ಹರಿಯಾಣ:ಬ್ರಿಜ್​ಭೂಷಣ್​ ಶರಣ್​ ಸಿಂಗ್​ ಆಪ್ತ ಸಂಜಯ್​ ಸಿಂಗ್​ ಭಾರತೀಯ ಕುಸ್ತಿ ಒಕ್ಕೂಟದ (ಡಬ್ಲ್ಯುಎ​ಐ) ಅಧ್ಯಕ್ಷರಾಗಿ ಆಯ್ಕೆಯಾಗಿರುವುದನ್ನು ಪ್ರತಿಭಟಿಸಿ ಪದ್ಮಶ್ರೀ ಪ್ರಶಸ್ತಿಯನ್ನು ಸರ್ಕಾರಕ್ಕೆ ವಾಪಸ್​ ನೀಡಿದ ಒಲಿಂಪಿಕ್ಸ್​ ಪದಕ ವಿಜೇತ ಕುಸ್ತಿಪಟು ಭಜರಂಗ್​ ಪೂನಿಯಾಗೆ ಇತರೆ ಕುಸ್ತಿಪಟುಗಳು ಬೆಂಬಲಿಸಿ, ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಇದೀಗ ಪ್ರತಿಭಟನೆಯಲ್ಲಿ ಕಾಣಿಸಿಕೊಂಡಿದ್ದ ಕ್ರೀಡಾಪಟುಗಳನ್ನು ಕಾಂಗ್ರೆಸ್​ ಸಂಸದ ರಾಹುಲ್ ಗಾಂಧಿ ಖುದ್ದಾಗಿ ಭೇಟಿ ಮಾಡಿದ್ದು, ಕೆಲವು ವಿಷಯಗಳನ್ನು ಚರ್ಚಿಸಿದ್ದಾರೆ.
ಇದನ್ನೂ ಓದಿ:‘ಅನಿಮಲ್‌’ ಯಶಸ್ಸಿನ ಬೆನ್ನಲ್ಲೇ ಬಿಗ್ ಬಜೆಟ್ ಸಿನಿಮಾ ಆಫರ್ ಪಡೆದ ನಟಿ ತೃಪ್ತಿ ದಿಮ್ರಿ! ಯಾವ ಚಿತ್ರ?
ಇಂದು ಹರಿಯಾಣದಲ್ಲಿ ಭಜರಂಗ್ ಪುನಿಯಾ ಮತ್ತು ಇತರ ಕುಸ್ತಿಪಟುಗಳನ್ನು ಭೇಟಿ ಮಾಡಿದ ರಾಹುಲ್ ಗಾಂಧಿ, ಕೆಲವು ಸಮಯ ಅವರೊಂದಿಗೆ ಮಾತನಾಡಿದರು. ಈ ವೇಳೆ 2022ರ ಬರ್ಮಿಂಗ್‌ಹ್ಯಾಮ್ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಿನ್ನದ ಪದಕ ವಿಜೇತ ದೀಪಕ್ ಪುನಿಯಾ ಕೂಡ ಉಪಸ್ಥಿತರಿದ್ದರು. ವೀರೇಂದ್ರ ಅಖಾರಾದಲ್ಲಿ ಸಭೆ ಸೇರಿದ ರಾಹುಲ್, ದೀಪಕ್ ಮತ್ತು ಭಜರಂಗ್ ಅವರ ಕುಸ್ತಿಯ ಪ್ರದರ್ಶನ ನೋಡಿದ್ದಾರೆ.
ಇನ್ನು ಈ ಬಗ್ಗೆ ಮಾತನಾಡಿದ ಭಜರಂಗ್, “ಕುಸ್ತಿಪಟುಗಳ ದಿನನಿತ್ಯದ ವ್ಯಾಯಾಮವನ್ನು ನೋಡಲು ರಾಹುಲ್ ಗಾಂಧಿ ಛಾರಾದಲ್ಲಿನ ಅಖಾಡಕ್ಕೆ ಆಗಮಿಸಿದ್ದರು. ನಮ್ಮ ಕುಸ್ತಿಪಟುಗಳೊಂದಿಗೆ ಕುಸ್ತಿ ನಡೆಸಿದರು. ಕುಸ್ತಿಪಟುವಿನ ದೈನಂದಿನ ಜೀವನ ಹೇಗೆ ನಡೆಯುತ್ತದೆ ಎಂಬುದನ್ನು ನೋಡಲು ಅವರು ಇಲ್ಲಿಗೆ ಬಂದಿದ್ದರು. ನನ್ನೊಂದಿಗೆ ಕುಸ್ತಿ ಮತ್ತು ವ್ಯಾಯಾಮ ಕೂಡ ಮಾಡಿದರು” ಎಂದರು.
ಇದನ್ನೂ ಓದಿ:ಸ್ಪೋರ್ಟ್ಸ್​ ಸಿಟಿ ನಿರ್ಮಾಣಕ್ಕೆ ಒತ್ತು; ಗೃಹ ಸಚಿವ ಡಾ. ಜಿ. ಪರಮೇಶ್ವರ್​ ಭರವಸೆ
“ರಾಹುಲ್ ಗಾಂಧಿ ಅಖಾಡಕ್ಕೆ ಭೇಟಿ ನೀಡಿದರ ಕುರಿತು ವೀಡಿಯೊಗಳನ್ನು ಸಹ ಮಾಡಿಕೊಂಡರು. ಕುಸ್ತಿಪಟುಗಳು ಅಂಕಗಳನ್ನು ಹೇಗೆ ಪಡೆಯುತ್ತಾರೆ ಮತ್ತು ಹೇಗೆ ಲೆಕ್ಕ ಹಾಕುತ್ತಾರೆ ಎಂಬ ಕುಸ್ತಿಯ ತಂತ್ರಗಳನ್ನು ಕಲಿತರು. ಅವರು ರಾಗಿ ರೊಟ್ಟಿ ಮತ್ತು ಹಸಿರು ಕರಿಬೇವುಗಳನ್ನು ತಿಂದರು. ಈ ದಿನಗಳಲ್ಲಿ ಮಕ್ಕಳು ವಿವಿಧ ಮಾನಸಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ನಾವು ಅವರಿಗೆ ಹೇಳಿದ್ದೇವೆ. ಆದರೆ, ಅದರಲ್ಲಿ ಏನಾದರೂ ಇದೆಯೇ? ರಾಹುಲ್ ಏನು ಮಾಡಲು ಸಾಧ್ಯ? ಎಲ್ಲವೂ ಸರ್ಕಾರದ ಕೈಯಲ್ಲಿದೆ’’ ಎಂದು ವೀರೇಂದ್ರ ಅಖಾರ ಕೋಚ್ ಹೇಳಿದ್ದಾರೆ,(ಏಜೆನ್ಸೀಸ್).
‘ಅನಿಮಲ್‌’ ಯಶಸ್ಸಿನ ಬೆನ್ನಲ್ಲೇ ಬಿಗ್ ಬಜೆಟ್ ಸಿನಿಮಾ ಆಫರ್ ಪಡೆದ ನಟಿ ತೃಪ್ತಿ ದಿಮ್ರಿ! ಯಾವ ಚಿತ್ರ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − 5 =
Remember me
