ಹರಿಯಾಣ:ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಹರಿಯಾಣದ ಸೋನಿಪತ್​ಗೆ ದಿಢೀರ್​ ಭೇಟಿ ನೀಡಿದ್ದು, ರೈತರ ಜೊತೆ ಕೆಲ ಸಮಯ ಕಳೆದಿದ್ದಾರೆ. ದೆಹಲಿಯಿಂದ ಹಿಮಾಚಲಪ್ರದೇಶದಕ್ಕೆ ತೆರಳುವ ವೇಳೆ ಮಾರ್ಗ ಮಧ್ಯೆ ಹರಿಯಾಣದ ಸೋನಿಪತ್​ನಲ್ಲಿ ರಾಹುಲ್​ ರೈತರನ್ನು ಭೇಟಿ ಮಾಡಿದ್ಧಾರೆ.
ರೈತರನ್ನು ಭೇಟಿ ಮಾಡಿದ ವೇಳೆ ರಾಹುಲ್​ ಗದ್ದೆಯಲ್ಲಿ ಟ್ರ್ಯಾಕ್ಟರ್​ ಚಲಾಯಿಸಿ, ಬಿತ್ತನೆ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. ಈ ವೇಳೆ ನೆರದಿದ್ದ ರೈತರೊಂದಿಗೆ ರಾಹುಲ್​ ಗಾಂಧಿ ಕೆಲಕಾಲ ಸಂವಾದ ನಡೆಸಿದ್ದಾರೆ.
VIDEO l Congress leader Rahul Gandhi meets farmers, drives a tractor in the fields in Sonipat, Haryana, while on his way to Shimla earlier today.pic.twitter.com/FIaX6iyvSr
ಇದನ್ನೂ ಓದಿ:ಪಂಚಾಯತ್​ ಚುನಾವಣೆ; ಪಕ್ಷೇತರ ಅಭ್ಯರ್ಥಿಯ ಪುತ್ರಿ ಹಣೆಗೆ ಗುಂಡು
ಈ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್​ ಶಾಸಕ ಜಗ್​ಬೀರ್​ ಸಿಂಗ್​ ಸಮಾಜದ ಎಲ್ಲಾ ವರ್ಗದವರ ಕಷ್ಟಗಳನ್ನು ಅರಿಯಲು ಪ್ರಯತ್ನಿಸುತ್ತಿರುವ ನಾಯಕ ಎಂದರೆ ಅದು ರಾಹುಲ್​ ಗಾಂಧಿ. ಕಾರ್ಯಕ್ರಮದ ನಿಮಿತ್ತ ಹಿಮಾಚಲಪ್ರದೇಶಕ್ಕೆ ತೆರಳುವ ವೇಳೆ ಮಾರ್ಗ ಮಧ್ಯ ಅವರು ದಿಢೀರ್​ ಎಂದು ಸೋನಿಪತ್​ಗೆ ಭೇಟಿ ನೀಡಿ ಸಂತಸ ವ್ಯಕ್ತಪಡಿಸಿದ್ದಾರೆ.
ರಾಹುಲ್​ ಗಾಂಧಿ ಭೇಟಿ ಕುರಿತು ಪ್ರತಿಕ್ರಿಯಿಸಿರುವ ಹರಿಯಾಣ ಕೃಷಿ ಸಚಿವ ಜೆ.ಪಿ. ದಲಾಲ್​ ಕಾಂಗ್ರೆಸ್​ನ ಯುವರಾಜ ಬಿಸಿಲಿನಲ್ಲಿ ರೈತರೊಂದಿಗೆ ಕೆಲಸ ಮಾಡುವ ಮೂಲಕ ಅವರ ಶ್ರಮವನ್ನು ಅರ್ಥ ಮಾಡಿಕೊಳ್ಳಬಹುದು. ಅದು ಬಿಟ್ಟು ಈ ರೀತಿ ಫೋಟೋಶೂಟ್​ಗಾಗಿ ಈ ರೀತಿ ಮಾಡುವುದು ಸರಿಯಲ್ಲ ಎಂದು ಟೀಕಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen − 12 =
Remember me
