ಚೆನ್ನೈ:ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿಯ ಆ್ಯಬ್ಸ್​ ಫೋಟೋ ಸಕತ್​ ವೈರಲ್​ ಆಗಿತ್ತು. ಮೀನುಗಾರರೊಂದಿಗೆ ಸಮುದ್ರಕ್ಕೆ ಹಾರಿ ಒದ್ದೆ ಬಟ್ಟೆಯಲ್ಲಿದ್ದ ರಾಹುಲ್​ರ ಫೋಟೊಕ್ಕೆ ಜನರು ಫಿದಾ ಆಗಿದ್ದರು. ರಾಜಕೀಯದಲ್ಲಿ ತೊಡಗಿಸಿಕೊಂಡಿರುವ ರಾಹುಲ್​ ಇಷ್ಟೊಂದು ಫಿಟ್​ ಇದ್ದಾರಾ ಎಂದು ಹುಬ್ಬೇರಿಸಿಕೊಂಡು ನೋಡಿದ್ದರು. ರಾಹುಲ್​ರ ಫಿಟ್​ನೆಸ್​ ಪ್ರದರ್ಶನ ಅಷ್ಟಕ್ಕೇ ಸೀಮಿತವಾಗಿಲ್ಲ. ಇದೀಗ ಅವರ ಪುಶ್​ಅಪ್​ ಪ್ರದರ್ಶನವನ್ನೂ ನೀವು ನೋಡಬಹುದು.
ರಾಹುಲ್​ ಗಾಂಧಿ ತಮಿಳುನಾಡು ಪ್ರವಾಸದಲ್ಲಿದ್ದಾರೆ. ಈ ವೇಳೆ ಅವರು ಮುಲಗುಮುಡುವಿನ ಸೇಂಟ್ ಜೋಸೆಫ್ಸ್ ಮೆಟ್ರಿಕ್ ಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಅದರಲ್ಲಿ 10ನೇ ತರಗತಿಯ ಮೆರೋಲಿನ್ ಶೆನಿಘಾ ಹೆಸರಿನ ವಿದ್ಯಾರ್ಥಿನಿ ಎದ್ದು ನಿಂತು, “ನೀವು ನನ್ನೊಂದಿಗೆ 15 ಪುಶ್​ಅಪ್​ ಮಾಡುವ ಸವಾಲನ್ನು ಸ್ವೀಕರಿಸಬಲ್ಲಿರೇ” ಎಂದು ಪ್ರಶ್ನಿಸಿದ್ದಾಳೆ. ಅದಕ್ಕೆ ಒಪ್ಪಿದ ರಾಹುಲ್​ ಆಕೆಯೊಂದಿಗೆ ಪುಶ್​ಅಪ್​ ಮಾಡಿದ್ದಾರೆ. ವಿದ್ಯಾರ್ಥಿನಿ ನಿಧಾನವಾಗಿ ಪುಶ್​ಅಪ್​ ಮಾಡಿದರೆ, ರಾಹುಲ್​ ಅತ್ಯಂತ ವೇಗವಾಗಿ ಪುಶ್​ಅಪ್​ ಮಾಡಿ ಮುಗಿಸಿದ್ದಾರೆ.
ಅದಾದ ಮೇಲೆ ಪುಶ್​ಅಪ್​ ನಿಲ್ಲಿಸಿ, ಆಕೆ ವಿನ್​ ಆಗಿದ್ದಾಳೆ ಎಂದು ರಾಹುಲ್​ ಹೇಳಿದ್ದಾರೆ. ಅದಾದ ಮೇಲೆ ರಾಹುಲ್​ ವಿದ್ಯಾರ್ಥಿನಿಗೆ ಸವಾಲೊಂದನ್ನು ಎಸೆದಿದ್ದಾರೆ. ನೀವು ಒಂದೇ ಕೈನಲ್ಲಿ ಪುಶ್​ಅಪ್​ ಮಾಡಬಲ್ಲಿರೇ ಎಂದು ಕೇಳಿದ್ದಾರೆ. ನಂತರ ತಾವು ಒಂದೇ ಕೈನಲ್ಲಿ ಒಂದು ಪುಶ್​ಅಪ್​ ಮಾಡಿದ್ದಾರೆ. ಈ ವಿಡಿಯೋವನ್ನು ಸ್ವತಃ ರಾಹುಲ್​ ಗಾಂಧಿಯವರೇ ತಮ್ಮ ಟ್ವಿಟ್ಟರ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. (ಏಜೆನ್ಸೀಸ್​)
ರಾಹುಲ್ ಗಾಂಧಿಯ ಪುಶ್​ಅಪ್​ಗೆ ವಿದ್ಯಾರ್ಥಿಗಳು ಫಿದಾ! ವಿಡಿಯೋದ ಕೊನೆಯಲ್ಲಿದೆ ರಾಹುಲ್​ನ ನಿಜ ತಾಕತ್ತು!ವಿವರಗಳಿಗೆhttps://t.co/0xT1xMCCZYನೋಡಿ#RahulGandhiAbs#RahulGandhipic.twitter.com/yIcdD970sw
— Vijayavani (@VVani4U)March 1, 2021


ಕ್ಷಣಕ್ಷಣದ ಮಾಹಿತಿಗಾಗಿವಿಜಯವಾಣಿಫೇಸ್​ಬುಕ್​ ಪೇಜ್​ ಲೈಕ್​ ಮಾಡಿ


ಕೇರಳದಲ್ಲಿ ಕೇಸರಿ ಅಲೆ ಆರಂಭ! ಇಬ್ಬರು ಮಾಜಿ ನ್ಯಾಯಮೂರ್ತಿಗಳು ಸೇರಿ 18 ಮಂದಿ ಬಿಜೆಪಿ ಸೇರ್ಪಡೆ

ಜಾಲತಾಣದಲ್ಲಿ ಕಿಚ್ಚು ಹಚ್ಚಿದ ನಟಿಯ ಬೆತ್ತಲೆ ಫೋಟೋ: ಈಕೆ ಐಪಿಎಲ್​ ಆ್ಯಂಕರ್​ ಸಹ ಹೌದು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − 4 =
Remember me
