ನವದೆಹಲಿ:ಅಮೆರಿಕ ಪ್ರವಾಸದಲ್ಲಿರುವ ರಾಹುಲ್​ ಗಾಂಧಿ, ಈ ಹಿಂದೆ ಭಾರತದ ಬಗ್ಗೆ ಹೊರ ದೇಶಗಳಲ್ಲಿ ಕೀಳಾಗಿ ಮಾತನಾಡುತ್ತಾರೆ ಎಂದು ಆರೋಪಿಸಲಾಗಿತ್ತು. ಈ ಬಗ್ಗೆ ಅನೇಕ ಪರ ವಿರೋಧ ಹೇಳಿಕೆಗಳೂ ಕೇಳಿ ಬಂದಿದ್ದವು.
ಅಮೆರಿಕದಲ್ಲಿ ಮೂರು ನಗರಗಳ ಪ್ರವಾಸದಲ್ಲಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ರಷ್ಯಾ-ಉಕ್ರೇನ್ ಸಂಘರ್ಷದ ಕುರಿತು ಬಿಜೆಪಿ ನೇತೃತ್ವದ ಕೇಂದ್ರದ ನಿಲುವನ್ನು ಬೆಂಬಲಿಸಿದ್ದು, ಕಾಂಗ್ರೆಸ್​ ಸರ್ಕಾರ ಇದ್ದಿದ್ದರೆ ಇದೇ ರೀತಿ ಪ್ರತಿಕ್ರಿಯಿಸುವುದಾಗಿ ಹೇಳಿದ್ದಾರೆ.ಇದನ್ನೂ ಓದಿ:ಅನರ್ಹರಾದರೂ ರಾಹುಲ್ ಗಾಂಧಿ ಸಚಿನ್, ಕೊಹ್ಲಿಯಂತೆ ಉತ್ತಮ ಫಾರ್ಮ್​ನಲ್ಲಿದ್ದಾರೆ: ಸಂಜಯ್ ರಾವತ್
ವಾಷಿಂಗ್ಟನ್‌ನ ನ್ಯಾಷನಲ್ ಪ್ರೆಸ್ ಕ್ಲಬ್‌ನಲ್ಲಿ ಪತ್ರಕರ್ತರನ್ನುದ್ದೇಶಿಸಿ ಮಾತನಾಡಿದ ರಾಹುಲ್​ ಗಾಂಧಿ, “ನಮಗೆ ರಷ್ಯಾದೊಂದಿಗೆ ಬಹಳ ಹಿಂದಿನ ಸಂಬಂಧವಿದೆ. ನಾವು ಅವರ ಮೇಲೆ ಕೆಲವು ವಿಚಾರಗಳಿಗಾಗಿ ಅವಲಂಬಿಸಿದ್ದೇವೆ. ಹಾಗಾಗಿ ನಾನು ಭಾರತ ಸರ್ಕಾರದ ನಿಲುವನ್ನೇ ಹೊಂದಿದ್ದೇನೆ… ಕೊನೆಗೆ, ನಾವು ನಮ್ಮ ಹಿತಾಸಕ್ತಿಗಳನ್ನು ಸಹ ನೋಡಬೇಕು” ಎಂದು ಹೇಳಿಕೆ ನೀಡಿದ್ದಾರೆ.
ಫೆಬ್ರವರಿ 2022ರಿಂದ ಯೂಕ್ರೇನ್‌ನೊಂದಿಗಿನ ಸಂಘರ್ಷದ ದೃಷ್ಟಿಯಿಂದ ರಷ್ಯಾದೊಂದಿಗಿನ ಭಾರತದ ದ್ವಿಪಕ್ಷೀಯ ಸಂಬಂಧಗಳನ್ನು ಕಾಂಗ್ರೆಸ್ ಹೇಗೆ ನಿರ್ಣಯಿಸುತ್ತದೆ ಎಂಬ ಪ್ರಶ್ನೆಗೆ ಉತ್ತರಿಸುವಾಗ ಕಾಂಗ್ರೆಸ್ ನಾಯಕ ಈ ಹೇಳಿಕೆಯನ್ನು ನೀಡಿದ್ದಾರೆ.ಇದನ್ನೂ ಓದಿ:ಸಂಸತ್ ಭವನ ಉದ್ಘಾಟನೆಗೆ ರಾಷ್ಟ್ರಪತಿಗೆ ಆಹ್ವಾನ ನೀಡದಿರುವುದು ಸಾಂವಿಧಾನಿಕ ಹುದ್ದೆಗೆ ಮಾಡಿದ ಅವಮಾನ: ರಾಹುಲ್ ಗಾಂಧಿ
ಭಾರತ ಮತ್ತು ಅಮೆರಿಕ ನಡುವಿನ ಸಂಬಂಧಗಳು ಮುಖ್ಯವೆಂದು ಗಾಂಧಿಯವರು ಒತ್ತಿ ಹೇಳಿದ್ದು “ರಕ್ಷಣಾ ಸಂಬಂಧವನ್ನು ಹೊಂದಲು ಇದು ಮುಖ್ಯವಾಗಿದೆ. ಆದರೆ ನಾವು ಇತರ ಕ್ಷೇತ್ರಗಳ ಸಹಕಾರವನ್ನೂ ಪರಿಗಣಿಸಬೇಕಾಗಿದೆ ಎಂದು ನಾನು ಭಾವಿಸುತ್ತೇನೆ”ಎಂದು ಅವರು ಹೇಳಿದರು. ಸಂವಾದದ ಸಮಯದಲ್ಲಿ, ಭಾರತದಲ್ಲಿ ಪತ್ರಿಕಾ ಮತ್ತು ಧಾರ್ಮಿಕ ಸ್ವಾತಂತ್ರ್ಯಗಳು, ಅಲ್ಪಸಂಖ್ಯಾತರು ಎದುರಿಸುತ್ತಿರುವ ಸಮಸ್ಯೆಗಳು ಮತ್ತು ಆರ್ಥಿಕತೆಯ ಸ್ಥಿತಿ ಸೇರಿದಂತೆ ಹಲವಾರು ಪ್ರಶ್ನೆಗಳಿಗೆ ಗಾಂಧಿ ಉತ್ತರಿಸಿದರು.(ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 4 =
Remember me
