ಬೆಂಗಳೂರು:ಉತ್ತರ ಪ್ರದೇಶದ ಪೊದೆಯೊಂದರಲ್ಲಿ ಕಾಂಗ್ರೆಸ್ ನಾಯಕ ರಾಹುಲ್​ ಗಾಂಧಿ ಬಿದ್ದ ವಿಡಿಯೋವೊಂದು ಇದೀಗ ವೈರಲ್​ ಆಗುತ್ತಿದೆ. ಮತ್ತೊಂದೆಡೆ ರಾಹುಲ್​ ಹಾಗೆ ಪೊದೆಯಲ್ಲಿ ಕಾಣಿಸಿದ ಹಿನ್ನೆಲೆಯ ಬಗ್ಗೆಯೂ ಭಾರಿ ಚರ್ಚೆ ನಡೆಯುತ್ತಿದೆ.
ಉತ್ತರ ಪ್ರದೇಶದ ಹತ್ರಾಸ್​ನಲ್ಲಿ ನಡೆದ ಅತ್ಯಾಚಾರ ಪ್ರಕರಣ ಸಂಬಂಧ ಸೋದರಿ ಪ್ರಿಯಾಂಕಾ ವಾಧ್ರಾ ಹಾಗೂ ಕಾಂಗ್ರೆಸ್​ನ ಇತರ ಹಲವು ನಾಯಕರೊಂದಿಗೆ ರಾಹುಲ್​ ಗುರುವಾರ ಅಲ್ಲಿಗೆ ತೆರಳಿದ್ದರು. ಆದರೆ ಮಾರ್ಗಮಧ್ಯೆ ಪೊಲೀಸರು ಅವರ ವಾಹನ ತಡೆದಿದ್ದರು. ಅದಾಗ್ಯೂ ವಾಹನದಿಂದ ಇಳಿದು ಹತ್ರಾಸ್​ನತ್ತ ಸಾಗಿದ ರಾಹುಲ್​ ಮತ್ತಿತರರನ್ನು ಪೊಲೀಸರು ತಡೆಯುವ ಸಂದರ್ಭದಲ್ಲಿ ಮಾತಿನ ಚಕಮಕಿ ಜತೆಗೆ ನೂಕಾಟವೂ ಉಂಟಾಗಿತ್ತು.
ಪೊಲೀಸರು ತಡೆದರೂ ಮುಂದೆ ಹೋಗಲು ಯತ್ನಿಸಿದ ರಾಹುಲ್​ ಕೆಲವೇ ಕ್ಷಣದಲ್ಲಿ ಪಕ್ಕದ ಪೊದೆಗೆ ಬಿದ್ದ ದೃಶ್ಯ ವೈರಲ್​ ಆಗುತ್ತಿರುವ ವಿಡಿಯೋದಲ್ಲಿ ಸೆರೆಯಾಗಿದೆ. ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ರಾಹುಲ್​ ತಮ್ಮನ್ನು ಪೊಲೀಸರು ತಳ್ಳಿದರು ಎಂದು ಆರೋಪಿಸಿದ್ದಾರೆ. ಆದರೆ ಪೊಲೀಸರು ತಳ್ಳಿಲ್ಲ, ರಾಹುಲ್​ ಅವರೇ ಪೊದೆಗೆ ನೆಗೆದಿದ್ದಾರೆ ಎಂದು ನೆಟ್ಟಿಗರು ಹೇಳುತ್ತಿದ್ದು, ವಿಡಿಯೋ ಕೂಡ ಅದಕ್ಕೆ ಪುಷ್ಟಿ ನೀಡುವಂತೆಯೇ ಇದೆ. ಇನ್ನೂ ಈ ಬಗ್ಗೆ ಚರ್ಚೆ ಆಗುತ್ತಿದ್ದು, ವಿಡಿಯೋ ವೈರಲ್​ ಆಗುತ್ತಿದೆ.
https://www.facebook.com/VVani4U/posts/3822111524483484?__cft__[0]=AZVqCogdr8AdD26gU-InTOi_8COnkNM5Y9CeFmptHxAcP4sUDYCV5N6uX3Kuw5aeZqrgJTTkwJZZd9NwBplLDs3xfy1cT3wjLXRLLWi_N3uE41z5fCwFbu9GYYgfkebSsiBZflMNh61IoSDrsNxE9iO8RqDA3DXC6PcMImXFn53d3M-2bYKny5r4h63_VImNXxO1maLFw1MQnVZS6tWtthNF&__tn__=%2CO%2CP-R
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four + 15 =
Remember me
