ನವದೆಹಲಿ:ಗೌತಮ್ ಅದಾನಿ ಮತ್ತು ಮುಖೇಶ್ ಅಂಬಾನಿಯಂತಹ ಕೈಗಾರಿಕೋದ್ಯಮಿಗಳಿಗೆ ಸಹಾಯ ಮಾಡಲು ನರೇಂದ್ರ ಮೋದಿ ಅವರನ್ನು ದೇವರೇ ಕಳುಹಿಸಲಾಗಿದೆಯೇ ಹೊರತು ಬಡವರಿಗೆ ನೆರವಾಗಲು ಕಳಿಸಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿಗೆ ಕಾಂಗ್ರೆಸ್​ ನಾಯಕ ಟಾಂಗ್ ಕೊಟ್ಟಿದ್ದಾರೆ.
ಇದನ್ನೂ ಓದಿ:ರೆಬೆಲ್​ಸ್ಟಾರ್​ ಅಂಬರೀಶ್​ ಹುಟ್ಟುಹಬ್ಬಕ್ಕೆ ವಿಶೇಷವಾಗಿ ಶುಭಾಶಯ ಕೋರಿದ ದರ್ಶನ್
ಕೇಂದ್ರದಲ್ಲಿ ಇಂಡಿಯಾ ಮೈತ್ರಿ ಕೂಟದ ಸರ್ಕಾರವು ಅಧಿಕಾರಕ್ಕೆ ಬಂದ ಕೂಡಲೇ ದೇಶದ ಆರ್ಥಿಕತೆಯನ್ನು ಪುನಾರಂಭ ಮಾಡಲಿದೆ ಎಂದೂ ರಾಹುಲ್ ಗಾಂಧಿ ಹೇಳಿದ್ದಾರೆ.
ಇತ್ತೀಚೆಗೆ ಎರಡು ಮಾಧ್ಯಮ ಸಂದರ್ಶನಗಳಲ್ಲಿ ಮಾತನಾಡಿದ್ದ ಪ್ರಧಾನಿ ಮೋದಿ, ದೇವರು ತಮ್ಮನ್ನು ಒಂದು ಉದ್ದೇಶದಿಂದ ಆಯ್ಕೆ ಮಾಡಿದ್ದಾನೆ. ಆ ಗುರಿ ಪೂರ್ಣಗೊಳ್ಳುವವರೆಗೂ ತಾವು ಕೆಲಸ ಮುಂದುವರಿಸುವುದಾಗಿ. ಹಾಗೂ ತಮ್ಮ ಮೇಲೆ ನಂಬಿಕೆ ಇರಿಸಿರುವವರ ಸೇವೆ ಸಲ್ಲಿಸುವುದು ತಮ್ಮ ಕರ್ತವ್ಯ ಎಂದು ಹೇಳಿದ್ದರು.
ಉತ್ತರ ಪ್ರದೇಶದ ಡಿಯೋರಿಯಾದಲ್ಲಿ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಪ್ರಧಾನಿ ಮೋದಿ ಅವರು ದೈವಿಕ ಪ್ರೇರಣೆಯ ಕಥೆಗಳನ್ನು ಈಗ ಏಕೆ ಕಟ್ಟುತ್ತಿದ್ದಾರೆ ಎಂದು ಪ್ರಶ್ನಿಸಿರುವ ರಾಹುಲ್​, ಬಹುಶಃ ಚುನಾವಣೆ ಬಳಿಕ ಅದಾನಿ ಜೊತೆಗಿನ ನಂಟಿನ ಕುರಿತಾಗಿ ಇಡಿ ಪ್ರಶ್ನೆ ಮಾಡಲಿದೆ. ಆ ವೇಳೆ ಪ್ರಧಾನಿ ಮೋದಿ ಅವರು ಇವೆಲ್ಲವೂ ದೈವಿಕ ಕಾರ್ಯ ಎಂದು ಹೇಳುತ್ತಾರಾ? ಎಂದು ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.
ಮೋದಿ ಅವರು ಈ ಎಲ್ಲಾ ವಿಚಾರಗಳ ಕುರಿತಾಗಿ ಮಾತನಾಡುವುದನ್ನು ನಿಲ್ಲಿಸಬೇಕು, ದೇಶದ ಜ್ವಲಂತ ಸಮಸ್ಯೆಗಳಾದ ನಿರುದ್ಯೋಗದ ಬಗ್ಗೆ ಮಾತನಾಡಬೇಕು. ಸಮಾಜವನ್ನು ವಿಭಜಿಸುವ ಉದ್ದುದ್ದ ಭಾಷಣ ಮಾಡಬಾರದು ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಆದಾನಿಯಂತಹ ಶ್ರೀಮಂತರ ಉದ್ಧಾರಕ್ಕೆ ದೇವರು ಮೋದಿ ಅವರನ್ನು ಕಳುಹಿಸಿದ್ದಾರೆ ಹೊರೆತು ರೈತರು ಮತ್ತು ಕಾರ್ಮಿಕರಿಗೆ ಸಹಾಯ ಮಾಡಲು ದೇವರು’ ಮೋದಿ ಅವರನ್ನು ಕಳುಹಿಸಿಲ್ಲ” ಎಂದು ರಾಹುಲ್ ಗಾಂಧಿ ಟೀಕಿಸಿದರು.
ದೇಶದಲ್ಲಿ ಇರುವ ಶೇ. 50 ರಷ್ಟು ಮೀಸಲಾತಿ ಮಿತಿಯನ್ನು ಇಂಡಿಯಾ ಮೈತ್ರಿ ಕೂಟದ ಸರ್ಕಾರ ಅಸ್ತಿತ್ವಕ್ಕೆ ಬಂದ ಕೂಡಲೇ ತೆಗೆದು ಹಾಕಲಾಗುವುದು. ದೇಶದ ಸಂವಿಧಾನವನ್ನು ತಮ್ಮ ಮೈತ್ರಿ ಕೂಟರಕ್ಷಣೆ ಮಾಡಲಿದೆ ಎಂದು ರಾಹುಲ್ ಗಾಂಧಿ ಹೇಳಿದರು.
ನನ್ನನ್ನು ಅಧಿಕಾರದಿಂದ ಕೆಳಗಿಳಿಸಿ, ಮತ್ತೆ ಹಗರಣ ಮಾಡಲು ಕಾಂಗ್ರೆಸ್-ಜೆಎಂಎಂ ಕಾಯುತ್ತಿದೆ: ಪ್ರಧಾನಿ ಮೋದಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − 12 =
Remember me
