ಬೆಂಗಳೂರು:ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲಿಸಲು ನಡೆಯುತ್ತಿರುವ ಈ ಸಭೆಯಲ್ಲಿ 26 ಪಕ್ಷದ ನಾಯಕರ ಸಭೆ ನಡೆಸಿದ್ದು, ಹಲವು ವಿಚಾರಗಳು ಚರ್ಚೆಯಾಗಿದೆ. ಇದರಲ್ಲಿ ವಿಪಕ್ಷಗಳ ಮೈತ್ರಿ ಒಕ್ಕೂಟಕ್ಕೆ ಇಂಡಿಯಾ ಎಂದು ಹೆಸರಿಡಲು ನಿರ್ಣಯ ಕೈಗೊಳ್ಳಲಾಗಿದೆ.
ಸಭೆ ನಂತರ ಎಲ್ಲಾ ಪಕ್ಷದ ನಾಯಕರು ಸೇರಿ ಸುದ್ದಿಗೊಷ್ಠಿ ನಡೆಸಿದ್ದಾರೆ. ಈ ವೇಳೆ ಮಾತನಾಡಿದ ಕಾಂಗ್ರೆಸ್​​​ ನಾಯಕ ರಾಹುಲ್​ ಗಾಂಧಿ,ಇದು ನಮ್ಮದು ಎರಡನೇ ಸಭೆಯಾಗಿದ್ದು, ಇದು ಫಲಪ್ರದವಾಗಿದೆ. ಬಿಜೆಪಿ ವಿಚಾರ ಧಾರೆ ವಿರುದ್ಧ ಅದರ ಯೋಚನೆ ವಿರುದ್ಧ ನಮ್ಮ‌ ಹೋರಾಟ ಇರಲಿದೆ.
ದೇಶದ ಜನರ ಪೂರ್ಣ ಹಣ ಪ್ರಧಾನಿ ಮೋದಿ ಸನೀಪದ ಕೆಲವೇ ಉದ್ಯಮಿಗಳ ಕೈಗೆ ಹೋಗುತ್ತಿದೆ.ನಮ್ಮ‌ ಹೋರಾಟ ಬಿಜೆಪಿ ವಿರುದ್ಧವಲ್ಲ. ದೇಶದ ಧ್ವನಿ ಹತ್ತಿಕ್ಕುತ್ತಿರುವುದರ ವಿರುದ್ಧವಾಗಿದೆ. ನಾವು ಈಗ ಇಂಡಿಯಾ ರಚಿಸಿಕೊಂಡಿದ್ದೇವೆ. ಹೋರಾಟ ಎನ್ ಡಿಎ ಮತ್ತು ಇಂಡಿಯಾ ವಿರುದ್ಧ, ಮೋದಿ ಹಾಗೂ ಇಂಡಿಯಾ ವಿರುದ್ಧವಾಗಿದೆ. ಫಲಿತಾಂಶ ಏನಾಗಬಹುದೆಂದು ಯೋಚಿಸಬೇಕಿಲ್ಲ. ಮುಂದೆ ನಮ್ಮ‌ ಆಕ್ಷನ್ ಪ್ಲಾನ್ ಸಿದ್ಧವಾಗಲಿದೆ. ಎಲ್ಲರೂ ಒಟ್ಟಾಗಿ ಹೋಗಲಿದ್ದೇವೆ ಎಂದಿದ್ದಾರೆ.
26 ಪ್ರಮುಖ ಪಕ್ಷಗಳ ನಾಯಕರು ಈ ಸಭೆಯಲ್ಲಿ ಪಾಲ್ಗೊಂಡಿದ್ದಾರೆ. 2024ರ ಚನಾವಣೆಯಲ್ಲಿ ಮೋದಿ ಸೋಲಿಸಲು ಎಲ್ಲಾ ಪಕ್ಷಗಳ ಒಗ್ಗಟ್ಟಿನ ಮಂತ್ರ, ಸಿದ್ಧಾಂತ ಸೇರಿದಂತೆ ಹಲವು ವಿಚಾರಗಳ ಕುರಿತು ಚರ್ಚೆ ನಡೆದಿದೆ ಎಂದು ಹೇಳಿದ್ದಾರೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ಜಾರ್ಖಂಡ್ ಸಿಎಂ ಹೇಮಂತ್ ಸೊರೇನ್, ಪಂಜಾಬ್ ಸಿಎಂ ಭಗವಂತ ಮಾನ್, ಮಾಜಿ ಸಿಎಂ ಉದ್ದವ್ ಠಾಕ್ರೆ, ಶರತ್ ಪವಾರ್, ಸೀತಾರಾಂ ಯೆಚೂರಿ, ಡಿ.ರಾಜಾ ಸೇರಿದಂತೆ ಹಲ ನಾಯಕರು ಉಪಸ್ಥಿತರಿದ್ದರು. ತಮಿಳುನಾಡು ಸಿಎಂ ಸ್ಟಾಲಿನ್, ಬಿಹಾರ ಸಿಎಂ ನಿತಿಶ್ ಕುಮಾರ್ ಸುದ್ದಿಗೋಷ್ಠಿಯಿಂದ ದೂರ ಉಳಿದರು.
ನಮ್ಮ ಮೈತ್ರಿಕೂಟಕ್ಕೆ ‘INDIA’ ಅಂತ ನಾಮಕರಣ ಮಾಡಿದ್ದೇವೆ: ಮಲ್ಲಿಕಾರ್ಜುನ ಖರ್ಗೆ


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 1 =
Remember me
