ನವದೆಹಲಿ:ಬಿಜೆಪಿ ಪಕ್ಷ ಬಗ್ಗೆ ನನಗೆ ಗುರು ಸಮಾನವಾದುದು. ಯಾವ ಸಂದರ್ಭದಲ್ಲಿ ಏನು ಮಾಡಬೇಕು ಎಂಬುದನ್ನು ಸ್ಪಷ್ಟವಾಗಿ ಹೇಳಿಕೊಟ್ಟಿದೆ. ಹೀಗಾಗಿ ಬಿಜೆಪಿ ನನ್ನ ಗುರು ಎಂದು ಪರಿಗಣಿಸಿದ್ದೇನೆ ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ರಾಹುಲ್ ಗಾಂಧಿ ಮಾತನಾಡುತ್ತಾ, ಬಿಜೆಪಿ ಪಕ್ಷ ನಮ್ಮ ಮೇಲೆ ನಿರಂತರವಾಗಿ ದಾಳಿ ಮಾಡುತ್ತಲೇ ಇದೆ. ಇದನ್ನು ನಾನು ಸ್ವಾಗತಿಸುತ್ತೇನೆ. ಇದರಿಂದ ಬಿಜೆಪಿಯ ಸಿದ್ದಾಂತಗಳನ್ನು ಕಾಂಗ್ರೆಸ್​​ಗೆ ಅರಿತುಕೊಂಡು ಮುಂದೆ ಸಾಗಲು ಸಾಧ್ಯವಾಗುತ್ತದೆ. ಈ ಮೂಲಕ ರಾಜಕೀಯದಲ್ಲಿ ಏನು ಮಾಡಬಾರದು ಎಂಬುದನ್ನು ಬಿಜೆಪಿ ಹೇಳಿಕೊಡುತ್ತಿದೆ. ಹೀಗಾಗಿ ನಾನು ಬಿಜೆಪಿಯನ್ನು ದಾರಿ ತೋರಿಸುವ ಗುರು ಎಂದು ಸ್ವೀಕಾರ ಮಾಡುತ್ತೇನೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಭಾರತ್ ಜೋಡೋ ಯಾತ್ರೆಯ ಬಗ್ಗೆ ಮಾತನಾಡುತ್ತಾ, ಕನ್ಯಾಕುಮಾರಿಯಿಂದ ಕಾಶ್ಮೀರದ ವರೆಗೆ ಸಾಮನ್ಯ ಯಾತ್ರೆಯಂತೆ ಆರಂಭಿಸಿದೆ. ಆದರೆ ಮುಂದಿನ ಹಂತಗಳಲ್ಲಿ ನನಗೆ ಅರ್ಥವಾಯ್ತು, ಇದು ಸಾಮಾನ್ಯ ಯಾತ್ರೆಯಲ್ಲ. ಈ ಯಾತ್ರೆಗೆ ಧ್ವನಿ ಹಾಗೂ ಭಾವನೆಗಳು ಇರುವುದನ್ನು ಅರಿತುಕೊಂಡೆ ಎಂದರು.(ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − seventeen =
Remember me
