ನವದೆಹಲಿ:ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಅವರ ಮದುವೆ ವಿಚಾರ ಆಗಾಗ ಚರ್ಚೆಗೆ ಬಂದು ಹೋಗುತ್ತಿರುತ್ತದೆ. ಇದೀಗ ಮತ್ತೊಮ್ಮೆ ಅವರ ಮದುವೆ ಪ್ರಸ್ತಾಪ ಬಂದಿದೆ. ರಾಹುಲ್​ ಗಾಂಧಿಯವರು ದಲಿತ ಯುವತಿಯನ್ನೇ ಮದುವೆಯಾಗಬೇಕು ಎಂದು ಕೇಂದ್ರ ಸಚಿವರೊಬ್ಬರು ಹೇಳಿದ್ದಾರೆ.
ಹಮ್​ ದೋ ಹಮಾರೆ ದೋ ಎನ್ನುವ ವಾಕ್ಯವನ್ನು ಕುಟುಂಬಕ್ಕೆ ಹೇಳಲಾಗುತ್ತಿತ್ತು. ಇದೀಗ ರಾಹುಲ್​ ಗಾಂಧಿಯವರು ಈ ಘೋಷಣೆಯನ್ನು ಪ್ರಚಾರ ಮಾಡಲು ಬಯಸುವುದಾದರೆ ಮೊದಲು ಅವರು ಮದುವೆಯಾಗಬೇಕು. ಅದೂ ದಲಿತ ಯುವತಿಯನ್ನೇ ಮದುವೆಯಾಗಬೇಕು. ಆಗ ಅವರು ಜಾತಿವಾದವನ್ನು ತೊಡೆದುಹಾಕಿ ಗಾಂಧಿಜೀಯವರ ಕನಸು ನನಸು ಮಾಡಿದಂತೆ ಆಗುತ್ತದೆ. ಇದರಿಂದ ಸಾಕಷ್ಟು ಯುವಕರೂ ಪ್ರೇರೇಪಿತರಾಗಲಿದ್ದಾರೆ ಎಂದು ಕೇಂದ್ರ ಸಚಿವ ರಾಮದಾಸ್ ಅಥಾವಾಲೆ ಹೇಳಿದ್ದಾರೆ.
ರಾಹುಲ್​ ಗಾಂಧಿಯವರು ದಲಿತ ಯುವತಿಯನ್ನು ಮದುವೆಯಾದರೆ, ಅಂತರ್ಜಾತಿ ವಿವಾಹ ಯೋಜನೆಯಲ್ಲಿ ಅವರಿಗೆ 2.5 ಲಕ್ಷ ರೂಪಾಯಿ ಕೊಡುವುದಾಗಿ ಅವರು ಹೇಳಿದ್ದಾರೆ.
ಜಾರ್ಖಂಡ್​ನ್ನು ಅಭಿವೃದ್ಧಿಯತ್ತ ತೆಗೆದುಕೊಂಡುಹೋಗಬೇಕೆಂದರೆ ಜಾರ್ಖಂಡ್ ಮುಕ್ತಿ ಮೋರ್ಚಾ ನಾಯಕರಾದ ಶಿಬು ಸೊರೆನ್ ಮತ್ತು ಜಾರ್ಖಂಡ್ ಮುಖ್ಯಮಂತ್ರಿಯಾಗಿರುವ ಹೇಮಂತ್ ಸೊರೆನ್ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ರಾಷ್ಟ್ರೀಯ ಪ್ರಜಾಪ್ರಭುತ್ವ ಒಕ್ಕೂಟಕ್ಕೆ ಸೇರಿಕೊಳ್ಳಬೇಕು ಎಂದು ಅವರು ಮನವಿ ಮಾಡಿದ್ದಾರೆ. (ಏಜೆನ್ಸೀಸ್​)
'Hum do, Humare do' slogan was used earlier for family planning. If he(Rahul Gandhi) wants to promote this, he must get married. He must marry a Dalit girl & fulfill Mahatama Gandhi's dream of eliminating casteism. It can be used to inspire youth: Union Minister Ramdas Athawalepic.twitter.com/0kZoEtN6dr
— ANI (@ANI)February 16, 2021

ದಿಶಾ ರವಿ ಹಿಂದೂನಾ ಕ್ರಿಶ್ಚಿಯನ್ನಾ? ಆಕೆಯ ಸ್ನೇಹಿತರು ಹೇಳಿದ್ದೇನು?

ತಮ್ಮ ಮೂತ್ರವನ್ನು ತಾವೇ ಕುಡಿದ ಅಮ್ಮ ಮಕ್ಕಳು! ನಿಮಗೂ ಆ ಮೆಸೇಜ್​ ಬಂದಿರುವುದು ನೋಡಿಕೊಳ್ಳಿ…

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:twelve − 6 =
Remember me
