ನವದೆಹಲಿ:2019ರಲ್ಲಿ ಸದ್ದು ಮಾಡಿ ತಣ್ಣಗಾಗಿದ್ದ ಪೆಗಾಸಸ್ ಬೇಹುಗಾರಿಕಾ ಸಾಫ್ಟ್​ವೇರ್​ ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದೆ. ಭಾರತದ ಪತ್ರಕರ್ತರು ಮತ್ತು ರಾಜಕಾರಣಿಗಳ ಮೇಲೆ ಪೆಗಾಸಸ್ ದಾಳಿ ನಡೆದಿರುವುದಾಗಿ ದಿ ಗಾರ್ಡಿಯನ್​ ಹಾಗೂ ವಾಷಿಂಗ್ಟನ್​ ಪೋಸ್ಟ್​ ಸೇರಿದಂತೆ ವಿವಿಧ ಪ್ರಮುಖ ನ್ಯೂಸ್​ ವೆಬ್​ಸೈಟ್​ಗಳು ವರದಿ ಮಾಡಿವೆ. ಅದರಲ್ಲೂ ಪ್ರಮುಖ ರಾಜಕಾರಣಿಗಳಾಗಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಮೇಲೆ ದಾಳಿ ನಡೆದಿದೆ ಎನ್ನಲಾಗಿದೆ.
ಭಾರತದಲ್ಲಿ ಕನಿಷ್ಠ 300 ಜನರ ಮೊಬೈಲ್ ಫೋನ್ ಖಾತೆಗಳನ್ನು ಈ ಸಾಫ್ಟ್​ವೇರ್ ಗುರಿಯಾಗಿಸಿಕೊಂಡಿದೆ ಎಂದು ಹೇಳಲಾಗಿದೆ. ಅದರಲ್ಲಿ ಪ್ರಮುಖವಾಗಿ ರಾಹುಲ್ ಗಾಂಧಿ ಹಾಗೂ ಪ್ರಶಾಂತ್ ಕಿಶೋರ್ ಹೆಸರು ಕೇಳಿಬಂದಿದೆ. ಉಳಿದಂತೆ ಮಮತಾ ಬ್ಯಾನರ್ಜಿ ಸಂಬಂಧಿ ಅಭಿಷೇಕ್ ಬ್ಯಾನರ್ಜಿ, ಪ್ರಧಾನಿ ಮೋದಿಯವರ ಸಂಪುಟ ಸಚಿವರಾಗಿರುವ ಪ್ರಹ್ಲಾದ್ ಪಟೇಲ್ ಹಾಗೂ ಅಶ್ವಿನಿ ವೈಷ್ಣವ್ ಸೇರಿದಂತೆ ಪಕ್ಷದ ಅನೇಕ ಮುಖಂಡರ ಫೋನ್ ಈ ಸ್ಪೈವೇರ್​ನ ಗುರಿಯಾಗಿದೆ ಎನ್ನಲಾಗಿದೆ.
ಇದೇ ವರ್ಷ ಜೂನ್ 14ರಂದು ಅಮ್ನೆಸ್ಟಿಯ ಸೆಕ್ಯುರಿಟಿ ಲ್ಯಾಬ್ ಒಂದು ವಿಧಿವಿಜ್ಞಾನದ ವಿಶ್ಲೇಷಣೆಯನ್ನು ನಡೆಸಿತ್ತು. ಮಮತಾ ಅವರ ಗೆಲುವಿಗೆ ಕಾರಣವಾಗಿದ್ದ ಪ್ರಶಾಂತ್ ಅವರ ಮೊಬೈಲ್ ಪೆಗಾಸಸ್ ಸಾಫ್ಟ್​ವೇರ್ ಸುಳಿಗೆ ಸಿಕ್ಕಿದೆ ಎಂದು ಅದರಲ್ಲಿ ಹೇಳಲಾಗಿತ್ತು. ಹಾಗೆಯೇ ರಾಹುಲ್ ಗಾಂಧಿಯವರ ಎರಡು ಮೊಬೈಲ್ ಸಂಖ್ಯೆಗಳು 2018ರ ಮಧ್ಯದಿಂದ 2019ರ ಮಧ್ಯದವರೆಗೆ ಬೇಹುಗಾರಿಕೆಯಾಗಿರುವುದಾಗಿ ಹೇಳಲಾಗಿದೆ. (ಏಜೆನ್ಸೀಸ್)
ಪೆಗಾಸಸ್ ಸ್ಪೈವೇರ್​ ಎಂದರೇನು? ಹೇಗೆ ಕೆಲಸ ಮಾಡುತ್ತದೆ? ವಾಟ್ಸ್​ಆ್ಯಪ್​ ಮೇಲಿನ ದಾಳಿ ಹೀಗಿರುತ್ತಾ!?

ಚಿನ್ನಾಭರಣ ಪ್ರಿಯರಿಗೆ ಶುಭಸುದ್ದಿ: ಚಿನ್ನ, ಬೆಳ್ಳಿ ದರದಲ್ಲಿ ಇಳಿಕೆ

ತಿರುಪತಿ ತಿಮ್ಮಪ್ಪನಿಗೆ ಆರೂವರೆ ಕೆಜಿ ತೂಕದ ಚಿನ್ನದ ಖಡ್ಗ ಅರ್ಪಿಸಿದ ದಂಪತಿ

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:two × five =
Remember me
