರ ಹೆಸರು ಕೂಡ ರಾಹುಲ್​ ಜೊತೆ ಆಗಿಂದಾಗೆ ಕೇಳಿ ಬರುತ್ತಿರುತ್ತದೆ. ಕೆಲ ದಿನಗಳ ಹಿಂದಷ್ಟೇ ಕಾಶ್ಮೀರದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದದಲ್ಲಿ ಈ ಕುರಿತು ಮಾತನಾಡಿದ್ದ ರಾಹುಲ್​ ತಾವು ಈ ವಿಚಾರವನ್ನು ಹೇಗೆ ಅವಾಯ್ಡ್​ ಮಾಡುತ್ತಿದ್ದಾರೆ ಮತ್ತು ಅದನ್ನು ಮುಂದುವರೆಸುವುದಾಗಿ ಹೇಳಿದ್ದರು. ಇದೀಗ ರಾಹುಲ್​ ಗಾಂಧಿ ಕಾಂಗ್ರೆಸ್​ ಸಂಸದೆಯನ್ನು ಮದುವೆಯಾಗಲಿದ್ದಾರೆ ಎಂದು ಸುದ್ದಿ ವ್ಯಾಪಕವಾಗಿ ಹರಿದಾಡುತ್ತಿದ್ದು, ಈ ವಿಚಾರ ಸಾಮಾಜಿಕ ಮಾಧ್ಯಮಗಳಲ್ಲಿ ಹೊಸ ಚರ್ಚೆಯನ್ನ ಹುಟ್ಟುಹಾಕಿದೆ.
@RahulGandhiHeartiest congratulations if it's true.My most sincere wish is I want to attend your wedding not. Don't disappoint me pleaseRahul Gandhi, Praniti Shinde To Get Married?https://t.co/pilUDRlsbf
ಇದನ್ನೂ ಓದಿ:ನಟ ದರ್ಶನ್​ ಮನವಿಯನ್ನು ಮಾನ್ಯ ಮಾಡಿದ ಕೋರ್ಟ್​; ಮಾಧ್ಯಮಗಳಲ್ಲಿ ಚಾರ್ಜ್​​ಶೀಟ್​ ಪ್ರಕಟಿಸದಂತೆ ಹೈಕೋರ್ಟ್​ ಸೂಚನೆ
ಸದ್ಯ ಕೇಳಿ ಬಂದಿರುವ ಮಾಹಿತಿ ಪ್ರಕಾರ ಲೋಕಸಭೆಯ ವಿಪಕ್ಷ ನಾಯಕ ರಾಹುಲ್​ ಗಾಂಧಿ ತಮ್ಮ ಪಕ್ಷದ ಸಂಸದೆ, ಮಹಾರಾಷ್ಟ್ರ ಮೂಲದ ಪ್ರಣಿತಿ ಶಿಂಧೆ ಅವರನ್ನು ವಿವಾಹವಾಗಲಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಅಮೆರಿಕಾದ ವಿಮಾನ ನಿಲ್ದಾಣದಲ್ಲಿ ಇವರಿಬ್ಬರು ಜತೆಯಾಗಿ ತೆಗೆಸಿಕೊಂಡಿರುವ ಫೋಟೋ ಈ ಊಹಾಪೋಹಗಳನ್ನು ಹುಟ್ಟು ಹಾಕಿದೆ. ಕೆಲ ದಿನಗಳ ಹಿಂದೆ ಪತ್ರಿಕಾಗೋಷ್ಠಿ ಒಂದರಲ್ಲಿ ಲಾಲು ಪ್ರಸಾದ್​ ಯಾದವ್​ ಕೂಡ ರಾಹುಲ್​ ಮದುವೆ ಬಗ್ಗೆ ಮಾತನಾಡುವ ಮೂಲಕ ಉರಿಯುವ ಬೆಂಕಿಗೆ ಮತ್ತಷ್ಟು ತುಪ್ಪ ಸುರಿದಿದ್ದರು.
ಸಾಮಾಜಿಕ ಜಾಲತಾಣಗಳಲ್ಲಿ ಹುಟ್ಟಿಕೊಂಡಿರುವ ವದಂತಿಗಳ ನಡುವೆಯೇ ರಾಹುಲ್ ಗಾಂಧಿ ಅಥವಾ ಪ್ರಣಿತಿ ಶಿಂಧೆ ಈ ಬಗ್ಗೆ ಇನ್ನೂ ಪ್ರತಿಕ್ರಿಯಿಸಿಲ್ಲ. ಈ ಬಗ್ಗೆ ಇನ್ನಷ್ಟೇ ತಿಳಿಯಬೇಕಿದೆ.
A rumour is spreading very fast on social media, especially YouTube, thatRahul Gandhi and Praniti Shinde are going to get married.Earlier, small people used to spread this rumour to get views on their YouTube channel, but now some serious journalists have also(1/3)pic.twitter.com/d8BNBftyGt
ऑक्टोबरच्या अखेरीस राहुल गांधी एका दलित मुलीशी लग्न करणार असल्याच्या अनेक बातम्या सोशल मीडियावर फिरत आहेत.ती मुलगी म्हणजे देशाचे माजी गृहमंत्री आणि महाराष्ट्राचे माजी मुख्यमंत्री सुशील कुमार शिंदे यांची मुलगी खासदार प्रणिती शिंदे.सत्य काय आहे माहीत नाही पण असे झाले तर भारतीय…pic.twitter.com/7KmytXvbGP

ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
Sign in to your account
Please enter an answer in digits:four + seven =
Remember me
