ನವದೆಹಲಿ:ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಸದಾ ಒಂದಿಲ್ಲೊಂದು ರೀತಿಯಲ್ಲಿ ಸುದ್ದಿಯಲ್ಲಿರುತ್ತಾರೆ. ಇದೀಗ ಅವರು ಮತ್ತೊಮ್ಮೆ ಟ್ವಿಟ್ಟರ್​ನಲ್ಲಿ ಭಾರೀ ಸುದ್ದಿ ಮಾಡಲಾರಂಭಿಸಿದ್ದಾರೆ. ಒಂದೇ ದಿನ ರಾಹುಲ್​ ಗಾಂಧಿ ಸುಮಾರು 50 ಮಂದಿಯನ್ನು ಟ್ವಿಟ್ಟರ್​ನಲ್ಲಿ ಅನ್​ಫಾಲೋ ಮಾಡಿದ್ದು, ಇದರ ಕುರಿತಾಗಿ ಚರ್ಚೆ ಆರಂಭವಾಗಿದೆ.
ಮಂಗಳವಾರದಂದು ರಾಹುಲ್​ ಗಾಂಧಿ ಅವರ ಟ್ವಿಟ್ಟರ್​ ಖಾತೆಯಿಂದ ತಮ್ಮದೇ ಪಕ್ಷದ ಕೆಲ ನಾಯಕರು, ಸಾಮಾಜಿಕ ಮಾಧ್ಯಮಗಳ ಪ್ರಭಾವಿಗಳು, ಪತ್ರಕರ್ತರೂ ಸೇರಿ ಒಟ್ಟು ದುಮಾರು 50 ಮಂದಿಯನ್ನು ಅನ್​ಫಾಲೋ ಮಾಡಲಾಗಿದೆ. ವಿಶೇಷವೆಂದರೆ ಅವರದೇ ಕ್ಷೇತ್ರವಾದ ವಯ್​ನಾಡಿನ ಸಂಸದರ ಕಚೇರಿಯಲ್ಲಿ ಕೆಲಸ ಮಾಡುವ ಕೆಲ ಅಧಿಕಾರಿಗಳ ಖಾತೆಯನ್ನೂ ರಾಹುಲ್​ ಅನ್​ಫಾಲೋ ಮಾಡಿದ್ದಾರೆ ಎನ್ನಲಾಗಿದೆ. 18.8 ಮಿಲಿಯನ್​ ಫಾಲೋವರ್ಸ್​ ಹೊಂದಿರುವ ರಾಹುಲ್​ ಅವರ ನಡೆ ಸಾಕಷ್ಟು ಕುತೂಹಲ ಕೆರಳಿಸಿದೆ. ಇದೀಗ ರಾಹುಲ್​ 220 ಮಂದಿಯನ್ನು ಫಾಲೋ ಮಾಡುತ್ತಿದ್ದಾರೆ.
ರಾಹುಲ್​ ಅವರ ಈ ನಡೆಗೆ ಕಾಂಗ್ರೆಸ್​ ಸ್ಪಷ್ಟನೆ ನೀಡುವ ಪ್ರಯತ್ನವನ್ನೂ ಮಾಡಿದೆ. ಇದೀಗ ಅವರು ಫಾಲೋ ಮಾಡಬೇಕಾಗಿರುವ ಜನರ ಹೊಸ ಪಟ್ಟಿ ಸಿದ್ಧವಾಗುತ್ತಿದೆ. ಅದಾದ ನಂತರ ಅವರನ್ನು ಫಾಲೋ ಲಿಸ್ಟ್​ಗೆ ಸೇರಿಸಲಾಗುವುದು. ಈಗ ಅನ್​ಫಾಲೋ ಆಗಿರುವ ಕೆಲವರೂ ಆ ಪಟ್ಟಿಯಲ್ಲಿ ಮತ್ತೆ ಸೇರಿಕೊಳ್ಳಬಹುದು ಎಂದು ತಿಳಿಸಿದೆ. ಅದಾಗ್ಯೂ ಈ ಬಗ್ಗೆ ಅನೇಕರು ಅನೇಕ ಮಾತುಗಳನ್ನು ಆಡಿಕೊಳ್ಳುವುದು ಮಾತ್ರ ನಿಲ್ಲಿಸಿಲ್ಲ. (ಏಜೆನ್ಸೀಸ್​)
ಬಾಲ್ಕನಿಯಿಂದ ಕೆಳಗೆ ಪಲ್ಟಿ ಹೊಡೆದ ದಂಪತಿ! ಭಯಾನಕ ದೃಶ್ಯ ಕ್ಯಾಮರಾದಲ್ಲಿ ಸೆರೆ

17 ವರ್ಷದ ವಿದ್ಯಾರ್ಥಿಯೊಂದಿಗೆ ಓಡಿಹೋದ ಶಿಕ್ಷಕಿ! ದಿನಕ್ಕೆ ನಾಲ್ಕು ತಾಸು ಒಟ್ಟಿಗೇ ಕುಳಿತಿರುತ್ತಿದ್ದರು…

ಶಿಕ್ಷಕಿಯೊಂದಿಗೆ ಅಕ್ರಮ ಸಂಬಂಧ ಬೆಳೆಸಿದ ವ್ಯಕ್ತಿ! ಆಕೆಯ ಟಾರ್ಚರ್​ ತಾಳಲಾರದೆ ಆತ್ಮಹತ್ಯೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight + seventeen =
Remember me
