ಜಾರ್ಖಂಡ್​:ಭಾರತ ಜೋಡೋ ನ್ಯಾಯ್​ ಯಾತ್ರೆಯನ್ನು ಕೈಗೊಂಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೋಮವಾರ ಜಾರ್ಖಂಡ್‌ನ ರಾಮಗಢ ಜಿಲ್ಲೆಯಲ್ಲಿ 200 ಕೆಜಿ ಕಲ್ಲಿದ್ದಲು ತುಂಬಿದ್ದ ಯುವಕನ ಸೈಕಲ್ ತಳ್ಳಲು ಯತ್ನಿಸಿದ್ದಾರೆ. ಈ ದೃಶ್ಯದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡಿವೆ.
ಇದನ್ನೂ ಓದಿ:ಸತತ 16 ದಿನಗಳಿಂದ ಹಸಿ ಚಿಕನ್ ತಿನ್ನುತ್ತಿರುವ ವ್ಯಕ್ತಿ…ಕಾರಣ ಕೇಳಿದ್ರೆ ಬೆರಗಾಗೋದು ಗ್ಯಾರಂಟಿ!
ರಾಂಚಿಗೆ ತೆರಳುತ್ತಿದ್ದ ದಾರಿ ಮಧ್ಯೆ ತಮ್ಮ ಸೈಕಲ್‌ಗಳಲ್ಲಿ 200ರಿಂದ 250 ಕೆಜಿ ತೂಕದ ಕಲ್ಲಿದ್ದಲನ್ನು ಸಾಗಿಸುತ್ತಿದ್ದ ಕೂಲಿ ಕಾರ್ಮಿಕರನ್ನು ನೋಡಿದ ರಾಹುಲ್ ಗಾಂಧಿ, ಅವರ ಸೈಕಲ್​ ತಳ್ಳುವ ಮೂಲಕ ಕಾರ್ಮಿಕರಿಗೆ ಸಹಾಯಹಸ್ತ ನೀಡಿದ್ದಾರೆ. ಈ ಕುರಿತಂತೆ ಟ್ವೀಟ್ ಮಾಡಿದ ಕಾಂಗ್ರೆಸ್​, “ಪ್ರತಿದಿನ ಸುಮಾರು 30-40 ಕಿಲೋಮೀಟರ್ ನಡೆಯಬೇಕು. ಕಠಿಣ ಪರಿಶ್ರಮ ಪಟ್ಟರೂ ಈ ಕೆಲಸದಿಂದ ಬರುವ ಆದಾಯವು ತುಂಬಾ ಕಡಿಮೆ” ಎಂದು ಕಾರ್ಮಿಕರು ಹೇಳಿರುವುದಾಗಿ ತಿಳಿಸಿದೆ.
“ಭಾರತವನ್ನು ಕಟ್ಟುವಲ್ಲಿ ತೊಡಗಿರುವ ಈ ಕಾರ್ಮಿಕರಿಗೆ ಅವರ ಶ್ರಮಕ್ಕೆ ಸಮಾನವಾದ ವೇತನ ಸಿಗಬೇಕು, ಅವರಿಗೆ ನ್ಯಾಯ ಸಿಗಬೇಕು. ಇದು ಯಾತ್ರೆಯ ಗುರಿಯಾಗಿದೆ. ಜನರ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳುವುದು, ಅವರ ನೋವನ್ನು ಆಲಿಸುವುದು, ಅವರಿಗೆ ನ್ಯಾಯ ಒದಗಿಸುವುದು” ಯಾತ್ರೆಯ ಉದ್ದೇಶವಾಗಿದೆ ಎಂದು ಪೋಸ್ಟ್​ನಲ್ಲಿ ಹೇಳಿದೆ.
ಇದನ್ನೂ ಓದಿ:ನೀನ್ಯಾಕೆ ನನ್ನ ಮದುವೆ ಮಾಡಿಲ್ಲ? ಎಂದು ಹೆತ್ತ ತಾಯಿಯನ್ನೇ ಕೊಲೆಗೈದ ಮಗ
ಫೆಬ್ರವರಿ 2ರಂದು ಪಶ್ಚಿಮ ಬಂಗಾಳದಿಂದ ಜಾರ್ಖಂಡ್ ಪ್ರವೇಶಿಸಿದ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ನ್ಯಾಯ್ ಯಾತ್ರೆಗೆನೂತನವಾಗಿ ನೇಮಕಗೊಂಡ ಸಿಎಂ ಚಂಪೈ ಸೊರೆನ್ ಆತ್ಮೀಯ ಸ್ವಾಗತ ನೀಡಿದರು,(ಏಜೆನ್ಸೀಸ್).
ಖ್ಯಾತ ನಿರ್ದೇಶಕನ ಪುತ್ರಿ, ಹಣ ಉಳಿಸಲು 15 ಕಿ.ಮೀ ಕಾಲ್ನಡಿಗೆ; ಭಾರತದಲ್ಲಿ ಅತೀ ಹೆಚ್ಚು ಸಂಭಾವನೆ ಪಡೆದ ನಟಿ ಈಕೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 + 7 =
Remember me
