ನವದೆಹಲಿ:ಇಂದು (ಆಗಸ್ಟ್​ 18) ತಮ್ಮ ಟ್ವಿಟರ್​ ಖಾತೆಯಲ್ಲಿ ವಿಡಿಯೋವೊಂದನ್ನು ಹಂಚಿಕೊಂಡ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಸೋಷಿಯಲ್​ ಮೀಡಿಯಾದಲ್ಲಿ ತಮ್ಮ ಅಳಲನ್ನು ತೋಡಿಕೊಂಡ ರಾಮೇಶ್ವರ್​​ ಎಂಬ ತರಕಾರಿ ವ್ಯಾಪರಿಯ ವಿಡಿಯೋ ಭಾರೀ ವೈರಲ್​ ಆಗಿತ್ತು. ಈ ಹಿನ್ನಲೆ ರಾಮೇಶ್ವರ್  ಮತ್ತು ಅವರ ಕುಟುಂಬವನ್ನು ರಾಹುಲ್​, ತಮ್ಮ ದೆಹಲಿಯ ನಿವಾಸದಲ್ಲಿ ಭೇಟಿ ಮಾಡಿದ್ದರು.
ಇದನ್ನೂ ಓದಿ:ಮದುವೆಯ ಕರೆಯೋಲೆ ಜತೆ ಭುವನ್ ಕಡೆಯಿಂದ ಮತ್ತೊಂದು ಸರ್‌ಪ್ರೈಸ್; ಸಿನಿಮಾಗೆ ಕಂಬ್ಯಾಕ್?
ರಾಮೇಶ್ವರ್​ಗೆ ತಮ್ಮ ನಿವಾಸದಲ್ಲಿ ಔತಣಕೂಟ ಏರ್ಪಡಿಸಿದ್ದ ರಾಹುಲ್​ ಗಾಂಧಿ,​ ಅವರೊಟ್ಟಿಗೆ ಸಂಭಾಷಣೆ ನಡೆಸಿದ್ದಾರೆ. ಈ ವೇಳೆ ನನ್ನನ್ನು ಸರ್ ಎಂದು ಕರೆಯಬೇಡಿ, ರಾಹುಲ್​ ಎಂದೇ ಕರೆಯಿರಿ ಎಂದು ಹೇಳಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ.
ಇದನ್ನೂ ಓದಿ:ಅನುದಾನ ಇಲ್ಲದಿದ್ದರೂ ಭೂಮಿ ಪೂಜೆ: ಸಂಸದ ಪ್ರಜ್ವಲ್ ರೇವಣ್ಣ
ತರಕಾರಿ ವ್ಯಾಪರಸ್ಥರಾದ ರಾಮೇಶ್ವರ್​ ಅವರ ಬಗ್ಗೆ ಟ್ವೀಟ್​ನಲ್ಲಿ ಹಂಚಿಕೊಂಡ ರಾಹುಲ್​ ಗಾಂಧಿ, “ರಾಮೇಶ್ವರ್ ಜಿ ಭಾರತದ ಧ್ವನಿಯಾಗಿದ್ದು, ಅವರ ನೋವುಗಳು, ಸಮಸ್ಯೆಗಳು ಮತ್ತು ಸವಾಲುಗಳು ಇಂದಿನ ನಮ್ಮ ಮುಖ್ಯ ಚರ್ಚೆಯಿಂದ ದೂರವಿದೆ. ಅವರ ಧ್ವನಿಯನ್ನು ಆಲಿಸುವುದು ಮತ್ತು ಹೋರಾಟಗಳಲ್ಲಿ ಸಹಕರಿಸುವುದು ನಮ್ಮೆಲ್ಲರ ನೈತಿಕ ಜವಾಬ್ದಾರಿಯಾಗಿದೆ” ಎಂದು ಬರೆದು ಟ್ವಿಟರ್​ನಲ್ಲಿ ಪೋಸ್ಟ್​ ಮಾಡಿದ್ದಾರೆ.
रामेश्वर जी उस भारत की आवाज़ हैं जिसकी पीड़ा, मुद्दे और चुनौतियां आज मुख्यधारा की बहस से बहुत दूर हैं।
उस भारत की आवाज़ सुनना और संघर्षों का मुकाबला करने में साथ निभाना हम सब की नैतिक ज़िम्मेदारी है।
उनकी सच्चाई और सादगी से भरी बातचीत का पूरा वीडियो:https://t.co/OL3hB2rQVQpic.twitter.com/JTwUulQ4aF
— Rahul Gandhi (@RahulGandhi)August 18, 2023

ವಿಡಿಯೋದಲ್ಲಿ, ರಾಮೇಶ್ವರ್ ಅವರೊಂದಿಗೆ ರಾಹುಲ್​ ಗಾಂಧಿ ಕೆಲ ಕಾಲ ಸಂವಾದ ನಡೆಸಿದ್ದಾರೆ. ಈ ವೇಳೆ ರಾಹುಲ್​ ಅವರನ್ನು ಸರ್​ ಎಂದು ಸಂಬೋಧಿಸಿದ ರಾಮೇಶ್ವರ್​ಗೆ, ​”ನೀವು ನನ್ನನ್ನು ಸರ್ ಎಂದು ಕರೆಯಬೇಡಿ, ರಾಹುಲ್ ಗಾಂಧಿ ಎಂದೇ ಕರೆಯಿರಿ” ಎಂದು ಹೇಳಿದ್ದಾರೆ. ತಮ್ಮಿಬ್ಬರ ಸಂಭಾಷಣೆಯ ಪೂರ್ತಿ ವಿಡಿಯೋವನ್ನು ಯುಟ್ಯೂಬ್​ನಲ್ಲಿ ಅಪ್ಲೋಡ್​ ಮಾಡಿದ್ದಾರೆ,(ಏಜೆನ್ಸೀಸ್).
‘ಪಿಎಂ ಕೇರ್ಸ್‌ ಫಂಡ್’‌ ಸರ್ಕಾರದ್ದೆಂದು ಭಾವಿಸಿ ಮುಗ್ಧ ಜನತೆ ಅಪಾರ ಪ್ರಮಾಣದಲ್ಲಿ ಹಣವನ್ನು ದಾನವಾಗಿ ನೀಡುತ್ತಿದ್ದಾರೆ: ಸಿಎಂ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × one =
Remember me
