ತಿರುವನಂತಪುರಂ:ಕೇರಳದಲ್ಲಿ ಚುನಾವಣೆಯ ಬಿಸಿ ಹೆಚ್ಚಾಗಿದೆ. ಅದರ ಬೆನ್ನಲ್ಲೇ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಅವರು ಅನಾಥಾಶ್ರಮದ ಮಕ್ಕಳೊಂದಿಗೆ ಈಸ್ಟರ್​ ಹಬ್ಬವನ್ನು ಆಚರಿಸಿದ್ದಾರೆ. ಬಾಡೂಟ ಸವಿಯುತ್ತ, ಮಕ್ಕಳಿಗೆ ಸಹೋದರ ಪ್ರಿಯಾಂಕಾರೊಂದಿಗೆ ವಿಡಿಯೋ ಕಾಲ್​ನಲ್ಲಿ ಮಾತನಾಡಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ.
ವಯನಾಡ್​ನ ಜೀವನ ಜ್ಯೋತಿ ಅನಾಥಾಶ್ರಮದಲ್ಲಿ ಈಸ್ಟರ್​ ಆಚರಣೆಗೆ ಏರ್ಪಾಡು ಮಾಡಲಾಗಿತ್ತು. ರಾಹುಲ್​ ಗಾಂಧಿ ಹಾಗೂ ಪ್ರಿಯಾಂಕಾ ವಾದ್ರಾ ಕಾರ್ಯಕ್ರಮಕ್ಕೆ ಬರಬೇಕಿತ್ತು. ಆದರೆ ಪ್ರಿಯಾಂಕಾ ಅವರ ಪತಿಗೆ ಕರೊನಾ ದೃಢವಾಗಿರುವ ಹಿನ್ನೆಲೆಯಲ್ಲಿ ಅವರು ಕ್ವಾರಂಟೈನ್​ಗೆ ಒಳಪಟ್ಟಿದ್ದಾರೆ. ಆ ಕಾರಣ ಕಾರ್ಯಕ್ರಮಕ್ಕೆ ಬರಲಾಗಿಲ್ಲ ಎಂದು ವಿಡಿಯೋ ಸಂದೇಶವನ್ನು ಅವರು ಹರಿಬಿಟ್ಟಿದ್ದಾರೆ.
ಜೀವನಜ್ಯೋತಿ ಅನಾಥಾಶ್ರಮದ ಮಕ್ಕಳೊಂದಿಗೆ ರಾಹುಲ್​ ಗಾಂಧಿ ಈಸ್ಟರ್​ ಆಚರಿಸಿದ್ದಾರೆ. ಹಬ್ಬದ ಪ್ರಯುಕ್ತ ವಿಶೇಷ ಔತಣಕೂಟವನ್ನು ಆಯೋಜಿಸಲಾಗಿತ್ತು. ಚಿಕನ್​, ಮೊಟ್ಟೆ ಹೀಗೆ ನಾನಾ ಬಗೆಯ ಊಟವನ್ನು ರಾಹುಲ್ ಮಕ್ಕಳೊಂದಿಗೆ ಕುಳಿತು ಸವಿದಿದ್ದಾರೆ. ಈ ಸಮಯದಲ್ಲಿ ಪ್ರಿಯಾಂಕಾ ಅವರಿಗೂ ವಿಡಿಯೋ ಕಾಲ್​ ಮಾಡಿದ್ದಾರೆ. ಮಕ್ಕಳೊಂದಿಗೆ ಅವರನ್ನು ಮಾತನಾಡಿಸಿದ್ದಾರೆ. (ಏಜೆನ್ಸೀಸ್​)
#WATCH| Congress leader Rahul Gandhi had#Easterlunch with children at Jeevan Jyothi Orphanage in Kalpetta area of Kerala's Wayanad today. During lunch, some children talked to party leader Priyanka Gandhi Vadra on Rahul's phone.pic.twitter.com/g5Px4PgWU6
— ANI (@ANI)April 4, 2021

ಯೋಧರ ಪ್ರಾಣ ತೆಗೆದ ನಕ್ಸಲರಿಗೆ ತಕ್ಕ ಪಾಠ ಕಲಿಸದೆ ಬಿಡಲಾಗದು! ಕ್ರಮಕ್ಕೆ ಸಿದ್ಧರಾದ ಅಮಿತ್​ ಷಾ

ಬೀದಿಯಲ್ಲಿ ಮಸ್ತ್​ ಡ್ಯಾನ್ಸ್​ ಮಾಡಿದ ನಟಿ ಸುಹಾಸಿನಿ ಹಾಗೂ ಅಕ್ಷರಾ ಹಾಸನ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve − three =
Remember me
