ನವದೆಹಲಿ:ಅಯೋಧ‍್ಯೆಯಲ್ಲಿ ರಾಮಮಂದಿರ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಗೈರಾಗಲು ನಿರ್ಧರಿಸಿರುವ ಕಾಂಗ್ರೆಸ್ ಈಗ ಹಿಂದೂಗಳ ಮತ್ತು ಬಿಜೆಪಿಯ ತೀವ್ರ ಟೀಕೆಗೆ ಗುರಿಯಾಗಿದೆ. ರಾಹುಲ್ ಗಾಂಧಿಯ ಹಳೆಯ ಫೋಟೋವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದು, ಮಸೀದಿಗೆ ಭೇಟಿ ನೀಡಲು ನಿಮಗೆ ಯಾವುದೇ ಸಮಸ್ಯೆಯಿಲ್ಲ, ಮಂದಿರ ಎಂದರೆ ಅಸಡ್ಡೆ ಯಾಕೆ ಎಂದು ಪ್ರಶ್ನೆ ಮಾಡುತ್ತಿದ್ದಾರೆ.
ಇದನ್ನೂ ಓದಿ:ಅಯೋಧ್ಯೆ ರಾಮಲಲ್ಲಾಗೆ ಸೂರ್ಯ ತಿಲಕ ಮೂಡಿಸುವ ಯಂತ್ರ ದಾನ: ಕೈಜೋಡಿಸಿದ ಬೆಂಗಳೂರಿನ ಜೈನ ಕುಟುಂಬ!
ರಾಹುಲ್ ಗಾಂಧಿ ಈ ಹಿಂದೆ ಅಫ್ಘಾನಿಸ್ತಾನದ ಬಾಬರ್ ಸಮಾಧಿಗೆ ಭೇಟಿ ಕೊಟ್ಟ ಫೋಟೋವನ್ನು ಬಿಜೆಪಿ ನಾಯಕರು ಸೋಷಿಯಲ್ ಮೀಡಿಯಾದಲ್ಲಿ ಪ್ರಕಟಿಸಿದ್ದಾರೆ. ಜತೆಗೆ ಮಸೀದಿಗೆ ಭೇಟಿ ನೀಡಲು ನಿಮಗೆ ಯಾವುದೇ ಸಮಸ್ಯೆಯಿಲ್ಲ. ಆದರೆ ಹಿಂದೂ ಮಂದಿರಗಳಿಗೆ ಭೇಟಿ ನೀಡುವಾಗ ಧರ್ಮ ಅಡ್ಡಬರುತ್ತದೆ ಎಂದು ಟೀಕಿಸಿದ್ದಾರೆ.
ಇದರಿಂದಲೇ ನಿಮಗೆ ಹಿಂದುಗಳ ಬಗ್ಗೆ ಯಾವ ರೀತಿಯ ಭಾವನೆ ಇದೆ ಎಂದು ಗೊತ್ತಾಗುತ್ತದೆ ಎಂದು ಹಲವರು ಟೀಕಿಸಿದ್ದಾರೆ. ರಾಹುಲ್ ಗಾಂಧಿ ಸೇರಿದಂತೆ ನೆಹರೂ ಕುಟುಂಬದ ಮೂರು ತಲೆಮಾರು ಬಾಬರ್ ಮಸೀದಿಗೆ ಭೇಟಿ ಕೊಟ್ಟಿದೆ. ಆದರೆ ರಾಮಲಲ್ಲಾ ಮೇಲೆ ನಿಮಗೆ ಧ್ವೇಷ ಯಾಕೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಾಂತ ಬಿಸ್ವ ಪ್ರಶ್ನಿಸಿದ್ದಾರೆ.
ಪತ್ನಿ ಲೈಂಗಿಕ ಸಂಬಂಧ ನಿರಾಕರಿಸಿದರೆ ಪತಿ ವಿಚ್ಛೇದನಕ್ಕೆ ಅರ್ಹ: ಮಧ್ಯ ಪ್ರದೇಶ ಹೈಕೋರ್ಟ್

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:4 × three =
Remember me
