ಹೈದರಾಬಾದ್​:ಜನಸಾಮಾನ್ಯರೊಂದಿಗೆ ಮುಖಾಮುಖಿಯಾಗಿ ಮಾತನಾಡಸಲು ಬಯಸುತ್ತಿರುವ ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ, ಇದೀಗ ನಿನ್ನೆ (ಮೇ.09) ಹೈದರಾಬಾದ್​ನ ಸಾರ್ವಜನಿಕರ ಸಾರಿಗೆ ಬಸ್​ನಲ್ಲಿ ದಿಢೀರ್​ ಪ್ರತ್ಯಕ್ಷಗೊಂಡಿದ್ದು, ಪ್ರಯಾಣಿಕರು ಒಂದು ನಿಮಿಷ ಭಾರೀ ಅಚ್ಚರಿಗೆ ಒಳಗಾಗಿದ್ದಾರೆ. ಚಲಿಸುತ್ತಿದ್ದ ಬಸ್​ನಲ್ಲಿ ಜನರೊಡನೆ ಪ್ರಯಾಣಿಸಿದ ರಾಹುಲ್ ಜನ​ರೊಂದಿಗೆ ಕೆಲವು ನಿಮಿಷ ಸಂವಾದ ನಡೆಸಿದ್ದಾರೆ.
ಇದನ್ನೂ ಓದಿ:ಮುಂದಿನ ಸೀಸನ್​ ಮುಂಬೈ ಇಂಡಿಯನ್ಸ್​ ತಂಡದಲ್ಲಿ ರೋಹಿತ್ ​ಇರಲ್ಲ! ಶಾಕಿಂಗ್ ಹೇಳಿಕೆ ಹರಿಬಿಟ್ಟ ಮಾಜಿ ಕ್ರಿಕೆಟಿಗ
ತೆಲಂಗಾಣ ರಾಜ್ಯ ಸಾರಿಗೆಯ ಬಸ್​ ಹತ್ತಿದ್ದ ರಾಹುಲ್ ಗಾಂಧಿ, ರಾಜ್ಯದ ಸಿಎಂ ಎ. ರೇವಂತ್​ ರೆಡ್ಡಿ ಅವರೊಡನೆ ಸೇರಿ ಪ್ರಯಾಣಿಕರ ಜತೆ ಕೆಲ ಸಮಯ ಮಾತುಕತೆ ನಡೆಸಿ, ಅವರ ಕಷ್ಟಗಳನ್ನು ಆಲಿಸಿದ್ದಾರೆ. ಸರೂರ್​ನಗರದ ಮಲ್ಕಜ್​ಗಿರಿ ಲೋಕಸಭಾ ಕ್ಷೇತ್ರದಲ್ಲಿ ನಡೆದ ಸಾರ್ವಜನಿಕರ ಸಭೆ ಮುಗಿಸಿ, ಸಿಎಂ ಜತೆಗೆ ಬಸ್​ ಹತ್ತಿದ್ದಾರೆ ಎಂದು ವರದಿಯಾಗಿದೆ.
#WATCH| Hyderabad, Telangana: Congress leader and party Lok Sabha candidate from Wayanad and Raebareli seat Rahul Gandhi and CM Revanth Reddy traveled in an RTC bus after the Jana Jathara Sabha. (09.05)
Polling on all 17 Lok Sabha seats of Telangana to take place on May 13.pic.twitter.com/eIrnaMNPjh
— ANI (@ANI)May 10, 2024

“ದೇಶದಲ್ಲಿ ಕಾಂಗ್ರೆಸ್​ನ ಮತ್ತೊಮ್ಮೆ ಅಧಿಕಾರಕ್ಕೆ ತನ್ನಿ, ಖಂಡಿತ ನಾವು ನಿಮಗೆ ನೀಡಿರುವ ಪ್ರಮಾಣವನ್ನು ಉಳಿಸಿಕೊಳ್ಳುತ್ತೇವೆ” ಎಂದ ರಾಹುಲ್​, ಲೋಕಸಭಾ ಚುನಾವಣೆಯ ಹೊಸ್ತಿಲಲ್ಲಿ ಬಿಡುಗಡೆಗೊಳಿಸಿದ ಪ್ರಣಾಳಿಕೆಯಲ್ಲಿ ಕಾಗದವನ್ನು ಪ್ರಯಾಣಿಕರಿಗೆ ಹಂಚಿ, ಅದರಲ್ಲಿರುವ ಯೋಜನೆಗಳ ಬಗ್ಗೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:‘ವಿಜಯವಾಣಿ’ ಕೇವಲ ನನ್ನ ಮನೆಯ ಪತ್ರಿಕೆ ಅಲ್ಲ, ಮನಸ್ಸಿನ ಪತ್ರಿಕೆ: ನಟಿ ತಾರಾ ಅನುರಾಧ
‘ಪಂಚ ನ್ಯಾಯ್’​ ಕಾಗದವನ್ನು ಮುಂದಿಟ್ಟ ರಾಹುಲ್ ಗಾಂಧಿ, ರಾಜ್ಯದಲ್ಲಿ ಕಾಂಗ್ರೆಸ್​ ಅಧಿಕಾರಕ್ಕೆ ಬಂದರೆ ಖಂಡಿತ ಉಚಿತ ಸಾರಿಗೆ ವ್ಯವಸ್ಥೆ ಕಲ್ಪಿಸುತ್ತೇವೆ ಎಂದು ಹೇಳಿದರು. ಸದ್ಯ ರಾಹುಲ್ ಬಸ್​ ಹತ್ತಿ, ಪ್ರಯಾಣಿಕರ ಜತೆಗೆ ನಡೆಸಿದ ಸಂವಾದದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡಿದೆ,(ಏಜೆನ್ಸೀಸ್).
ಎಸ್ಸೆಸ್ಸೆಲ್ಸಿ ಪಾಸ್ ಆದ ವಿದ್ಯಾರ್ಥಿನಿ ಶಿರಚ್ಛೇಧ! ಹತ್ಯೆಗೈದ ಆರೋಪಿ ರುಂಡದ ಜತೆ ಪರಾರಿ

ಮುಂದಿನ ಸೀಸನ್​ ಮುಂಬೈ ಇಂಡಿಯನ್ಸ್​ ತಂಡದಲ್ಲಿ ರೋಹಿತ್ ​ಇರಲ್ಲ! ಶಾಕಿಂಗ್ ಹೇಳಿಕೆ ಹರಿಬಿಟ್ಟ ಮಾಜಿ ಕ್ರಿಕೆಟಿಗ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × three =
Remember me
