ಚೆನ್ನೈ:ಒಂದೇ ಪಕ್ಷದ ನಾಯಕರುಗಳ ನಡುವೆ ಭಿನ್ನಾಭಿಪ್ರಾಯಗಳು ಬರುವುದು ಸಹಜ. ಕಾಂಗ್ರೆಸ್​ನಲ್ಲೂ ಆಗಾಗ ಅಂತಹ ಭಿನ್ನಾಭಿಪ್ರಾಯಗಳನ್ನು ನಾವು ನೋಡಿದ್ದೇವೆ. ಪಕ್ಷ ಆಡಳಿತದಲ್ಲಿದ್ದಾಗ ಹೇರಲಾಗಿದ್ದ ನಿಷೇಧವನ್ನು ಲೆಕ್ಕಿಸದೆ ಅದೇ ಕಾರ್ಯಕ್ರಮದಲ್ಲಿ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಕಾಣಿಸಿಕೊಂಡಿದ್ದು, ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.
ಇದನ್ನೂ ಓದಿ:ಚಿಂತೆ, ಒತ್ತಡದಲ್ಲಿದ್ದರೆ ಕರೊನಾ ಲಸಿಕೆಯೂ ಕೆಲಸ ಮಾಡುವುದಿಲ್ಲ! ವಿಜ್ಞಾನಿಗಳ ಎಚ್ಚರಿಕೆ
ತಮಿಳುನಾಡಿನ ಜಲ್ಲಿಕಟ್ಟಿನ ಬಗ್ಗೆ ನಿಮಗೆಲ್ಲರಿಗೂ ತಿಳಿದಿರುತ್ತದೆ. ಶತಮಾನಗಳಿಂದ ಸಾಂಪ್ರದಾಯಿಕವಾಗಿ ನಡೆಸುಕೊಂಡು ಬರಲಾಗುತ್ತಿರುವ ಕಾರ್ಯಕ್ರಮವದು. ಆದರೆ 2011ರಲ್ಲಿ ಯುಪಿಎ ಸರ್ಕಾರ ಜಲ್ಲಿಕಟ್ಟಿಗೆ ನಿಷೇಧ ಹೇರಿತ್ತು. ಜಲ್ಲಿಕಟ್ಟಿನಿಂದಾಗಿ ಪ್ರಾಣಿಗಳ ಮೇಲೆ ದೌರ್ಜನ್ಯವಾಗುತ್ತಿದೆ ಎಂದು ಕಾರಣ ಕೊಟ್ಟಿತ್ತು. ಅಂದಿನಿಂದಲೂ ಕಾಂಗ್ರೆಸ್​ ನಾಯಕರು ಜಲ್ಲಿಕಟ್ಟು ನಿಷೇಧಕ್ಕೆ ಬೆಂಬಲ ಸೂಚಿಸಿಕೊಂಡೇ ಬಂದಿದ್ದಾರೆ. ಆದರೆ ಇದೀಗ ಅದೇ ಪಕ್ಷದ ನಾಯಕ ರಾಹುಲ್​ ಗಾಂಧಿ ಜಲ್ಲಿಕಟ್ಟು ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದಾರೆ.
ಹೌದು! ರಾಹುಲ್​ ಗಾಂಧಿಯವರು ಗುರುವಾರದಂದು ತಮಿಳುನಾಡಿನಲ್ಲಿ ನಡೆದ ಜಲ್ಲಿಕಟ್ಟು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇಷ್ಟೊಂದು ವ್ಯವಸ್ಥಿತವಾಗಿ ಜಲ್ಲಿಕಟ್ಟನ್ನು ನಡೆಸುತ್ತಿರುವುದನ್ನು ನೋಡಿ ಖುಷಿಯಾಗುತ್ತಿದೆ. ಎತ್ತು ಮತ್ತು ಯುವಕರ ಸುರಕ್ಷತೆಯನ್ನು ಕಡೆಗಣಿಸದೆ, ಕಾರ್ಯಕ್ರಮ ನಡೆಸಿರುವುದು ಸಂತಸ ತಂದಿದೆ ಎಂದು ಕಾರ್ಯಕ್ರಮದಲ್ಲಿ ಹೇಳಿದ್ದಾರೆ. ತಮಿಳುನಾಡಿನ ವಿಧಾನಸಭಾ ಚುನಾವಣೆಗೆ ಕೆಲವೆ ತಿಂಗಳು ಬಾಕಿಯಿರುವಾಗ ಈ ರೀತಿ ಪಕ್ಷದ ನಿರ್ಧಾರವನ್ನೇ ಧಿಕ್ಕರಿಸಿ ಮಾತನಾಡಿದ್ದನ್ನು ಕೇಳಿ ಸಾರ್ವಜನಿಕರು ಸೇರಿ ರಾಜಕೀಯ ನಾಯಕರಿಗೂ ಗೊಂದಲವಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್​ನ್ನು ಗೆಲ್ಲಿಸಲು ಇದೊಂದು ವರಸೆಯೇ ಎನ್ನುವ ಚರ್ಚೆಗಳೂ ಆರಂಭವಾಗಿದೆ.
ಇದನ್ನೂ ಓದಿ:ಸ್ಟಾರ್ ಹೋಟೆಲ್​ನಲ್ಲಿ ಕಲರ್-ಕಲರ್ ಕಾಗೆ ಹಾರಿಸೋದೇ ಈತನ ಟ್ಯಾಲೆಂಟ್‌! ಹಣಕ್ಕಾಗಿ ಹೀಗಾ ಮಾಡೋದು?
2011ರಲ್ಲಿ ಯುಪಿಎ ಸರ್ಕಾರ ಜಲ್ಲಿಕಟ್ಟನ್ನು ನಿಷೇಧಿಸಿತ್ತಾರೂ ತಮಿಳು ನಾಡಿನ ಜನರು ಅದನ್ನು ಒಪ್ಪಿರಲಿಲ್ಲ. ರಾಜ್ಯದ ಜಲ್ಲಿಕಟ್ಟು ಕಾಯ್ದೆಯಡಿಯಲ್ಲಿ ಆಚರಣೆಯನ್ನು ಮುಂದುವರಿಸಿದ್ದರು. ಆದರೆ 2014ರಲ್ಲಿ ಸುಪ್ರೀಂ ಕೋರ್ಟ್​ ಜಲ್ಲಿಕಟ್ಟಿಗೆ ನಿಷೇಧ ಹೇರಿತು. ಅದಾದ ನಂತರ 2016ರಲ್ಲಿ ನರೇಂದ್ರ ಮೋದಿಯವರ ಸರ್ಕಾರ ಜಲ್ಲಿಕಟ್ಟು ಆಚರಣೆಗೆ ಪುನಃ ದಾರಿ ಮಾಡಿಕೊಟ್ಟಿತು. (ಏಜೆನ್ಸೀಸ್​)
ಮಗನ ದುರಾಸೆಗೆ ತಂದೆ ಬಲಿ: ಅಂತ್ಯಸಂಸ್ಕಾರ ಮಾಡ್ಬೇಕು ಎಲ್ಲಿದ್ರೂ ಬೇಗ ಬಾ ಮಗನೇ… ತಾಯಿಯ ಗೋಳಾಟ

ಡ್ರಾಪ್ ಕೊಟ್ಟ ಮಹಿಳೆಯ ದೇಹದ ಬಗ್ಗೆ ಕೆಟ್ಟದಾಗಿ ಪ್ರಶ್ನಿಸಿದ ಶಾಲಾ ಬಾಲಕ: ವಿಡಿಯೋ ಹರಿಬಿಟ್ಟ ಸಂತ್ರಸ್ತೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × four =
Remember me
