ನವದೆಹಲಿ:ತೆಲಂಗಾಣದಲ್ಲಿ ಮುಖ್ಯಮಂತ್ರಿ ಕೆಸಿಆರ್​ ನೇತೃತ್ವದ ಭಾರತ ರಾಷ್ಟರ ಸಮಿತ ಪಕ್ಷವು ಯುವಜನತೆಯ ಕನಸಿನೊಂದಿಗೆ ಆಡಿಕೊಳ್ಳುತ್ತಿದ್ದು, ಅವರ ಆಶೋತ್ತರಗಳನ್ನು ಕೊಂದಿದೆ ಎಂದು ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ಧಾರೆ.
ತೆಲಂಗಾಣ ರಾಜ್ಯ ಲೋಕಸೇವಾ ಆಯೋಗ (TSPSC) ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ 23 ವರ್ಷದ ಯುವತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಕೆಸಿಆರ್​ ನೇತೃತ್ವದ ಬಿಆರ್​ಎಸ್​ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಕಳೆದ 10 ವರ್ಷಗಳಲ್ಲಿ ಬಿಜೆಪಿ ಸಂಬಂಧ ಸಮಿತಿಯಾದ ಬಿಆರ್​ಎಸ್​ ಹಾಗೂ ಬಿಜೆಪಿಯ ಅಸಮರ್ಥತೆಯಿಂದಾಗಿ ರಾಜ್ಯವನ್ನು ಹಾಳು ಮಾಡಿದೆ. ತೆಲಂಗಾಣದಲ್ಲಿ ನಾವು ಸರ್ಕಾರ ರಚಿಸಿದರೆ ಉದ್ಯೋಗ ಕ್ಯಾಲೆಂಡರ್​ ಬಿಡುಗಡೆ ಮಾಡುತ್ತೇವೆ. 1 ತಿಂಗಳಲ್ಲಿ ಯುಪಿಎಸ್‌ಸಿ ಮಾದರಿಯಲ್ಲಿ ಟಿಎಸ್‌ಪಿಎಸ್‌ಸಿ ಮರುಸಂಘಟನೆ ಮತ್ತು ಒಂದು ವರ್ಷದೊಳಗೆ ಖಾಲಿ ಇರುವ 2 ಲಕ್ಷ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡುತ್ತೇವೆ. ಇದು ಕಾಂಗ್ರೆಸ್​ನ ಗ್ಯಾರಂಟಿ ಎಂದಿದ್ದಾರೆ.
कल हैदराबाद में एक छात्रा की आत्महत्या का समाचार अत्यंत दुखद है।ये आत्महत्या नहीं, हत्या है – युवाओं के सपनों की, उनकी उम्मीदों और आकांक्षाओं की।तेलंगाना का युवा आज बेरोज़गारी से पूरी तरह टूट चुका है। पिछले 10 सालों में BJP रिश्तेदार समिति – BRS और BJP ने मिलकर अपनी अक्षमता…
ಇದನ್ನೂ ಓದಿ:ಬಾಯ್.. ಬಾಯ್​ ಇಮಾಮ್​ ಉಲ್ ಹಕ್, ಇಲ್ಲಿಗೆ ಬಂದಿದ್ದಕ್ಕೆ ಧನ್ಯವಾದ ಎಂದ ಹಾರ್ದಿಕ್ ಪಾಂಡ್ಯ; ವಿಡಿಯೋ ವೈರಲ್
ಯುವತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರತಿಕ್ರಿಯಿಸಿದ್ದು, ಆಡಳಿತರೂಢ ಬಿಆರ್​ಎಸ್​ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಲೋಕಸೇವಾ ಆಯೋಗದ ಪರೀಕ್ಷೆಯನ್ನು ಪದೇ ಪದೇ ಮುಂದೂಡಿದ್ದಕ್ಕೆ ಮನನೊಂದು ಯುವತಿ ಆತ್ಮಹತ್ಯೆ ಮಾಡಿಕೊಂಡಿರುವ ವಿಚಾರ ತಿಳಿದು ಆಘಾತವಾಗಿದೆ.
ಬಿಆರ್​ಎಸ್​ ಸರ್ಕಾರದ ಹತಾಶ ಮನೋಭಾವದಿಂದಾಗಿ ಯುವಜನತೆಯ ಬಾಳು ಕತ್ತಲೆಯಲ್ಲಿ ಕಳೆಯುವಂತೆ ಮಾಡಿದೆ. ಮುಂಬರುವ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಯುವಕರು ಭ್ರಷ್ಟ, ಅಸಮರ್ಥ ಬಿಆರ್​ಎಸ್​ ಸರ್ಕಾರಕ್ಕೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಬರೆದುಕೊಂಡಿದ್ದಾರೆ.
ವರ್ಷಾಂತ್ಯದಲ್ಲಿ ತೆಲಂಗಾಣ ರಾಜ್ಯ ವಿಧಾನಸಭೆ ಚುನಾವಣೆ ನಡೆಯಲಿದ್ದು, ನವೆಂಬರ್ 30ರಂದು ಮತದಾನ ನಡೆಯಲಿದೆ. ಡಿಸೆಂಬರ್​ 3ಕ್ಕೆ ಫಲಿತಾಂಶ ಪ್ರಕಟವಾಗಲಿದೆ.
Shocked and deeply anguished by the suicide of a 23-year-old girl student in Telangana, who reportedly took the drastic step to end her life due to repeated postponements and irregularities in the State Public Service Commission Exams.In this hour of grief and anger, our heart…
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 + thirteen =
Remember me
