ನವದೆಹಲಿ: ಎಐಸಿಸಿಯಲ್ಲಿ ಆಮೂಲಾಗ್ರ ಬದಲಾವಣೆ ತರಬೇಕೆಂದು ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿಯವರಿಗೆ ಪತ್ರ ಬರೆದವರು ಬಿಜೆಪಿ ಜತೆಗೆ ಸೇರ್ಕೊಂಡು ಕುತಂತ್ರ ಮಾಡ್ತಿದ್ದಾರೆ ಎಂದು ರಾಹುಲ್ ಗಾಂಧಿ ನೇರವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವರ್ಚುವಲ್ ಆಗಿ ನಡೆಯುತ್ತಿರುವ ಕಾಂಗ್ರೆಸ್ ವರ್ಕಿಂಗ್ ಕಮಿಟಿ ಸಭೆಯಲ್ಲಿ, ಪತ್ರ ಬರೆದ ಸಮಯ, ಸಂದರ್ಭ, ಸನ್ನಿವೇಶಗಳನ್ನು ವಿಶ್ಲೇಷಿಸುತ್ತ ಹೋದ ರಾಹುಲ್ ಗಾಂಧಿಯವರ ಆಕ್ರೋಶ ಪಕ್ಷದ ಹಿರಿಯ ನಾಯಕರನ್ನು ಕುತಂತ್ರಿಗಳು ಎಂದು ಕರೆಯುವ ಹಂತಕ್ಕೆ ಹೋಗಿಬಿಟ್ಟಿದೆ. ಭಿನ್ನಮತೀಯರ ಪತ್ರ ಅಭಿಯಾನದ ನಡೆ ನನಗೆ ಬಹಳ ನೋವು ಉಂಟುಮಾಡಿದೆ ಎಂದು ಹೇಳಿಕೊಂಡ ರಾಹುಲ್ ಗಾಂಧಿ ಪತ್ರ ಬರೆದವರಿಗೆ,1. ಸೋನಿಯಾ ಗಾಂಧಿಯವರು ಆಸ್ಪತ್ರೆಗೆ ದಾಖಲಾದ ಸಂದರ್ಭದಲ್ಲೇ ಪಕ್ಷದ ನಾಯಕತ್ವದ ವಿಚಾರವಾಗಿ ಯಾಕೆ ಪತ್ರ ಬರೆದಿರಿ?2. ಇಂತಹ ಸನ್ನಿವೇಶದಲ್ಲೇ ಯಾಕೆ ಕಾಂಗ್ರೆಸ್ ನಾಯಕತ್ವ, ಪಕ್ಷದ ಆಂತರಿಕ ಸಂಘಟನಾತ್ಮಕ ವಿನ್ಯಾಸ ಬದಲಾವಣೆಗೆ ಯಾಕೆ ಬೇಡಿಕೆ ಮುಂದಿಟ್ರಿ?3. ಬಿಜೆಪಿ ಜತೆ ಸೇರಿಕೊಂಡು ಕುತಂತ್ರ ಮಾಡ್ತಿದ್ದೀರಿ ಅಲ್ವ?ಮುಂತಾದ ಕೆಲವು ಪ್ರಶ್ನೆಗಳನ್ನು ಕೇಳಿದ್ದಾರೆ. ಈ ಬೆಳವಣಿಗೆಯೊಂದಿಗೆ ಕಾಂಗ್ರೆಸ್ ನೊಳಗಿನ ಭಿನ್ನಮತ ಭಾರಿ ಸದ್ದಿನೊಂದಿಗೆ ಸ್ಫೋಟವಾದಂತಾಗಿದೆ ಎಂಬ ಚರ್ಚೆ ರಾಜಕೀಯ ಚಿಂತಕರ ಚಾವಡಿಯಲ್ಲಿ ನಡೆದಿದೆ.
ಇದನ್ನೂ ಓದಿ:ಯಾರಿಗೆ ಕೀಲಿ’ಕೈ’?; ಹೊಸ ನಾಯಕತ್ವಕ್ಕೆ ಸೋನಿಯಾ ಸೂಚನೆ
ಸಿಡಬ್ಲುಸಿ ಆರಂಭವಾಗುತ್ತಲೇ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿಯವರು ತಮ್ಮಸ್ಥಾನಕ್ಕೆ ರಾಜೀನಾಮೆ ಘೋಷಿಸಿ ಹೊಸ ನಾಯಕನನ್ನು ಆಯ್ಕೆ ಮಾಡಿಕೊಳ್ಳಿ ಎಂದು ಹೇಳಿದ್ದಾರೆ. ಆಗ, ಡಾ.ಮನಮೋಹನ್ ಸಿಂಗ್, ಎ.ಕೆ.ಆ್ಯಂಟನಿ ಮುಂತಾದವರು ಅಧ್ಯಕ್ಷರಾಗಿ ಮುಂದುವರಿಯುವಂತೆ ಸೋನಿಯಾರನ್ನು ಕೇಳಿಕೊಂಡಿದ್ದಾರೆ. ಇನ್ನು ಕೆಲವರು ರಾಹುಲ್ ಗಾಂಧಿ ಅಧ್ಯಕ್ಷರಾಗಲಿ ಎಂದಿದ್ದಾರೆ. (ಏಜೆನ್ಸೀಸ್)
ಹಂಗಾಮಿ ಅಧ್ಯಕ್ಷ ಸ್ಥಾನದಿಂದ ನನ್ನ ರಿಲೀವ್ ಮಾಡಿ ಅಂದ್ರು ಸೋನಿಯಾ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × one =
Remember me
