ಅಗರ್ತಲಾ :ತ್ರಿಪುರದ ಅಗರ್ತಲಾದಲ್ಲಿ ತಡರಾತ್ರಿ ನಡೆಯುತ್ತಿದ್ದ ಮದುವೆ ಸಮಾರಂಭಗಳಿಗೆ ದಾಳಿ ಮಾಡಿ ಜನರೊಂದಿಗೆ ಎರ್ರಾಬಿರ್ರಿ ನಡೆದುಕೊಂಡಿದ್ದ ಪಶ್ಚಿಮ ತ್ರಿಪುರದ ಜಿಲ್ಲಾ ಮ್ಯಾಜಿಸ್ಟ್ರೇಟ್​ (ಡಿಎಂ) ಶೈಲೇಶ್​ ಕುಮಾರ್​ ಯಾದವ್​ ಅವರನ್ನು ರಾಜ್ಯ ಸರ್ಕಾರ ಅಮಾನತುಗೊಳಿಸಿದೆ ಎನ್ನಲಾಗಿದೆ. ಕರೊನಾ ಕರ್ಫ್ಯೂ ಉಲ್ಲಂಘಿಸಿ ನಡೆಯುತ್ತಿತ್ತು ಎನ್ನಲಾದ ಮದುವೆಗಳ ಮೇಲಿನ ಡಿಎಂ ಯಾದವ್​ ಕಾರ್ಯಾಚರಣೆ ಬಗ್ಗೆ ತನಿಖೆಯನ್ನು ಕೂಡ ಆದೇಶಿಸಲಾಗಿದೆ.
ಎರಡು ದಿನಗಳ ಹಿಂದೆ, ಡಿಎಂ ಯಾದವ್, ಜನ ತುಂಬಿದ ಎರಡು ಮದುವೆ ಮಂಟಪಗಳಿಗೆ ಪೊಲೀಸ್ ಸಿಬ್ಬಂದಿಯೊಂದಿಗೆ ರೇಡ್ ಮಾಡಿ, ನೆರೆದಿದ್ದ ಜನಕ್ಕೆ ಕೂಡಲೇ ಜಾಗ ಖಾಲಿ ಮಾಡಲು ಹೇಳಿದ್ದರು. ವರನನ್ನು ಕುತ್ತಿಗೆ ಹಿಡಿದು ತಳ್ಳುವುದೂ ಸೇರಿದಂತೆ ಒರಟು ನಡವಳಿಕೆ ಪ್ರದರ್ಶಿಸಿದ್ದ ಯಾದವ್​, ಜನರನ್ನು ಬೈದಾಡುತ್ತಾ ತಮ್ಮೊಡನೆ ಮಾತಾಡಲು ಬಂದವರನ್ನೆಲ್ಲಾ ಅರೆಸ್ಟ್​ ಮಾಡಿ ಎನ್ನುತ್ತಿದ್ದ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿತ್ತು.
ಇದನ್ನೂ ಓದಿ:ದಂಡ ವಿಧಿಸುವುದಷ್ಟೇ ಸಾಧನೆಯೇ?, ಅಧಿಕಾರಿಗಳ ವಿರುದ್ಧ ಶಾಸಕ ಶರತ್ ಬಚ್ಚೇಗೌಡ ಬೇಸರ, ಸಮರ್ಪಕ ಕಾರ್ಯಕ್ಕೆ ತಾಕೀತು
ಅಧಿಕಾರದ ದರ್ಪ ತೋರಿಬಂದ ಈ ಘಟನೆಯ ಬಗ್ಗೆ ಹಲವು ಜನಪ್ರತಿನಿಧಿಗಳು, ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿ, ಯಾದವ್​ರನ್ನು ಕೂಡಲೇ ಅಮಾನತುಗೊಳಿಸಬೇಕೆಂದು ಕೋರಿದ್ದರು. ತದನಂತರ ಡಿಎಂ ಯಾದವ್ ಅವರು ತಾವು ಜನರ ಹಿತದೃಷ್ಟಿಯಿಂದ ಕರ್ಫ್ಯೂ ಪಾಲನೆ ಮಾಡುತ್ತಿದ್ದುದಾಗಿ ಹೇಳಿ ತಮ್ಮ ವರ್ತನೆಯ ಬಗ್ಗೆ ಕ್ಷಮೆ ಯಾಚಿಸಿದ್ದರು ಎನ್ನಲಾಗಿದೆ.
ಈ ನಿಟ್ಟಿನಲ್ಲಿ ತ್ರಿಪುರ ಸಿಎಂ ಬಿಪ್ಲಬ್ ದೇಬ್ ಅವರು ಮುಖ್ಯ ಕಾರ್ಯದರ್ಶಿ ಮನೋಜ್ ಕುಮಾರ್ ಅವರಿಂದ ವರದಿ ಕೇಳಿದ್ದರು. ಅದಕ್ಕಾಗಿ ಇಬ್ಬರು ಹಿರಿಯ ಐಎಎಸ್​ ಅಧಿಕಾರಿಗಳಾದ ಕಿರಣ್ ಗಿಟ್ಟೆ ಮತ್ತು ತನುಶ್ರೀ ದೇಬ್ಬರ್ಮ ಅವರನ್ನು ಡಿಎಂ ಯಾದವ್​ ಅವರು ಮದುವೆ ಮಂಟಪಗಳ ಮೇಲಿನ ಧಾಳಿಯ ಬಗ್ಗೆ ತನಿಖೆ ನಡೆಸಿ ವಿವರವಾದ ವರದಿ ನೀಡಲು ನೇಮಿಸಲಾಗಿದೆ. ಈ ನಡುವೆ ಡಿಎಂ ಯಾದವ್​ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ವರದಿಗಳು ತಿಳಿಸಿವೆ.ಡಿಎಂ ಯಾದವ್ ದಾಳಿ ನಡೆಸಿ, ಅರ್ಧದಲ್ಲೇ ನಿಲ್ಲಿಸಿದ್ದ ಎರಡು ಮದುವೆ ಸಮಾರಂಭಗಳ ವರ ಮತ್ತು ವಧುಗಳ ಕುಟುಂಬಗಳನ್ನು ಭೇಟಿ ಮಾಡಲು ಮುಖ್ಯಮಂತ್ರಿಗಳು ಸಂಸದರ ತಂಡ ರಚಿದ್ದಾರೆ ಎನ್ನಲಾಗಿದೆ.(ಏಜೆನ್ಸೀಸ್)
ಸೀರಮ್​ ಇನ್ಸ್​ಟಿಟ್ಯೂಟ್ ಸಿಇಒ ಅದಾರ್ ಪೂನಾವಾಲಾಗೆ ವೈ ಕ್ಯಾಟಗರಿ ಭದ್ರತೆ

ಭಾರತದಲ್ಲಿರುವ ಅಮೆರಿಕನ್ನರಿಗೆ ‘ಈಗಲೇ ವಾಪಸ್ ಬನ್ನಿ’ ಎಂದ ಅಮೆರಿಕ ಸರ್ಕಾರ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:18 + two =
Remember me
