ಇಂಫಾಲ್​:ಎರಡು ದಿನಗಳ ಪ್ರವಾಸಕ್ಕಾಗಿ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಇಂದು ಹಿಂಸಾಪೀಡಿತ ಮಣಿಪುರಕ್ಕೆ ಆಗಮಿಸಿದ್ದಾರೆ. ತಮ್ಮ ಬೆಂಗಾವಲು ಪಡೆಯ ಮೂಲಕ ರಾಜಧಾನಿ ಇಂಫಾಲ್​ನಿಂದ ಹಿಂಸಾಚಾರ ನಡೆದ ಚುರಾಚಂದಪುರ್​ ಕಡೆಗೆ ಹೊರ ರಾಹುಲ್​ರನ್ನು ಮಾರ್ಗಮಧ್ಯೆಯೇ ಮಣಿಪುರ ಪೊಲೀಸರು ತಡೆದಿದ್ದಾರೆ.
ಇಂಫಾಲ್​ನಿಂದ 20 ಕಿ.ಮೀ ದೂರದಲ್ಲಿರುವ ಬಿಷ್ಣುಪುರ್​ ಬಳಿ ರಾಹುಲ್​ ಅವರ ಬೆಂಗಾವಲು ವಾಹನವನ್ನು ತಡೆಯಲಾಯಿತು. ಅನೇಕ ದಿನಗಳಿಂದ ರಾಜ್ಯದಲ್ಲಿ ಉಲ್ಬಣಗೊಂಡಿರುವ ಜನಾಂಗೀಯ ಹಿಂಸಾಚಾರದಲ್ಲಿ ತೀವ್ರ ಪರಿಣಾಮ ಎದುರಿಸಿರುವ ಚುರಾಚಂದಪುರ್​ ಕಡೆಗೆ ರಾಹುಲ್​ ಹೊರಟಿದ್ದರು.
ಇದನ್ನೂ ಓದಿ:ಪ್ರೆಸ್ಟೀಜ್‌ನಿಂದ ಹೊಟ್ಟೆ ತುಂಬಲ್ಲ, ಬಡವರ ಹಸಿವಿನಲ್ಲಿ ರಾಜಕೀಯ ಸಲ್ಲ : ಗೃಹ ಸಚಿವ ಪರಂ
ಬೆಂಗಾವಲು ತಡೆದಿದ್ದಕ್ಕೆ ಮಣಿಪುರ ಪೊಲೀಸರು ಭದ್ರತಾ ಕಾರಣವನ್ನು ನೀಡಿದ್ದಾರೆ. ಮುಂದೆ ಹೋಗಲು ರಾಹುಲ್​ ಗಾಂಧಿ ಅವರಿಗೆ ಅನುಮತಿ ನೀಡಿಲು ಸಾಧ್ಯವಿಲ್ಲ. ನಮಗೆ ಅವರ ಭದ್ರತೆಯ ಬಗ್ಗೆ ಆತಂಕವಿದೆ. ಸ್ಥಳದಲ್ಲಿ ಈಗಲೂ ಪರಿಸ್ಥಿತಿ ಬಿಗಡಾಯಿಸಿದೆ. ರಾಹುಲ್​ ಗಾಂಧಿ ಅವರ ಬೆಂಗಾವಲು ವಾಹನವನ್ನು ಚುರಾಚಂದ್‌ಪುರದಲ್ಲಿ ದಾಳಿಕೋರರದ್ದು ಎಂದು ತಪ್ಪಾಗಿ ಗ್ರಹಿಸಬಹುದು ಎಂದು ಬಿಷ್ಣುಪುರ್​ ಪೊಲೀಸ್​ ವರಿಷ್ಠಾಧಿಕಾರಿ ಮಾಹಿತಿ ನೀಡಿದ್ದಾರೆ.
ಸಂಘರ್ಷ ಪೀಡಿತ ರಾಜ್ಯಕ್ಕೆ ನಿಗದಿಯಂತೆ ರಾಹುಲ್ ಗಾಂಧಿ ಭೇಟಿ ನೀಡಿದ್ದಾರೆ. ಈ ಭೇಟಿಯು ಉಲ್ಬಣಗೊಳ್ಳುತ್ತಿರುವ ಬಿಕ್ಕಟ್ಟನ್ನು ಪರಿಹರಿಸಲು ಮತ್ತು ಹಿಂಸಾಚಾರ ಪೀಡಿತ ಸಮುದಾಯಗಳಿಗೆ ಬೆಂಬಲವನ್ನು ವಿಸ್ತರಿಸುವ ಗುರಿಯನ್ನು ಹೊಂದಿದೆ. ರಾಹುಲ್​ ಜತೆ ಕಾಂಗ್ರೆಸ್​ ಪ್ರಧಾನಿ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್​ ಕೂಡ ಸಾಥ್​ ನೀಡಿದ್ದಾರೆ.
#WATCH| Congress leader Rahul Gandhi reaches Imphal, Manipur.
He is on a two-day visit to the state and will visit relief camps and interact with civil society representatives in Imphal and Churachandpur during his visit.pic.twitter.com/Ov5YwHTOFH
— ANI (@ANI)June 29, 2023

ಭೇಟಿಯ ವೇಳೆ ರಾಹುಲ್ ಗಾಂಧಿ ಅವರು ನಾಗರಿಕ ಸಮಾಜದ ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸಲಿದ್ದಾರೆ ಮತ್ತು ಇಂಫಾಲ್ ಮತ್ತು ಚುರಾಚಂದ್‌ಪುರದ ಪರಿಹಾರ ಶಿಬಿರಗಳಿಗೆ ಭೇಟಿ ನೀಡಲಿದ್ದಾರೆ. ಮೇ 3ರಂದ ಹಿಂಸಾಚಾರ ಭುಗಿಲೆದ್ದ ಬಳಿಕ ಇದೇ ಮೊದಲ ಬಾರಿಗೆ ರಾಹುಲ್​ ಗಾಂಧಿ ಭೇಟಿ ನೀಡಿದ್ದಾರೆ.
ಇದನ್ನೂ ಓದಿ:ಹೆತ್ತ ತಾಯಿಗಾಗಿ ಬರಿಗಾಲಲ್ಲಿ 3 ಕಿಮೀ ನಡೆದು, ತಂದೆ ವಿರುದ್ಧ ಪೊಲೀಸರಿಗೆ ದೂರು ನೀಡಿದ ಬಾಲಕ
ಈಶಾನ್ಯ ರಾಜ್ಯವು ಒಟ್ಟು ರಾಜ್ಯದ ಜನಸಂಖ್ಯೆಯ 53% ಕ್ಕಿಂತ ಹೆಚ್ಚು ಇಂಫಾಲ್ ಕಣಿವೆಯಲ್ಲಿ ಬಹುಸಂಖ್ಯಾತ ಸಮುದಾಯವಾದ ಮೀತಿ ಹಾಗೂ ಬುಡಕಟ್ಟು ಸಮುದಾಯಗಳ ನಡುವೆ, ವಿಶೇಷವಾಗಿ ಕುಕಿಗಳ ನಡುವೆ, ಜನಾಂಗೀಯ ಘರ್ಷಣೆ ಕಂಡುಬಂದಿದೆ. ಹಿಂಸಾಚಾರಕ್ಕೆ ಬಹುಸಂಖ್ಯಾತ ಮೀತಿ ಸಮುದಾಯವನ್ನು ಪರಿಶಿಷ್ಟ ಪಂಗಡದ (ST) ವರ್ಗಕ್ಕೆ ಸೇರಿಸುವ ಪ್ರಸ್ತಾಪ ಕಾರಣವಾಗಿದೆ. ಈಗಾಗಲೇ ಸಾಕಷ್ಟು ಸಾವು-ನೋವುಗಳು ಸಂಭವಿಸಿದ್ದು, ಸಂಘರ್ಷದ ಸರಣಿ ಮುಂದುವರಿದಿದೆ.(ಏಜೆನ್ಸೀಸ್​)
ಮಣಿಪುರ ಹಿಂಸಾಚಾರ: ಸಾವಿರಾರು ಮಹಿಳೆಯರ ಆಕ್ರೋಶಕ್ಕೆ ಮಣಿದು ಸೇನೆಯಿಂದ 12 ಬಂಡುಕೋರರ ಬಿಡುಗಡೆ

ಮುಂಬರುವ ಲೋಕಸಭಾ ಚುನಾವಣೆಗೆ ಬಿಜೆಪಿಯಿಂದ 3 ವಲಯಗಳ ರಣತಂತ್ರ!

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:17 − one =
Remember me
