ನವದೆಹಲಿ:ಕಾಂಗ್ರೆಸ್ ನಾಯಕ, ಸಂಸದ ರಾಹುಲ್ ಗಾಂಧಿ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸ ನೀಡಲು ಬುಧವಾರ ಬ್ರಿಟನ್‌ಗೆ ಆಗಮಿಸಿದ್ದಾರೆ. ರಾಹುಲ್ ಗಾಂಧಿ ಬ್ರಿಟನ್​ಗೆ ತೆರಳುವ ಮುನ್ನ ತಮ್ಮ ಲುಕ್​ನಲ್ಲಿ ಬದಲಾವಣೆ ಮಾಡಿಕೊಂಡಿದ್ದು, ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ಪ್ರಸಿದ್ಧಿ ಪಡೆದುಕೊಂಡಿದ್ದ ತಮ್ಮ ಗಡ್ಡವನ್ನು ಟ್ರಿಮ್ ಮಾಡಿಕೊಂಡಿದ್ದಾರೆ.
ಉಪನ್ಯಾಸ ನೀಡಲು ತೆರಳುತ್ತಿದ್ದಂತೆ ರಾಹುಲ್ ಗಾಂಧಿ ಲುಕ್ ಬದಲಾಗಿದೆ. ಟೀ-ಶರ್ಟ್ ಕಳಚಿಟ್ಟು ಕೋಟು, ಟೈ ಧರಿಸಿ ಮಿಂಚುತ್ತಿದ್ದಾರೆ. ರಾಹುಲ್ ಗಾಂಧಿ ಭಾರತ್ ಜೋಡೊ ಯಾತ್ರೆ ಕೊನೆಗೊಳ್ಳುವವರೆಗೆ ತಮ್ಮ ಗಡ್ಡ ಟ್ರಿಮ್ ಮಾಡಿಸಿಕೊಂಡಿರಲಿಲ್ಲ. ಈ ಲುಕ್ ಸಾಕಷ್ಟು ಪ್ರಸಿದ್ಧಿ ಪಡೆದುಕೊಂಡಿತ್ತು ಮತ್ತು ಟ್ರೋಲ್​ಗೂ ಒಳಗಾಗಿತ್ತು. ಇದೀಗ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸ ನೀಡಲು ತೆಳಿರುವ ರಾಹುಲ್, ತಮ್ಮ ಕೂದಲು ಹಾಗೂ ಗಡ್ಡಕ್ಕೆ ಕತ್ತರಿ ಪ್ರಯೋಗ ಮಾಡಿದ್ದಾರೆ. ಸದ್ಯ ರಾಹುಲ್ ಗಾಂಧಿಯ ಹೊಸ ಲುಕ್​ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
Our@CambridgeMBAprogramme is pleased to welcome#India's leading Opposition leader and MP@RahulGandhiof the Indian National Congress.He will speak today as a visiting fellow of@CambridgeJBSon the topic of "Learning to Listen in the 21st Century".pic.twitter.com/4sTysYlYbC— Cambridge Judge (@CambridgeJBS)February 28, 2023
Our@CambridgeMBAprogramme is pleased to welcome#India's leading Opposition leader and MP@RahulGandhiof the Indian National Congress.He will speak today as a visiting fellow of@CambridgeJBSon the topic of "Learning to Listen in the 21st Century".pic.twitter.com/4sTysYlYbC
ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ರಾಹುಲ್ ಗಾಂಧಿ, ಸದ್ದಾಂ ಹುಸೇನ್‌ನಂತೆ ಕಾಣುತ್ತಿದ್ದಾರೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಲೇವಡಿ ಮಾಡಿದ್ದರು. ಈ ಟೀಕೆಗೆ ತಿರುಗೇಟು ನೀಡಿದ್ದ ಕಾಂಗ್ರೆಸ್ ನಿಮ್ಮ ನಾಯಕ ಮೋದಿ ಗಡ್ಡ ಬಿಟ್ಟಿದ್ದಾಗ ನಾವು ಏನೂ ಹೇಳಿರಲಿಲ್ಲ ಎಂದು ಹೇಳಿತ್ತು. (ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 + 7 =
Remember me
