ನವದೆಹಲಿ:ಸತತ ಮೂರನೇ ಬಾರಿಗೆ ಮೋದಿ ಸರ್ಕಾರ ರಚನೆಯಾದ ನಂತರ ಜೂನ್ 24 ರಿಂದ ಜುಲೈ 3ರವರೆಗೆ ಸಂಸತ್ತಿನ ವಿಶೇಷ ಅಧಿವೇಶನ ನಡೆಯುತ್ತಿದೆ. ಅಧಿವೇಶನ ಪ್ರಾರಂಭವಾದ ಬಳಿಕ ಲೋಕಸಭೆಗೆ ನೂತನವಾಗಿ ಆಯ್ಕೆಯಾದ ಸಂಸದರ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಿತು. ಇದಾದ ಬಳಿಕ ಸಂಸತ್ತಿನ ಜಂಟಿ ಅಧಿವೇಶನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಭಾಷಣ ಮಾಡಲಾಗಿದ್ದು, ಇದೀಗ ರಾಷ್ಟ್ರಪತಿಗಳ ಭಾಷಣಕ್ಕೆ ಧನ್ಯವಾದ ನಿರ್ಣಯದ ಕುರಿತು ಚರ್ಚೆ ನಡೆಯುತ್ತಿದೆ.
ಇದನ್ನು ಓದಿ:ಮನ್​ ಕಿ ಬಾತ್​; ಕಬ್ಬನ್​ಪಾರ್ಕ್​​ನಲ್ಲಿ ನಡೆಯುವ ವೀಕೆಂಡ್​ ಸಂಸ್ಕೃತ ಕಾರ್ಯಕ್ರಮದ ಬಗ್ಗೆ ಮೋದಿ ಮೆಚ್ಚುಗೆ
ಈ ಸಂದರ್ಭದಲ್ಲಿ I.N.D.I.A ಮೈತ್ರಿಕೂಟದ ಸದಸ್ಯರು ಸೋಮವಾರ (ಜುಲೈ 1) ಲೋಕಸಭೆಯಲ್ಲಿ ಪ್ರತ್ಯೇಕವಾಗಿ ಒಂದು ದಿನ ನೀಟ್ ಪತ್ರಿಕೆ ಸೋರಿಕೆ ವಿಷಯದ ಚರ್ಚೆಗೆ ಅವಕಾಶ ನೀಡುವಂತೆ ಒತ್ತಾಯಿಸಿದರು. ಹಾಗೂ ವಿರೋಧ ಪಕ್ಷದ ನಾಯಕ ರಾಹುಲ್​ಗಾಂಧಿ, ನೀಟ್ ಕುರಿತು ಒಂದು ದಿನದ ಚರ್ಚೆಯನ್ನು ಬಯಸಿದ್ದೇವೆ. ನೀಟ್​ ವಿಷಯ ಸಂಸತ್ತಿಗೆ ಮುಖ್ಯವಾಗಿದೆ. 70 ಪ್ರಕರಣಗಳಲ್ಲಿ ಪೇಪರ್ ಸೋರಿಕೆಯಾಗಿದೆ. ಇದರಿಂದ ಎರಡು ಕೋಟಿಗೂ ಹೆಚ್ಚು ವಿದ್ಯಾರ್ಥಿಗಳು ತೊಂದರೆಗೀಡಾಗಿದ್ದಾರೆ. ಈ ವಿಷಯದ ಬಗ್ಗೆ ಪ್ರತ್ಯೇಕ ಚರ್ಚೆಗೆ ನೀವು ಅವಕಾಶ ನೀಡಿದರೆ ಸಂತೋಷವಾಗುತ್ತದೆ ಎಂದು ಹೇಳಿದರು.
ರಾಹುಲ್​ ಗಾಂಧಿ ಅವರ ಬೇಡಿಕೆಗೆ ಪ್ರತಿಕ್ರಿಯಿಸಿದ ರಕ್ಷಣಾ ಸಚಿವ ರಾಜನಾಥ್​ ಸಿಂಗ್​​, ಸಂಸತ್ತಿನ ಕಲಾಪಗಳು ಕೆಲವು ನಿಯಮಗಳು ಮತ್ತು ಸಂಪ್ರದಾಯಗಳ ಆಧಾರದ ಮೇಲೆ ನಡೆಯುತ್ತವೆ. ನಾನು ದಶಕಗಳ ಕಾಲ ಸಂಸದನಾಗಿದ್ದ ಅವಧಿಯಲ್ಲಿ ರಾಷ್ಟ್ರಪತಿಗಳ ಭಾಷಣಕ್ಕೆ ಧನ್ಯವಾದ ಸಲ್ಲಿಸುವ ಸಂದರ್ಭದಲ್ಲಿ ಬೇರೆ ಯಾವುದೇ ವಿಷಯ ಪ್ರಸ್ತಾಪವಾಗಿಲ್ಲ. ಧನ್ಯವಾದ ನಿರ್ಣಯ ಅಂಗೀಕರಿಸಿದ ನಂತರ ಇತರ ಸಮಸ್ಯೆಗಳನ್ನು ಎತ್ತಬಹುದು ಎಂದರು.
ಧನ್ಯವಾದ ನಿರ್ಣಯದ ಮೇಲಿನ ಚರ್ಚೆಯ ನಂತರ ಸದನವು ಈ ವಿಷಯವನ್ನು ಚರ್ಚಿಸಬೇಕೆಂದು ವಿರೋಧ ಪಕ್ಷದ ನಾಯಕರು ಒತ್ತಾಯಿಸಿದರು ಮತ್ತು ಸರ್ಕಾರದಿಂದ ಭರವಸೆಯನ್ನು ಕೋರಿದರು. ಆದರೆ ವಂದನಾ ನಿರ್ಣಯದ ಮೇಲಿನ ಚರ್ಚೆಯ ಸಂದರ್ಭದಲ್ಲಿ ಬೇರೆ ಯಾವುದೇ ಚರ್ಚೆಯನ್ನು ಕೈಗೆತ್ತಿಕೊಳ್ಳುವ ಸಂಪ್ರದಾಯವಿಲ್ಲ ಮತ್ತು ಸದಸ್ಯರು ನೀಟ್ ಕುರಿತು ಚರ್ಚೆಗೆ ಪ್ರತ್ಯೇಕ ನೋಟಿಸ್ ನೀಡಬಹುದು ಎಂದು ಸ್ಪೀಕರ್ ಓಂ ಬಿರ್ಲಾ ಹೇಳಿದರು.
ಬಿಜೆಪಿ ಸಂಸದ ಅನುರಾಗ್ ಠಾಕೂರ್ ಅವರನ್ನು ವಂದನಾ ನಿರ್ಣಯದ ಮೇಲಿನ ಚರ್ಚೆಯನ್ನು ಆರಂಭಿಸುವಂತೆ ಸಭಾಪತಿ ಕೇಳಿದಾಗ ಪ್ರತಿಪಕ್ಷಗಳು ಸರ್ಕಾರದಿಂದ ಸ್ಪಷ್ಟ ಭರವಸೆ ನೀಡುವಂತೆ ಒತ್ತಾಯಿಸಿ ಲೋಕಸಭೆಯಿಂದ ಹೊರನಡೆದವು. (ಏಜೆನ್ಸೀಸ್​​)
ಅತಿ ಹೆಚ್ಚು ಸ್ವೀಟ್ಸ್​ ತಿನ್ನುವುದರಿಂದ ಕ್ಯಾಲೋರಿ ಹೆಚ್ಚಾಗುತ್ತದೆ ಎಂಬ ಭಯವೇ..? ಕಡಿಮೆ ಮಾಡಲು ಇಲ್ಲಿದೆ ಸಿಂಪಲ್​ ಟಿಪ್ಸ್​​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 + two =
Remember me
