ನವದೆಹಲಿ: ದೇಶ ಇಂದು ಪುಲ್ವಾಮಾ ದಾಳಿಯ ಕಹಿನೆನಪಿನಲ್ಲಿದ್ದರೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ರಾಜಕೀಯ ಲಾಭ ಗಳಿಕೆ ಉದ್ದೇಶದಿಂದ ಮಾಡಿದ ಮೂರು ಪ್ರಶ್ನೆಗಳ ಟ್ವೀಟ್​ಗೆ ಬಿಜೆಪಿ ವಕ್ತಾರ ಜಿವಿಎಲ್​ ನರಸಿಂಹ ರಾವ್ ಖಾರವಾಗಿಯೇ ಪ್ರತಿಕ್ರಿಯಿಸಿದ್ದಾರೆ.
ರಾಹುಲ್ ಗಾಂಧಿ ಟ್ವೀಟ್​ನಲ್ಲಿ ಏನಿತ್ತು?:ಪುಲ್ವಾಮ ದಾಳಿಗೆ ಒಂದು ವರ್ಷ: ಹುತಾತ್ಮರನ್ನು ಸ್ಮರಿಸುತ್ತಾ ಕೇಂದ್ರ ಸರ್ಕಾರಕ್ಕೆ ಮೂರು ಪ್ರಶ್ನೆ ಕೇಳಿದ ರಾಹುಲ್​ ಗಾಂಧಿ
ಪುಲ್ವಾಮಾ ದಾಳಿಯಲ್ಲಿ 40 ಜನ ಸಿಆರ್​ಪಿಎಫ್​ ಯೋಧರು ಹುತಾತ್ಮರಾಗಿದ್ದು ಇದರ ಲಾಭ ಯಾರಿಗಾಯಿತು ಎಂಬಿತ್ಯಾದಿ ಮೂರು ಪ್ರಶ್ನೆಗಳು ದೇಶದ ಜನರ ಮುಂದಿಟ್ಟ ರಾಹುಲ್ ಗಾಂಧಿ ಅವರ ಟ್ವೀಟ್​ಗೆ ಹಲವರು ನಾನಾ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಆದಾಗ್ಯೂ, ರಾಹುಲ್ ಗಾಂಧಿ ಅವರ ಟ್ವೀಟ್​ನ ರಾಜಕೀಯ ಉದ್ದೇಶ ಬೇರೆಯೇ ಇದ್ದುದರಿಂದ ಬಿಜೆಪಿಯಿಂದ ಅಧಿಕೃತವಾದ ಪ್ರತಿಕ್ರಿಯೆಯನ್ನು ಎಲ್ಲರೂ ನಿರೀಕ್ಷಿಸುತ್ತಿದ್ದರು. ಇದಕ್ಕೆ ಪೂರಕವಾಗಿ,ಬಿಜೆಪಿ ವಕ್ತಾರ ಜಿವಿಎಲ್​ ನರಸಿಂಹ ರಾವ್ ಖಾರವಾಗಿಯೇ ಪ್ರತಿಕ್ರಿಯಿಸಿದ್ದಾರೆ.
ಅತ್ಯಂತ ಅಮಾನವೀಯ ಉಗ್ರ ದಾಳಿಯ ಕಾರಣಕ್ಕೆ ಪುಲ್ವಾಮಾದಲ್ಲಿ ಹುತಾತ್ಮರಾದವರಿಗೆ ದೇಶ ಗೌರವ ಸಲ್ಲಿಸುತ್ತಿದ್ದರೆ, ಎಲ್​ಇಟಿ, ಜೈಷ್ ಏ ಮೊಹಮ್ಮದ್​ಗಳ ಹಿತೈಷಿ ಎಂದೇ ಗುರುತಿಸಲ್ಪಟ್ಟ ರಾಹುಲ್ ಗಾಂಧಿ ಸರ್ಕಾರವನ್ನು ಟಾರ್ಗೆಟ್ ಮಾಡಿರುವುದಷ್ಟೇ ಅಲ್ಲ, ಭದ್ರತಾ ಪಡೆಗಳನ್ನೂ ಟಾರ್ಗೆಟ್ ಮಾಡಿದ್ದಾರೆ. ನಿಜವಾದ ಅಪರಾಧಿ ಪಾಕಿಸ್ತಾನವನ್ನು ರಾಹುಲ್ ಗಾಂಧಿ ಎಂದಿಗೂ ಪ್ರಶ್ನಿಸರು. ರಾಹುಲ್ ನಿಮಗೆ ಶೇಮ್ ಆಗಬೇಕು! ಎಂದು ಟ್ವೀಟ್ ಮಾಡಿದ್ದಾರೆ.
When nation is paying homage to martyrs of dastardly Pulwama attack,@RahulGandhi, a known sympathizer of LeT & Jaish-e-Mohammad, chooses to target not just the government but security forces as well. Rahul will never question real culprit Pakistan.Shame on you Rahul!@INCIndiahttps://t.co/5M7dcWcxXU
— GVL Narasimha Rao (@GVLNRAO)February 14, 2020

ಶಾನ್​ವಾಜ್ ಹುಸೇನ್ ಕೂಡ ರಾಹುಲ್ ಟ್ವೀಟ್​​ಗೆ ಪ್ರತಿಕ್ರಿಯಿಸಿದ್ದು,ದೇಶಕ್ಕಾಗಿ ಪ್ರಾಣ ಬಲಿದಾನ ಮಾಡಿದ ಹುತಾತ್ಮರಿಗೆ ಮಾಡಿದ ಅವಮಾನ ಇದು. ಕಾಂಗ್ರೆಸ್ ಈ ರೀತಿ ಇದಕ್ಕೆ ಮೊದಲೂ ಮಾಡಿತ್ತು. ಈ ಬ್ಲಂಡರ್​ಗಾಗಿ ಜನ ಅವರಿಗೆ ಒಂದು ಪಾಠ ಕಲಿಸಿದ್ದಾರೆ.ರಾಹುಲ್ ಗಾಂಧಿಯವರ ಪ್ರತಿಕ್ರಿಯೆ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಭಾರತವನ್ನು ಎದುರಿಸುವುದಕ್ಕೆ ಪಾಕಿಸ್ತಾನಕ್ಕೆ ನೆರವಾದೀತು ಎಂದು ಖಂಡಿಸಿದ್ದಾರೆ.
Today when the whole nation is once again feeling the sadness tht engulfed our hearts last year due to#PulwamaTerrorAttack, Rahul Gandhi has made an insensitive comment that insults the#Pulwamamartyrs.Congress stoops to new lows everytime in their greed for political benefits
— Syed Shahnawaz Hussain (@ShahnawazBJP)February 14, 2020

(ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − four =
Remember me
