ನವದೆಹಲಿ:2024ರ ಲೋಕಸಭಾ ಚುನಾವಣೆಯ ತಯಾರಿಯಲ್ಲಿ ನಿರತರಾಗಿರುವ ರಾಹುಲ್ ಗಾಂಧಿ, ತಳಮಟ್ಟದ ಜನರನ್ನು ಸಂಪರ್ಕಿಸುವುದರಲ್ಲಿ ನಿರತರಾಗಿದ್ದಾರೆ. ಕೆಲವೊಮ್ಮೆ ಭತ್ತ ನಾಟಿ ಮಾಡಲು ರೈತರೊಂದಿಗೆ ಹೋಗುತ್ತಿದ್ದರೆ, ಕೆಲವೊಮ್ಮೆ ಮೆಕಾನಿಕ್‌ಗಳನ್ನು ಭೇಟಿ ಮಾಡಲು ಹೋಗುತ್ತಿದ್ದಾರೆ.
ಕೈಯ್ಯಲ್ಲಿ ಗರಗಸ ಹಿಡಿದ ರಾಹುಲ್ ಗಾಂಧಿಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರು ಕೆಲವು ದಿನಗಳ ಹಿಂದೆ ಆನಂದ್ ವಿಹಾರ್ ರೈಲು ನಿಲ್ದಾಣದ ಪೋರ್ಟರ್‌ಗಳನ್ನು ಭೇಟಿ ಮಾಡಿದ್ದರು. ಈ ವೇಳೆ ಅವರು ಪ್ರಯಾಣಿಕರ ಸಾಮಾನು ಸರಂಜಾಮುಗಳನ್ನು ತಲೆಯ ಮೇಲೆ ಹೊತ್ತುಕೊಂಡು ಹೋಗುತ್ತಿರುವುದು ಕಂಡು ಬಂದಿದೆ. ರಾಹುಲ್ ಗಾಂಧಿ ಕೂಲಿ ಡ್ರೆಸ್‌ನಲ್ಲಿರುವ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈಗ ಒಂದು ಚಿತ್ರದಲ್ಲಿ ರಾಹುಲ್ ಗಾಂಧಿ ಬಡಗಿಯಂತೆ ಕೈಯ್ಯಲ್ಲಿ ಗರಗಸವನ್ನು ಹಿಡಿದಿದ್ದಾರೆ.
ಪೀಠೋಪಕರಣ ಮಾರುಕಟ್ಟೆಯಲ್ಲಿ ರಾಹುಲ್ರಾಹುಲ್ ಗುರುವಾರ ದೆಹಲಿಯ ಕೀರ್ತಿ ನಗರದಲ್ಲಿರುವ ಏಷ್ಯಾದ ಅತಿದೊಡ್ಡ ಪೀಠೋಪಕರಣ ಮಾರುಕಟ್ಟೆಯಲ್ಲಿ ಮರದ ಕುಶಲಕರ್ಮಿಗಳನ್ನು ಭೇಟಿಯಾಗಲು ಬಂದಿದ್ದರು. ಈ ವೇಳೆ ಕುಶಲಕರ್ಮಿಗಳೊಂದಿಗೆ ರಾಹುಲ್ ಗಾಂಧಿ ಮಾತನಾಡಿದರು. ಅವರೊಂದಿಗೆ ಮಾತನಾಡುವುದರೊಂದಿಗೆ ರಾಹುಲ್ ಗಾಂಧಿ ಸುತ್ತಿಗೆಯಿಂದ ಕಟ್ಟಿಗೆಯನ್ನು ಒಡೆಯುತ್ತಿರುವುದು ಕಂಡುಬಂದಿದೆ.
ರಾಹುಲ್ ಗಾಂಧಿ ಅವರು ಮರದ ಕುಶಲಕರ್ಮಿಗಳೊಂದಿಗೆ ಭೇಟಿಯಾದ ಚಿತ್ರವನ್ನು ತಮ್ಮ ಎಕ್ಸ್ (ಹಿಂದಿನ ಟ್ವಿಟರ್) ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇಂದು ದೆಹಲಿಯ ಕೀರ್ತಿನಗರದಲ್ಲಿರುವ ಏಷ್ಯಾದ ಅತಿದೊಡ್ಡ ಪೀಠೋಪಕರಣ ಮಾರುಕಟ್ಟೆಗೆ ಹೋಗಿ ಕಾರ್ಪೆಂಟರ್ ಸಹೋದರರನ್ನು ಭೇಟಿಯಾಗಿದ್ದೇನೆ ಎಂದು ಕಾಂಗ್ರೆಸ್ ಸಂಸದರು ಬರೆದುಕೊಂಡಿದ್ದಾರೆ.
ಮರಗೆಲಸದ ಕೌಶಲ ಕಲಿತ ರಾಹುಲ್ಬಡಗಿಗಳು ಕಠಿಣ ಪರಿಶ್ರಮವಹಿಸುತ್ತಾರೆ. ಅದ್ಭುತ ಕಲಾವಿದರು, ಶಿಲ್ಪಗಳನ್ನು ಕೆತ್ತುವುದರಲ್ಲಿ ನಿಪುಣರು ಎಂದು ರಾಹುಲ್ ಗಾಂಧಿ ಹೇಳಿದರು. ಅವರ ಕೌಶಲಗಳ ಬಗ್ಗೆ ಸ್ವಲ್ಪ ತಿಳಿದುಕೊಂಡೆವು ಮತ್ತು ಸ್ವಲ್ಪ ಕಲಿಯಲು ಪ್ರಯತ್ನಿಸಿದೆವು. ಇದಕ್ಕೂ ಮುನ್ನ ರಾಹುಲ್ ಗಾಂಧಿ ದೆಹಲಿಯ ಮುಖರ್ಜಿ ನಗರದಲ್ಲಿ ಯುಪಿಎಸ್‌ಎಸಿಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳನ್ನು ಭೇಟಿ ಮಾಡಿದ್ದರು.
ಸಿನಿಮಾದಿಂದ ಬ್ರೇಕ್ ತೆಗೆದುಕೊಂಡರೂ ನಿಲ್ಲದ ಸಮಂತಾ ಕ್ರೇಜ್…ಸಾಮಾಜಿಕ ಜಾಲತಾಣದಲ್ಲಿ ಸ್ಯಾಮ್ ಹೊಸ ದಾಖಲೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen + 15 =
Remember me
