ನವದೆಹಲಿ:ಕಾಂಗ್ರೆಸ್​ ಮುಖಂಡ ರಾಹುಲ್​ ಗಾಂಧಿಯ ‘ಆಬ್ಸ್‌’ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಧೂಳೆಬ್ಬಿಸುತ್ತಿದೆ. ಫೆ.24ರಂದು ಸಮುದ್ರದಲ್ಲಿ ಈಜುವ ಮೂಲಕ ರಾಗಾ ಭಾರಿ ಸುದ್ದಿಯಾಗಿದ್ದರು. ಅದೇ ವೇಳೆ ತೆಗೆದಿರುವ ರಾಹುಲ್ ಫೋಟೋ ಇದೀಗ ಜಾಲತಾಣದಲ್ಲಿ​ ಸಂಚಲನ ಸೃಷ್ಟಿಸಿದೆ.
ವೈರಲ್​ ಆಗಿರುವ ಫೋಟೋದಲ್ಲಿ ರಾಹುಲ್​ ಅವರ “ಸಿಕ್ಸ್​ಪ್ಯಾಕ್ಟ್​ ಆ್ಯಬ್ಸ್” ಒದ್ದೆಯಾದ ಟೀ-ಶರ್ಟ್​ ಮೇಲೆಯೇ ಮಂಕಾಗಿ ಕಾಣಿಸುತ್ತದೆ. ಇದೀಗ ಕಾಂಗ್ರೆಸ್​ ನಾಯಕನಿಗೆ ಜಾಲತಾಣದಲ್ಲಿ ಮೆಚ್ಚುಗೆಯ ಮಹಾಪೂರವೇ ಹರಿದುಬರುತ್ತಿದೆ. ಲಾಕ್​ಡೌನ್​ ಸಮಯದಲ್ಲಿ ಅನೇಕರು ತೂಕ ಹೆಚ್ಚಿಸಿಕೊಂಡಿದ್ದರೆ, ರಾಹುಲ್​ ತಮ್ಮ ಜಿಮ್ ಅವಧಿಯನ್ನು ಮಿಸ್​ ಮಾಡೇ ಇಲ್ಲ ಎಂದು ಪ್ರಶಂಸಿಸಿದ್ದಾರೆ. ​
ಅನೇಕರು ರಾಹುಲ್​ ಬಳಿ ಫಿಟ್​ನೆಸ್​ ಸಲಹೆಯನ್ನು ಕೇಳಿದ್ದಾರೆ. ಇನ್ನು ಕೆಲವರು ರಾಗಾ ದೇಶದ ಅತ್ಯಂತ ಫಿಟ್​ ನಾಯಕನೆಂದು ಕೊಂಡಾಡಿದ್ದಾರೆ. ರಾಜಕೀಯ ವ್ಯಕ್ತಿಗಳೆಂದರೆ ಬಹುತೇಕರು ಹೊಟ್ಟೆ ಬಿಟ್ಟುಕೊಂಡು ಇರುತ್ತಾರೆ. ಅವರಿಗೆಲ್ಲ ರಾಹುಲ್​ ಮಾದರಿ ಎಂದಿದ್ದಾರೆ.
ಇದನ್ನೂ ಓದಿರಿ:ಪತ್ನಿ ಮುಖ ನೋಡಿ ಮುಜುಗರಕ್ಕೊಳಗಾಗಿ ಆರೋಪಿ ಆತ್ಮಹತ್ಯೆ ಪ್ರಕರಣ: ಪಿಎಸ್​ಐ ಸಸ್ಪೆಂಡ್​!
ಕಾಂಗ್ರೆಸ್​ ಮಾಜಿ ಸಂಸದ ಮತ್ತು ಸಚಿವ ರಾಜೀವ್​ ಶುಕ್ಲಾ ಟ್ವೀಟ್​ ಮಾಡಿ ರಾಹುಲ್​ ಆ್ಯಬ್ಸ್​ ಹೊಂದಿದ್ದಾರೆಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ. ರಾಗಾ ಆ್ಯಬ್ಸ್​ ಬಾಕ್ಸರ್​ ಆ್ಯಬ್ಸ್​ ಎಂದು ಬಾಕ್ಸಿಂಗ್​ ಚಾಂಪಿಯನ್​ ವಿಜಯೇಂದರ್​ ಸಿಂಗ್​ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹೀಗೆ ಅನೇಕರು ರಾಹುಲ್​ ಫಿಟ್​ನೆಸ್​ ನೋಡಿ ಫಿದಾ ಆಗಿದ್ದು, ತಮ್ಮದೇ ರೀತಿಯಲ್ಲಿ ಕಾಮೆಂಟ್​ ಮಾಡುತ್ತಿದ್ದಾರೆ.
⁦@RahulGandhi⁩ has got abs also? Watch this photo closely. This is after he was swimming in seapic.twitter.com/hlnXu7xMVV
— Rajeev Shukla (@ShuklaRajiv)February 26, 2021

Abs of a boxer 👊🏽Most daring young fit & people’s leader Way to go@RahulGandhijipic.twitter.com/E5QVSpTnBZ
— Vijender Singh (@boxervijender)February 26, 2021

Requesting Shri@RahulGandhito share some tips with everyone on getting those abs.#FitnessGoals#Fitnesspic.twitter.com/U3BILlewiR
— Gaurav Pandhi (@GauravPandhi)February 26, 2021

ಅಂದಹಾಗೆ ರಾಹುಲ್​ ಫೆ. 24ರಂದು ಕೇರಳದ ಕೊಲ್ಲಂನಲ್ಲಿ ಮೀನುಗಾರರೊಂದಿಗೆ ಸಂವಾದ ನಡೆಸಿದರು. ಎರಡು ದಿನಗಳ ಪ್ರವಾಸದ ನಡುವೆಯೇ ಮೀನುಗಾರರ ಜತೆ ಉತ್ತಮ ಕ್ಷಣಗಳನ್ನು ಕಳೆದ ರಾಗಾ ಅವರೊಂದಿಗೆ ಸಮುದ್ರಕ್ಕೆ ಜಿಗಿದು ಈಜುವ ಮೂಲಕ ಎಲ್ಲರ ಹುಬ್ಬೇರಿಸಿದರು. ಇದಕ್ಕೆ ಸಂಬಂಧಿಸಿದ ವಿಡಿಯೋ ಸಹ ಭಾರಿ ವೈರಲ್​ ಆಗಿ, ತುಂಬಾ ಮೆಚ್ಚುಗೆ ವ್ಯಕ್ತವಾಯಿತು.(ಏಜೆನ್ಸೀಸ್​)
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

ಭಾರತ ಮಹಿಳಾ ಕ್ರಿಕೆಟ್ ತಂಡದಲ್ಲಿ ಕರ್ನಾಟಕದ ಮೂವರಿಗೆ ಸ್ಥಾನ

‘ಖಾಸಗಿ ಆಸ್ಪತ್ರೆಗಳಲ್ಲಿ 250 ರೂಪಾಯಿ, ಸರ್ಕಾರಿ ಆಸ್ಪತ್ರೆಗಳಲ್ಲಿ ಫ್ರೀ’ ಲಸಿಕಾ ಕೇಂದ್ರದ ಆಯ್ಕೆ ನಿಮ್ಮದು ಎಂದು ಆರೋಗ್ಯ ಇಲಾಖೆ

2ನೇ ಹಂತದ ಕರೊನಾ ಲಸಿಕೆ ಅಭಿಯಾನ : ಇಲ್ಲಿದೆ, ನಿಮ್ಮ ಪ್ರಶ್ನೆಗಳಿಗೆ ಉತ್ತರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one + seven =
Remember me
