ನವದೆಹಲಿ:ಲೋಕಸಭೆ ಅಧಿವೇಶನದಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್​ ಗಾಂಧಿ ಸೋಮವಾರ (ಜುಲೈ 1) ಮೊದಲ ಬಾರಿಗೆ ಭಾಷಣ ಮಾಡಿದರು. ಈ ದೀರ್ಘಾವಧಿಯ ಭಾಷಣದಲ್ಲಿ ವಿರೋಧ ಪಕ್ಷದ ನಾಯಕರಾಗಿ ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು. ಅವರ ಭಾಷಣದಲ್ಲಿನ ಹೇಳಿಕೆಗೆ ಆಡಳಿತ ಪಕ್ಷದಿಂದ ತೀವ್ರ ವಿರೋಧ ಉಂಟಾಗಿದೆ. ಬಳಿಕ ಭಾಷಣದ ಕೆಲವು ಭಾಗಗಳನ್ನು ಕಲಾಪಗಳ ದಾಖಲೆಯಿಂದ ತೆಗೆದುಹಾಕಲಾಗಿದೆ.
ಇದನ್ನು ಓದಿ:ಎನ್​ಡಿಎ ಸಂಸದೀಯ ಸಭೆಯಲ್ಲಿ ಸಂಸದರಿಗೆ ‘ನಮೋ’ ಕಿವಿಮಾತು; ಪ್ರಧಾನಿ ಹೇಳಿರುವ ಸಲಹೆ ಏನು ಗೊತ್ತಾ?
ಈ ವಿಚಾರದ ಬಗ್ಗೆ ವಿರೋಧ ಪಕ್ಷದ ನಾಯಕ ರಾಹುಲ್​ ಗಾಂಧಿ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರಿಗೆ ಪತ್ರ ಬರೆದಿದ್ದಾರೆ. ಕಲಾಪಗಳ ದಾಖಲೆಯಿಂದ ಭಾಷಣಗಳ ಕೆಲವು ಭಾಗಗಳನ್ನು ತೆಗೆದಿರುವ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸಿದ ಅವರು, ತೆಗೆದ ಭಾಗಗಳನ್ನು ಮರುಸ್ಥಾಪಿಸುವಂತೆ ಮನವಿ ಮಾಡಿದರು.
ರಾಹುಲ್​ಗಾಂಧಿ ಬರೆದಿರುವ ಪತ್ರದಲ್ಲಿ, ಜುಲೈ 1, 2024ರಂದು ರಾಷ್ಟ್ರಪತಿಗಳ ಭಾಷಣಕ್ಕೆ ಧನ್ಯವಾದ ನಿರ್ಣಯದ ಮೇಲಿನ ಚರ್ಚೆಯ ಸಂದರ್ಭದಲ್ಲಿ ನನ್ನ ಭಾಷಣದಿಂದ ಪಡೆದ ಕೆಲವು ಆಯ್ದ ಭಾಗಗಳನ್ನು ತೆಗೆದುಹಾಕಿರುವ ಹಿನ್ನೆಲೆಯಲ್ಲಿ ಈ ಪತ್ರವನ್ನು ಬರೆಯುತ್ತಿದ್ದೇನೆ. ಇದನ್ನು ನೋಡಿ ನನಗೆ ಆಶ್ಚರ್ಯವಾಗಿದೆ. ಉಚ್ಚಾಟನೆಯ ನೆಪದಲ್ಲಿ ನನ್ನ ಭಾಷಣದ ಗಣನೀಯ ಭಾಗವನ್ನು ಕಲಾಪದಿಂದ ತೆಗೆದುಹಾಕಲಾಗಿದೆ. ನನ್ನ ಸದುದ್ದೇಶದ ಹೇಳಿಕೆಗಳನ್ನು ದಾಖಲೆಯಿಂದ ಅಳಿಸುವುದು ಸಂಸದೀಯ ಪ್ರಜಾಪ್ರಭುತ್ವದ ತತ್ವಗಳಿಗೆ ವಿರುದ್ಧವಾಗಿದೆ ಎಂದು ಉಲ್ಲೇಖಿಸಿದ್ದಾರೆ.
ಅಲ್ಲದೆ, ಸದನದಲ್ಲಿ ಬಿಜೆಪಿ ಸಂಸದ ಅನುರಾಗ್ ಠಾಕೂರ್ ಅವರ ತಮ್ಮ ಭಾಷಣದಲ್ಲಿ ಅನೇಕ ಅನುಚಿತ ವಿಷಯಗಳನ್ನು ಹೇಳಿದ್ದಾರೆ. ಆದರೆ ಆಶ್ಚರ್ಯಕರವಾಗಿ ಅದರಲ್ಲಿ ಒಂದೇ ಒಂದು ಪದವನ್ನು ತೆಗೆದುಹಾಕಲಾಗಿದೆ ಎಂದು ಹೇಳಿದ್ದಾರೆ. ತಮ್ಮ ಭಾಷಣದಿಂದ ತೆಗೆದುಹಾಕಲಾದ ವಿಷಯಗಳನ್ನು ಮರುಸ್ಥಾಪಿಸುವಂತೆ ಪತ್ರದಲ್ಲಿ ಮನವಿ ಮಾಡಿದ್ದಾರೆ.
ಇನ್ನು ಈ ವಿಚಾರವಾಗಿ ಲೋಕಸಭೆಯ ಸ್ಪೀಕರ್ ನಿರ್ಧಾರ ತಮಗೆ ಸ್ವೀಕಾರಾರ್ಹವಲ್ಲ ಎಂದು ರಾಹುಲ್​ ಗಾಂಧಿ ತಿಳಿಸಿದ್ದಾರೆ. ನಿಯಮಗಳ ಪ್ರಕಾರ, ತೆಗೆದುಹಾಕುವ ಅಧಿಕಾರ ಸ್ಪೀಕರ್​​ ಅವರಿಗೆ ಇದೆ. ಆದರೆ ತಮ್ಮ ಭಾಷಣದಲ್ಲಿ ತೆಗೆದುಹಾಕುವಂತ ಪದಗಳನ್ನು ಬಳಸಿಲ್ಲ. ಅಳಿಸಲಾದ ಭಾಗಗಳು ನಿಯಮ 380ರ ವ್ಯಾಪ್ತಿಗೆ ಬರುವುದಿಲ್ಲ ಎಂದು ಹೇಳಲು ಬದ್ಧನಾಗಿರುತ್ತೇನೆ ಎಂದರು. ರಾಹುಲ್​ ಗಾಂಧಿ ಅವರ ಭಾಷಣದಲ್ಲಿ ನೀಟ್​​, ಅಗ್ನಿವೀರ್​, ಹಿಂಸಾಚಾರ, ಅಲ್ಪಸಂಖ್ಯಾತರು, ಹಿಂದುತ್ವ ವಿಷಯಗಳು ಇದ್ದವು. (ಏಜೆನ್ಸೀಸ್​​)
ಮೋದಿ ಅವರ ಜಗತ್ತಿನಲ್ಲಿ ಸತ್ಯವನ್ನು ಅಳಿಸಬಹುದು..ವಾಸ್ತವದಲ್ಲಲ್ಲ ಎಂದಿದ್ದೇಕೆ ರಾಹುಲ್​ ಗಾಂಧಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × four =
Remember me
