ಪುದುಚೇರಿ:ಪ್ರಧಾನಿಯಾಗಿದ್ದ ರಾಜೀವ್ ಗಾಂಧಿ ಹತ್ಯೆ ನಡೆದು ಮೂರು ದಶಕಗಳೇ ಕಳೆದಿದ್ದರೂ ಇದೀಗ ಆ ವಿಚಾರ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ತಂದೆಯ ಹತ್ಯೆಯ ವಿಚಾರವಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರತಿಕ್ರಿಯಿಸಿದ್ದು, ಆ ಕುರಿತು ತಮ್ಮ ಅನಿಸಿಕೆಯನ್ನೂ ಹೇಳಿದ್ದಾರೆ.
ಅಷ್ಟಕ್ಕೂ ರಾಜೀವ್ ಗಾಂಧಿ ಹತ್ಯೆಯ ವಿಚಾರ ಪ್ರಸ್ತಾಪವಾಗಲು ಮುಖ್ಯ ಕಾರಣ ವಿದ್ಯಾರ್ಥಿನಿಯರು. ಪುದುಚೇರಿಯಲ್ಲಿನ ಭಾರತಿದಾಸನ್​ ಸರ್ಕಾರಿ ಮಹಿಳಾ ಕಾಲೇಜಿನ ವಿದ್ಯಾರ್ಥಿನಿಯರ ಜತೆ ಬುಧವಾರ ನಡೆದ ಸಂವಾದ ವೇಳೆ ಈ ವಿಷಯ ಪ್ರಸ್ತಾಪಗೊಂಡಿದೆ. ‘ನಿಮ್ಮ ತಂದೆ ಎಲ್​ಟಿಟಿಇಯವರಿಂದ ಹತ್ಯೆಗೀಡಾಗಿದ್ದರು. ಎಲ್​ಟಿಟಿಇ ಸದಸ್ಯರ ಬಗ್ಗೆ ನಿಮ್ಮ ಅನಿಸಿಕೆ ಏನು?’ ಎಂಬುದಾಗಿ ವಿದ್ಯಾರ್ಥಿನಿಯೊಬ್ಬರು ರಾಹುಲ್​ ಗಾಂಧಿ ಅವರನ್ನು ಕೇಳಿದ್ದಾರೆ. ಅದಕ್ಕೆ ರಾಹುಲ್​ ಗಾಂಧಿ ಮುಕ್ತವಾಗಿಯೇ ಉತ್ತರ ನೀಡಿದ್ದಾರೆ.
ಇದನ್ನೂ ಓದಿ:“ಮಾಂಸಾಹಾರ ಕಡಿಮೆ ಮಾಡದಿದ್ದರೆ ಭೂಮಿಗೇ ಅಪಾಯ..”
‘ನಾನು ನನ್ನ ತಂದೆಯನ್ನು ಕಳೆದುಕೊಂಡಿದ್ದಂತೂ ನಿಜ, ಅದು ನನ್ನ ಅತಿ ಕಷ್ಟದ ದಿನಗಳಾಗಿದ್ದವು. ಆದರೆ ನನಗೆ ಯಾರ ಬಗ್ಗೆಯೂ ಸಿಟ್ಟು ಅಥವಾ ದ್ವೇಷವಿಲ್ಲ.. ನಾನು ಕ್ಷಮಿಸುತ್ತೇನೆ..’ ಎಂದು ರಾಹುಲ್​ ಗಾಂಧಿ ಹೇಳಿದ್ದಾರೆ. ಮಾತ್ರವಲ್ಲ, ‘ಹಿಂಸೆ ನಿಮ್ಮಿಂದ ಯಾವುದನ್ನೂ ದೂರಕ್ಕೆ ಕೊಂಡೊಯ್ಯಲು ಸಾಧ್ಯವಿಲ್ಲ. ನನ್ನ ತಂದೆ ನನ್ನೊಳಗೇ ಜೀವಂತವಿದ್ದಾರೆ, ಅವರು ನನ್ನ ಮೂಲಕವೇ ಮಾತನಾಡುತ್ತಿದ್ದಾರೆ’ ಎಂದೂ ರಾಹುಲ್​ ಗಾಂಧಿ ಹೇಳಿದ್ದಾರೆ. (ಏಜೆನ್ಸೀಸ್)
Video | ಸ್ಟೈಲ್​ಕಿಂಗ್​ ಚಾಯ್​ವಾಲಾ: ವೈರಲ್​ ಆಗಿದೆ ಈತನ ಕೈಚಳಕದ ಝಲಕ್​; ಈ ವಿಡಿಯೋ ನೋಡಿದ್ರೆ ಇಲ್ಲೊಮ್ಮೆ ಟೀ ಕುಡಿಯಬೇಕು ಅನಿಸಬಹುದು!

VIDEO| ದೋಸೆ ಬಡಿಸುವ ಪರಿಗೆ ನೆಟ್ಟಿಗರು ಫಿದಾ: ಒಂದೇ ವಾರದಲ್ಲಿ 8 ಕೋಟಿಗೂ ಹೆಚ್ಚು ವೀಕ್ಷಣೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen + eight =
Remember me
