ಮೇಘಾಲಯ:ಇತ್ತೀಚೆಗೆ ತಮ್ಮ ಭಾರತ ಜೋಡೋ ನ್ಯಾಯ ಯಾತ್ರೆಯನ್ನು ಮಣಿಪುರದಲ್ಲಿ ಪ್ರಾರಂಭಿಸುವ ಮೂಲಕ ಯಾತ್ರೆಗೆ ಚಾಲನೆ ನೀಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ರ‍್ಯಾಲಿಯ ಭಾಗವಾಗಿ ಮೇಘಾಲಯದಲ್ಲಿ ಉಳಿದುಕೊಂಡಿದ್ದಾರೆ. ಇಂದು ಬೆಳಗ್ಗೆ ದಾರಿ ಮಧ್ಯೆ ಸಾಗುವಾಗ ಕಣ್ಣಿಗೆ ಕಂಡ ಅನಾನಸ್​ ನೋಡಿ ವಾಹನ ನಿಲ್ಲಿಸಿದ ರಾಹುಲ್, ಹಣ್ಣನ್ನು ಸೇವಿಸಿ ತೃಪ್ತರಾಗಿದ್ದು, ಈ ಪೈನಾಪಲ್​ಗೆ ನಾನು ಅಭಿಮಾನಿಯಾಗಿದ್ದೇನೆ ಎಂದು ಹೇಳಿದ್ದಾರೆ.
ಇದನ್ನೂ ಓದಿ:ಅಯೋಧ್ಯೆ ರಾಮಮಂದಿರದ ವಿಶೇಷತೆ ಏನು?; ನೀವು ತಿಳಿದುಕೊಳ್ಳಬೇಕಾದ ಕುತೂಹಲಕಾರಿ ಸಂಗತಿಗಳು
ಈ ಬಗ್ಗೆ ಮಾತನಾಡಿದ ರಾಹುಲ್ ಗಾಂಧಿ, “ಇಂದು ಕಾರಿನಲ್ಲಿ ಹೋಗುವಾಗ ರಸ್ತೆಯ ಬದಿಯಲ್ಲಿ ಅಮ್ಮ-ಮಗಳು ಅನಾನಸ್ ಮಾರುತ್ತಿದ್ದರು. ಅದನ್ನು ನೋಡಿದ ಕೂಡಲೇ ವಾಹನ ನಿಲ್ಲಿಸಿ, ಅನಾನಸ್​ ಸೇವಿಸಿದೆ. ನನ್ನ ಇಡೀ ಜೀವನದಲ್ಲಿ ಹಿಂದೆಂದೂ ಇಂತಹ ರುಚಿಕರವಾದ ಅನಾನಸ್ ತಿಂದಿರಲಿಲ್ಲ. ಈ ಹಣ್ಣನ್ನು ಸೇವಿಸಿದ ತಕ್ಷಣ, ನಾನು ನನ್ನ ತಾಯಿಗೆ ಕರೆ ಮಾಡಿ, ನಿಮಗಾಗಿ ವಿಶ್ವದ ಅತ್ಯುತ್ತಮ ಅನಾನಸ್‌ಗಳನ್ನು ತರುತ್ತಿದ್ದೇನೆ ಎಂದು ತಿಳಿಸಿದೆ ಎಂದು ಹೇಳಿದರು.
“ಈ ಹಣ್ಣುಗಳು ಏಕೆ ವಿಶ್ವದ ಅತ್ಯುತ್ತಮ ರುಚಿಯ ಅನಾನಸ್ ಆಗ್ತಿಲ್ಲ? ಇಡೀ ಜಗತ್ತಿಗೆ ಲಭ್ಯವಿದೆ ಮತ್ತು ರಾಜ್ಯಗಳಲ್ಲಿನ ರೈತರು ಅದನ್ನು ಪ್ರಪಂಚದ ಇತರ ಭಾಗಗಳಿಗೆ ಮಾರಾಟ ಮಾಡುವುದರಿಂದ ಏಕೆ ಪ್ರಯೋಜನ ಪಡೆಯುತ್ತಿಲ್ಲ? ಯಾಕಂದ್ರೆ ಮೂಲಸೌಕರ್ಯ ಅಭಿವೃದ್ಧಿಯಾಗದ ಇರುವುದೇ ಇದಕ್ಕೆ ಮುಖ್ಯ ಕಾರಣ ಎಂದು ರಾಹುಲ್ ಹೇಳಿದ್ದಾರೆ,(ಏಜೆನ್ಸೀಸ್).
‘ನಾನು ಅತ್ತರೇ ಸಿಂಪಥಿ! ಇವತ್ತು ನೀವು ಕೇಳಲೇಬೇಕು’; ಸಿಡಿದೆದ್ದ ಪ್ರತಾಪ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − sixteen =
Remember me
