ಕೇರಳ:ಚುನಾವಣೆಯ ನಿರೀಕ್ಷೆಯಲ್ಲಿರುವ ಕೇರಳ ಪ್ರವಾಸದಲ್ಲಿರುವ ಕಾಂಗ್ರೆಸ್​ ಸಂಸದ ರಾಹುಲ್ ಗಾಂಧಿ ಸಮುದ್ರಕ್ಕೆ ಜಿಗಿದು ಅಚ್ಚರಿ ಮೂಡಿಸಿದ್ದಲ್ಲದೆ, ಸ್ವತಃ ಖುಷಿಯನ್ನೂ ಅನುಭವಿಸಿದ್ದಾರೆ. ಮೀನುಗಾರರೊಂದಿಗೆ ಬಲೆ ಹಾಕುವ ಪ್ರಕ್ರಿಯೆಯನ್ನು ಅನುಭವಿಸಲು ತೆರಳಿದ್ದ ಅವರು ಅವರೊಂದಿಗೆ ಸಮುದ್ರಕ್ಕೂ ಜಿಗಿದು ಸಂತೋಷ ಪಟ್ಟಿದ್ದಾರೆ.
ಕೇರಳದ ಕೊಲ್ಲಂ ಜಿಲ್ಲೆಯಲ್ಲಿ ಪ್ರವಾಸದಲ್ಲಿ ರಾಹುಲ್ ಗಾಂಧಿ, ಮೀನುಗಾರರೊಂದಿಗೆ ಸುಮಾರು ಹತ್ತು ನಿಮಿಷಗಳ ನೀರಿನಲ್ಲಿ ಈಜಾಡಿ ಸಂತೋಷ ಪಟ್ಟಿದ್ದಾರೆ ಎಂದು ಅಲ್ಲಿನ ಸ್ಥಳೀಯ ಮುಖಂಡರು ತಿಳಿಸಿದ್ದಾರೆ. ಕೆಲವು ಮೀನುಗಾರರು ಬಲೆ ಎಸೆದು ನೀರಿಗೆ ಧುಮುಕಿ ಬಲೆಯನ್ನು ಹೊಂದಾಣಿಕೆ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಬೋಟ್​ನಿಂದ ಜಿಗಿದ ರಾಹುಲ್ ಗಾಂಧಿ ಕೂಡ ಸಮುದ್ರಕ್ಕೆ ಧುಮುಕಿದ್ದಾರೆ. ಈ ಸಂದರ್ಭದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್​ ಮತ್ತು ಟಿ.ಎನ್​.ಪ್ರತಾಪನ್ ಸೇರಿ ನಾಲ್ವರು ಕಾಂಗ್ರೆಸ್ ಮುಖಂಡರು ರಾಹುಲ್ ಗಾಂಧಿ ಜತೆಗಿದ್ದರು.

ರಾಹುಲ್​ ಗಾಂಧಿ ನೀರಿನಿಂದ ಮೇಲೆ ಬಂದ ಬಳಿಕ ಮೀನುಗಾರರು ತಾಜಾ ಮೀನಿನ ಸಾರು ಹಾಗೂ ಬ್ರೆಡ್​ ಸವಿಯಲು ನೀಡಿದರು. ಚುನಾವಣಾ ಪ್ರಣಾಳಿಕೆಯಲ್ಲಿ ಮೀನುಗಾರರಿಗೆ ಆದ್ಯತೆ ನೀಡುವುದಾಗಿ ರಾಹುಲ್​ ಇದೇ ವೇಳೆ ಭರವಸೆ ನೀಡಿದರು ಎನ್ನಲಾಗಿದೆ. ಅಲ್ಲದೆ ನಿಮ್ಮ ಕೆಲಸವನ್ನು ನಾನು ಗೌರವಿಸುತ್ತೇನೆ. ತುಂಬಾ ಸಲ ನಾವು ಮೀನು ತಿನ್ನುತ್ತೇವೆ, ಆದರೆ ಅದು ತಟ್ಟೆಗೆ ಬರುವಷ್ಟರವರೆಗೆ ಎಷ್ಟೊಂದು ಶ್ರಮ ಇದೆ ಅರ್ಥಮಾಡಿಕೊಳ್ಳುವುದಿಲ್ಲ ಎಂಬುದಾಗಿ ರಾಹುಲ್ ಮೀನುಗಾರರ ಕುರಿತು ಮೆಚ್ಚುಗೆಯನ್ನೂ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್)
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

ಕಳೆದ ವರ್ಷ ತೋಳೇರಿಸಿಕೊಂಡು ಓಡಾಡುತ್ತಿದ್ದಾಕೆ ಈಗ ಫುಲ್​ ಸ್ಲೀವ್ಸ್​ ಹಾಕಿಕೊಂಡು ಓಡಾಡುತ್ತಿದ್ದಾಳೆ; ಕಾರಣ ಅದೊಂದು ಹಚ್ಚೆ!

ನಾಡಿದ್ದು ಭಾರತ್ ಬಂದ್​: ಜಿಎಸ್​ಟಿ, ತೈಲ ಬೆಲೆ ಏರಿಕೆ ಇತ್ಯಾದಿ ವಿರುದ್ಧ 8 ಕೋಟಿ ವ್ಯಾಪಾರಸ್ಥರ ಪ್ರತಿಭಟನೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve − 1 =
Remember me
