ನವದೆಹಲಿ:ಕಾಂಗ್ರೆಸ್​ ಸಂಸದ ರಾಹುಲ್ ಗಾಂಧಿ ತಮ್ಮ ತಾಯಿ ಸೋನಿಯಾ ಗಾಂಧಿ ಅವರಿಗೆ ಬುಧವಾರ ಪಪ್ಪಿ(ನಾಯಿಮರಿ) ಉಡುಗೊರೆಯಾಗಿ ಕೊಟ್ಟಿದ್ದಾರೆ.
ನಾಯಿ ಮರಿ ಹೆಸರು ನೂರಿ. ತನ್ನ ತಾಯಿಗೆ ನೂರಿಯನ್ನು ಗಿಫ್ಟ್ ಕೊಟ್ಟು, ವೀಡಿಯೋವನ್ನು ಯೂಟೂಬ್​ ಮತ್ತಿತರ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ.
ಇದನ್ನೂ ಓದಿ:ಮಗನನ್ನು ಕೊಂದು.. ಕುದಿಯುವ ನೀರಿನಲ್ಲಿ ತಲೆ ಕುದಿಸಿ ತಿಂದ ತಾಯಿ..!
ರಾಹುಲ್​ ಗೋವಾ ಪ್ರವಾಸವು ಆಗಸ್ಟ್‌ನಲ್ಲಿ ನಡೆದಿತ್ತು. ಆಗ ಕುಟುಂಬವೊಂದನ್ನು ಭೇಟಿಯಾಗಿದ್ದರು. ಜ್ಯಾಕ್ ರಸೆಲ್ ಟೆರಿಯರ್‌ ತಳಿಯ ನಾಯಿ ಅವರ ಬಳಿ ಇದ್ದುದು ಗೊತ್ತಾಗಿ ಅದರ ಮರಿಯನ್ನು ದೆಹಲಿಗೆ ತರರಿಸಿಕೊಂಡಿದ್ದಾರೆ. ಬಳಿಕ ತನ್ನ ತಾಯಿಗೆ ಅವರ ಮನೆಗೆ ತೆರಳಿ ಮುದ್ದಾದ ನೂರಿಯನ್ನು ಕೊಟ್ಟಿದ್ದಾರೆ.
ಅಮ್ಮನಿಗೆ ಕೊಟ್ಟ ಉಡುಗೊರೆಯ ವೀಡಿಯೋವನ್ನು ಯೂಟೂಬ್​ನಲ್ಲಿ ಅಪ್​ಲೋಡ್​ ಮಾಡುವ ಮೂಲಕ ತಮ್ಮ ಕುಟುಂಬದ ಹೊಸ ಸದಸ್ಯ ನೂರಿಯನ್ನು ಜಗತ್ತಿಗೆ ಪರಿಚಯಿಸಿದ್ದಾರೆ. ಸೋನಿಯಾಗಾಂಧಿ ನೂರಿಯನ್ನು ಮಗುವಿನಂತೆ ಎತ್ತಿಕೊಂಡಿರುವುದು ವೀಡಿಯೋದಲ್ಲಿ ಕಂಡುಬಂದಿದೆ.
ಗೋವಾ ಮೂಲದ ನಾಯಿ ಸಾಕಣೆದಾರರಾದ ಶರ್ವಾಣಿ ಪಿತ್ರೆ ಮತ್ತು ಪತಿ ಸ್ಟಾನ್ಲಿ ಬ್ರಗಾಂಕಾ ಅವರಿಂದ ಈ ನಾಯಿಮರಿಯನ್ನು ರಾಹುಲ್​ ಪಡೆದುಕೊಂಡಿದ್ದಾರೆ.
ಡೀನ್​ ಕೈಯಿಂದ ನಾಂದೇಡ್ ಆಸ್ಪತ್ರೆಯ​ ಟಾಯ್ಲೆಟ್​ ಸ್ವಚ್ಛಗೊಳಿಸಿದ ಶಿವಸೇನಾ ಸಂಸದನ ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − seven =
Remember me
