ನವದೆಹಲಿ:ಕಾಂಗ್ರೆಸ್ ಮುಖಂಡ, ವಯನಾಡ್ ಸಂಸದ ರಾಹುಲ್ ಗಾಂಧಿ ಕೂಲಿ ಕಾರ್ಮಿಕರ ಜತೆ ಸಂವಾದ ನಡೆಸಿ ನಂತರ ಕೂಲಿ ಕಾರ್ಮಿಕರಂತೆ ಸೂಟ್​ಕೇಸ್​​ನ್ನು ತಲೆ ಮೇಲೆ ಹೊತ್ತು ಹೋಗುತ್ತಿರವ ವಿಡಿಯೋ ಹಾಗೂ ಸೋಶಿಯಲ್​​​ ಮೀಡಿಯಾದಲ್ಲಿ ವೈರಲ್​ ಆಗಿದೆ.
#WATCH| Delhi: Congress MP Rahul Gandhi visits Anand Vihar ISBT, speaks with the porters and also wears their uniform and carries the loadpic.twitter.com/6rtpMnUmVc
— ANI (@ANI)September 21, 2023

ಆನಂದ್ ವಿಹಾರ್ ಐಎಸ್ ಬಿಟಿಯಲ್ಲಿ ಹಮಾಲಿಗಳನ್ನು ಭೇಟಿ ಮಾಡುವಾಗ ಅವರು ಕೆಂಪು ಶರ್ಟ್ ಮತ್ತು ಬ್ಯಾಡ್ಜ್ ಧರಿಸಿದ್ದಲ್ಲದೆ, ಸೈಟ್​ಕೇಸ್​​ ಹೊತ್ತಿದ್ದರು. ರಾಹುಲ್ ಗಾಂಧಿ ಅವರನ್ನು ನೂರಾರ ಹಮಾಲಿಗಳು ಸುತ್ತುವರೆದಿದ್ದರು. ದೆಹಲಿಯ ಆನಂದ್ ವಿಹಾರ್ ರೈಲ್ವೆ ನಿಲ್ದಾಣದಲ್ಲಿ ರಾಹುಲ್ ಗಾಂಧಿ ಸರಳ ಕಾರ್ಮಿಕನಂತೆ ಸೂಟ್ ಧರಿಸಿರುವ ಫೋಟೋಗಳು ಮತ್ತು ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ.
ಆನಂದ್ ವಿಹಾರ್ ರೈಲು ನಿಲ್ದಾಣದಲ್ಲಿ ಹಮಾಲರನ್ನು ಭೇಟಿ ಮಾಡಿದ ರಾಹುಲ್ ಗಾಂಧಿ ಅವರ ಬಳಿ ಕುಳಿತು ಅವರ ಕಷ್ಟಗಳನ್ನು ಕೇಳಿದರು. ರೈಲ್ವೇ ಕಾರ್ಮಿಕರಂತೆ ಕೆಂಪು ಬಣ್ಣದ ಶರ್ಟ್ ಧರಿಸಿದ್ದರು. ಅವರು ತಮ್ಮ ಕೈಯಲ್ಲಿ ಪೋರ್ಟರ್ ಬ್ಯಾಡ್ಜ್‌ಗಳನ್ನು ಮತ್ತು ತಲೆಯ ಮೇಲೆ ಸೂಟ್ ಕೇಸ್‌ಗಳನ್ನು ಹೊತ್ತು ಸಾಗಿದ್ದಾರೆ.
ರಾಹುಲ್ ಗಾಂಧಿ ತಮ್ಮ ಬಳಿ ಬಂದು ತಮ್ಮ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡಿದ್ದರಿಂದ ಹಮಾಲರೆಲ್ಲರೂ ಸಂತಸ ವ್ಯಕ್ತಪಡಿಸಿದರು. ರಾಹುಲ್ ಜೊತೆ ಸೆಲ್ಫಿ ತೆಗೆದುಕೊಂಡರು. ಹಮಾಲರು ರಾಹುಲ್ ಗಾಂಧಿಯನ್ನು ಹೊಗಳಿ ಘೋಷಣೆಗಳನ್ನು ಕೂಗಿದರು. ಈ ವಿಡಿಯೋವನ್ನು ಕಾಂಗ್ರೆಸ್ ಟ್ವಿಟರ್‌ನಲ್ಲಿ ಹಂಚಿಕೊಂಡಿದೆ. ಸಾರ್ವಜನಿಕ ನಾಯಕ ರಾಹುಲ್ ಗಾಂಧಿ ಅವರು ಆನಂದ್ ವಿಹಾರ್ ರೈಲು ನಿಲ್ದಾಣದಲ್ಲಿ ಹಮಾಲರನ್ನು ಭೇಟಿ ಮಾಡಿದ್ದಾರೆ ಎಂದು ಅದು ಹೇಳಿದೆ. ಮತ್ತೊಮ್ಮೆ ಭಾರತ್ ಜೋಡೋ ಯಾತ್ರೆ ನಡೆಯಲಿದೆ ಎಂದು ಕಾಂಗ್ರೆಸ್ ಹೇಳಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 + 13 =
Remember me
