ನವದೆಹಲಿ:2019ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್​ ಹೀನಾಯವಾಗಿ ಸೋತ ಬಳಿಕ ರಾಹುಲ್​ ಗಾಂಧಿ ಅಧ್ಯಕ್ಷಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಹೊಸ ಅಧ್ಯಕ್ಷರನ್ನು ಇನ್ನೂ ನೇಮಕ ಮಾಡಲಾಗದೆ ಸೋನಿಯಾ ಗಾಂಧಿ ಅವರೇ ಅಧ್ಯಕ್ಷೆಯಾಗಿ ಪಕ್ಷದ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ.
ರಾಹುಲ್​ ಗಾಂಧಿಯವರು ರಾಜೀನಾಮೆ ನೀಡಿದ ಬಳಿಕ ಇಲ್ಲಿಯವರೆಗೆ ಎಷ್ಟೋ ಸಲ ಮತ್ತೆ ರಾಹುಲ್​ ಗಾಂಧಿಯವರೇ ಅಧ್ಯಕ್ಷರಾಗಲಿ ಎಂಬ ಮಾತು ಪಕ್ಷದ ಮುಖಂಡರ ಬಾಯಲ್ಲಿ ಕೇಳಿಬಂದಿದೆ. ಹಲವರು ರಾಹುಲ್​ ಗಾಂಧಿ ಮತ್ತೆ ಅಧ್ಯಕ್ಷರಾಗಲಿ ಎಂದು ಒತ್ತಾಯಿಸುತ್ತಿದ್ದಾರೆ. ಆದರೆ ರಾಹುಲ್​ ಗಾಂಧಿ ಮಾತ್ರ ಯಾರ ಮಾತಿಗೂ ಸೊಪ್ಪು ಹಾಕುತ್ತಿಲ್ಲ. ನಾನು ಅಧ್ಯಕ್ಷನಾಗುವುದಿಲ್ಲ ಎಂದಿದ್ದಾರೆ.
ಇಂದು ಬೆಳಗ್ಗೆ ಸೋನಿಯಾ ಗಾಂಧಿಯವರು ಕಾಂಗ್ರೆಸ್​ ಸಂಸದರೊಂದಿಗೆ ನಡೆಸಿದ ವರ್ಚ್ಯುವಲ್​ ಸಭೆಯಲ್ಲಿ ಕೂಡ ಹಲವು ಸಂಸದರು ರಾಹುಲ್ ಗಾಂಧಿ ಮತ್ತೊಮ್ಮೆ ಅಧ್ಯಕ್ಷರಾಗುವಂತೆ ಒತ್ತಾಯಿಸಿದ್ದಾರೆ. ಕಾಂಗ್ರೆಸ್​ ಲೋಕಸಭಾ ಸದಸ್ಯರಾದ ಕೆ.ಸುರೇಶ್​ ಮೊದಲು ಈ ಪ್ರಸ್ತಾಪವನ್ನು ಇಟ್ಟರು. ಅದಕ್ಕೆ ಉಳಿದ ಆರು ಸಂಸದರಾದ ಅಂತೋ ಅಂಥೋನಿ, ಮಾನಿಕ್ಕಂ ಟಾಗೋರ್​, ಗೌರವ್​ ಗೊಗೊಯಿ, ಅಬ್ದುಲ್​ ಖಲೀಕ್, ಮೊಹಮ್ಮದ್​ ಜಾವೇದ್​ ಮತ್ತು ಸಪ್ತಗಿರಿ ಶಂಕರ್​ ಅವರು ಬೆಂಬಲಿಸಿದ್ದಾರೆ. ಆದರೆ ರಾಹುಲ್​ ಗಾಂಧಿಯವರು ಮಾತ್ರ ಇದಕ್ಕೆ ಒಂದೂ ಪ್ರತಿಕ್ರಿಯೆ ನೀಡಿಲಿಲ್ಲ. ಮೌನವಾಗಿಯೇ ಇದ್ದರು.ಇದನ್ನೂ ಓದಿ:ಹಸ್ತಮೈಥುನವೇ ಸಾಕು, ಗಂಡನ ಅವಶ್ಯಕತೆ ಇಲ್ಲ; ಸ್ಯಾಂಡಲ್​ವುಡ್ ನಟಿಯ ಬೋಲ್ಡ್ ಮಾತು!
ಸುಮಾರು ಮೂರೂವರೆ ತಾಸುಗಳ ಮೀಟಿಂಗ್​​ನಲ್ಲಿ ಹಲವು ಸಂಸದರು ತಮ್ಮ ಪಕ್ಷ ಇನ್ನೂ ಬಲಿಷ್ಠವಾಗಬೇಕು ಎಂಬ ಇಂಗಿತ ವ್ಯಕ್ತಪಡಿಸಿದ್ದಾರೆ. ಸೋನಿಯಾ ಗಾಂಧಿಯವರು ಮಧ್ಯಂತರ ಅವಧಿಗೆ ಅಧ್ಯಕ್ಷೆಯಾಗಿದ್ದು, ಅವರ ಅವಧಿ ಆಗಸ್ಟ್​ 10ರಂದು ಮುಕ್ತಾಯಗೊಳ್ಳಲಿದೆ. ಅದಾದ ಬಳಿಕ ಯಾರಾದರೂ ಪೂರ್ಣ ಅವಧಿಗೆ ಅಧ್ಯಕ್ಷರಾಗಿ ನೇಮಕಗೊಳ್ಳಬೇಕು ಎಂದು ಸಂಸದರು ಒತ್ತಾಯಿಸಿದ್ದಾರೆ ಎಂದು ಕಾಂಗ್ರೆಸ್​ ಮೂಲಗಳು ತಿಳಿಸಿವೆ. (ಏಜೆನ್ಸೀಸ್​)
ಗೃಹ, ಆರೋಗ್ಯ ಸಚಿವರೊಂದಿಗೆ ಸಭೆ ನಡೆಸಿದ ಪ್ರಧಾನಿ ನರೇಂದ್ರ ಮೋದಿ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 5 =
Remember me
