ನವದೆಹಲಿ: ರಾಹುಲ್​ ಗಾಂಧಿಯವರು ಕಾಂಗ್ರೆಸ್​ ಅಧ್ಯಕ್ಷನ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಸೋನಿಯಾ ಗಾಂಧಿಯವರೇ ಮಧ್ಯಂತರ ಅಧ್ಯಕ್ಷೆ ಸ್ಥಾನಕ್ಕೇರಿದ್ದಾರೆ. ಅವರ ಅವಧಿ ಆಗಸ್ಟ್​ನಲ್ಲಿ ಮುಕ್ತಾಯವಾಗಲಿದ್ದು, ಈಗಾಗಲೇ ಪಕ್ಷದ ಹಲವು ನಾಯಕರು ಮತ್ತೊಮ್ಮೆ ರಾಹುಲ್​ ಗಾಂಧಿಯೇ ಅಧ್ಯಕ್ಷರಾಗಲಿ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ಇದೀಗ ಕಾಂಗ್ರೆಸ್​ ಸಂಸದ ಶಶಿ ತರೂರ್​ ಅವರೂ ಕೂಡ ಇದೇ ಮಾತನ್ನು ಹೇಳಿದ್ದಾರೆ.
ಪಕ್ಷಕ್ಕೆ ಶೀಘ್ರವಾಗಿ ಪೂರ್ಣಾವಧಿ ಅಧ್ಯಕ್ಷರ ನೇಮಕವಾಗಬೇಕು. ಕಾಂಗ್ರೆಸ್​ ಸಿದ್ಧಾಂತ ರಹಿತ, ನೆಲೆಯಿಲ್ಲದ ಪಕ್ಷ. ಅಸಮರ್ಥ ಪ್ರತಿಪಕ್ಷ ಎಂದೇ ಅನೇಕರು ಗ್ರಹಿಸುತ್ತಿದ್ದಾರೆ. ಮಾಧ್ಯಮಗಳೂ ಇದೇ ಆಯಾಮದಲ್ಲಿ ಸುದ್ದಿ, ವಿಶ್ಲೇಷಣೆಗಳು ಬಿತ್ತರವಾಗುತ್ತಿವೆ. ಪಕ್ಷ ಇದರಿಂದ ಹೊರಬರಬೇಕು, ಜನರಲ್ಲಿ ನಂಬಿಕೆ ಹುಟ್ಟಿಸಬೇಕು ಎಂದರೆ ಕೂಡಲೇ ಪೂರ್ಣಾವಧಿಯ ಅಧ್ಯಕ್ಷನ ನೇಮಕವಾಗಬೇಕು ಎಂದು ಪ್ರತಿಪಾದಿಸಿದ್ದಾರೆ.
ರಾಹುಲ್​ ಗಾಂಧಿಯವರಿಗೆ ಖಂಡಿತ ಪಕ್ಷವನ್ನು ಮುನ್ನಡೆಸುವ ಕೆಚ್ಚು, ಸಾಮರ್ಥ್ಯ ಇದೆ. ಹಾಗಾಗಿ ಮತ್ತೊಮ್ಮೆ ಅವರು ಕಾಂಗ್ರೆಸ್​ ಅಧ್ಯಕ್ಷ ಸ್ಥಾನ ಏರಲು ಒಲವು ತೋರಿಸಬೇಕು ಎಂದು ಶಶಿ ತರೂರ್​ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ಇದೀಗ ಮತ್ತೊಮ್ಮೆ ಸೋನಿಯಾ ಗಾಂಧಿಯವರೇ ಮಧ್ಯಂತರ ಅವಧಿಗೆ ಪಕ್ಷದ ಅಧ್ಯಕ್ಷೆಯಾಗಬೇಕು. ಎಲ್ಲ ಹೊರೆ ಹೊರಬೇಕು ಎಂದು ನಿರೀಕ್ಷೆ ಮಾಡುವುದು ಸರಿಯಲ್ಲ ಎಂದೂ ಹೇಳಿದ್ದಾರೆ.ಇದನ್ನೂ ಓದಿ:ಆಟವಾಡುತ್ತಿದ್ದ ಮಕ್ಕಳ ಮೇಲೆ ಕುಸಿದ ಮೇಲ್ಛಾವಣಿ; ಓರ್ವ ಬಾಲಕ ಸಾವು, ಮೂವರಿಗೆ ಗಂಭೀರ ಗಾಯ
ಈ ಬಾರಿ ರಾಹುಲ್​ ಗಾಂಧಿಯವರೇನಾದರೂ ಅಧ್ಯಕ್ಷನಾಗಲು ಒಪ್ಪದೆ ಇದ್ದರೆ, ಬೇರೆ ಅಧ್ಯಕ್ಷರನ್ನು ನೇಮಕ ಮಾಡಲು ಕಾಂಗ್ರೆಸ್​ ಗಂಭೀರವಾಗಿ ಯೋಚಿಸಬೇಕು ಮತ್ತು ಆ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ರಾಹುಲ್​ ಗಾಂಧಿಯವರು ಕಳೆದ ಲೋಸಕಭಾ ಚುನಾವಣೆಯ ನಂತರ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅವರ ನಂತರ ಸೋನಿಯಾ ಗಾಂಧಿಯವರು ಅನಿರ್ಧಿಷ್ಟಾವಧಿಗೆ ಅಧ್ಯಕ್ಷೆಯಾಗಿದ್ದರು. ನಾಳೆ ಆಗಸ್ಟ್​ 10ರಂದು ಈ ಅವಧಿ ಮುಕ್ತಾಯಗೊಳ್ಳಲಾಗಿದೆ. (ಏಜೆನ್ಸೀಸ್​)
ಸುಶಾಂತ್​ ಸಹೋದರಿಯ ಎಫ್​ಡಿಯಿಂದ 2.63 ಕೋಟಿ ರೂ. ಸಿಎಗೆ ವರ್ಗಾವಣೆ, ಇಡಿ ವಿಚಾರಣೆಯಲ್ಲಿ ಬಾಯ್ಬಿಟ್ಟ ರಿಯಾ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − 7 =
Remember me
