ನವದೆಹಲಿ:ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್​ ಗಾಂಧಿ ಶುಕ್ರವಾರ (ಜುಲೈ 26) ಉತ್ತರಪ್ರದೇಶದ ಸುಲ್ತಾನ್​ಪುರಕ್ಕೆ ಭೇಟಿ ನೀಡಿದ್ದರು. ತಮ್ಮ ಪ್ರವಾಸದ ವೇಳೆ ಚಪ್ಪಲಿ ಹೊಲಿಯುವ ಚಮ್ಮಾರನ ಅಂಗಡಿಗೆ ದಿಢೀರ್ ಭೇಟಿ ನೀಡುವ ಮೂಲಕ ಗಮನ ಸೆಳೆದಿದ್ದ ರಾಹುಲ್​ ಇದೀಗ ತಮ್ಮ ಕೆಲಸದ ಮೂಲಕ ಸುದ್ದಿಯಾಗಿದ್ದಾರೆ.
ತಮ್ಮ ವಿರುದ್ಧ ದಾಖಲಾಗಿದ್ದ ಮಾನನಷ್ಟ ಮೊಕದ್ದಮೆ ಪ್ರಕರಣ ಸಂಬಂಧ  ಉತ್ತರ ಪ್ರದೇಶದ ಸುಲ್ತಾನ್‌ಪುರದಲ್ಲಿರುವ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಹಾಜರಾಗಿದ್ದ ರಾಹುಲ್​ ವಿಚಾರಣೆ ಮುಗಿಸಿ ದೆಹಲಿಯತ್ತ ವಾಪಸ್​ ಆಗುವ ವೇಳೆ ಚಮ್ಮಾರನ ಅಂಗಡಿಗೆ ದಿಢೀರ್​ ಭೇಟಿ ನೀಡಿ ಮಾಲೀಕನ ಜೊತೆ ಮಾತುಕತೆ ನಡೆಸಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿತ್ತು.
ಕಾಂಗ್ರೆಸ್ ನಾಯಕನ ಅನಿರೀಕ್ಷಿತ ಭೇಟಿಯಿಂದ ಅಂಗಡಿ ಮಾಲೀಕ  ರಾಮ್ ಚೈತ್ ಆಶ್ಚರ್ಯಚಕಿತಗೊಂಡಿದ್ದು, ರಾಹುಲ್​ ಬಳಿ ಅವರ ಹಾಗೂ ಕುಟುಂಬದ ಸಮಸ್ಯೆಗಳನ್ನು ಹೇಳಿಕೊಂಡಿದ್ದಾರೆ. ಸಮಸ್ಯೆಗಳನ್ನು ಆಲಿಸಿದ ರಾಹುಲ್​ ಬಗೆಹರಿಸಲು ಬೇಕಾದ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು. ಇದೀಗ ರಾಹುಲ್​ ರಾಮ್​ ಜೆತ್​ಗೆ ಶೂ ಹೊಲೆಯುವ ಯಂತ್ರವನ್ನು ನೀಡಿದ್ದು, ಕುಟುಂಬಕ್ಕೆ ಅಗತ್ಯ ನೆರವು ನೀಡುವುದಾಗಿ ಹೇಳಿದ್ದಾರೆ.
जननायक राहुल गांधी जी कल सुल्तानपुर (UP) में मोची रामचैत जी से मिले थे, उनके काम की बारीकियों को समझा था।अब उनके लिए जूते सिलने की मशीन भिजवाई है, जिससे रामचैत जी को जूते की सिलाई में आसानी होगी।ऐसे हैं आपके राहुल, जन-जन के राहुल ❤️pic.twitter.com/wEQNMneZdB
ಇದನ್ನೂ ಓದಿ:ಕೋಚಿಂಗ್​ ಸೆಂಟರ್​ಗೆ ಮಳೆ ನೀರು ನುಗ್ಗಿ ಮೂವರು ವಿದ್ಯಾರ್ಥಿಗಳ ಸಾವು; ಮುಂದುವರೆದ ರಕ್ಷಣಾ ಕಾರ್ಯಾಚರಣೆ
ಈ ಕುರಿತು ಟ್ವೀಟ್​ ಮಾಡಿರುವ ಎಐಸಿಸಿ, ನಿನ್ನೆ ನಮ್ಮ ನಾಯಕ ರಾಹುಲ್ ಗಾಂಧಿಯವರು ಸುಲ್ತಾನ್‌ಪುರದಲ್ಲಿ (ಯುಪಿ) ರಾನ್​ ಚೈತ್​ ಅವರನ್ನು ಭೇಟಿಯಾಗಿ ಕೆಲಸದ ಬಗ್ಗೆ ತಿಳಿದುಕೊಂಡಿದ್ದರು. ಇದೀಗ ಅವರ ಕೆಲಸವನ್ನು ಸುಲಭಗೊಳಿಸುವ ನಿಟ್ಟಿನಲ್ಲಿ ಶೂ ಹೊಲೆಯುವ ಯಂತ್ರವನ್ನು ಕಳುಹಿಸಿಕೊಡಲಾಗಿದ್ದು, ಎಲ್ಲರಿಗೂ ನಾಯಕನಾಗಿ ರಾಹುಲ್ ಗಾಂಧಿಯವರ ಸಮರ್ಪಣಾಭಾವವನ್ನು ಈ ಸೂಚಕ ಉದಾಹರಿಸುತ್ತದೆ ಎಂದು ಬರೆದುಕೊಂಡಿದೆ.
ಇತ್ತ ರಾಹುಲ್​ ಗಾಂಧಿ ಅವರ ಕಾರ್ಯಕ್ಕೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದ್ದು, ಹಲವರು ಇವರ ಕಾರ್ಯವನ್ನು ಮೆಚ್ಚಿ ಕಮೆಂಟ್​ ಹಾಕುತ್ತಿದ್ದಾರೆ. ರಾಹುಲ್​ ಗಾಂಧಿ ಸಹಾಯಹಸ್ತ ಚಾಚಿರುವುದು ಇದೇ ಮೊದಲಲ್ಲ. ಈ ಹಿಂದೆ ಭಾರತ್ ಜೋಡೋ ಯಾತ್ರೆ ಹಾಗೂ ಎಲೆಕ್ಷನ್​ ರ್‍ಯಾಲಿ​ಗಳಲ್ಲಿ ಸಹಾಯ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:three + nine =
Remember me
