ಹೊಸದಿಲ್ಲಿ:ದೆಹಲಿ ಮುಖ್ಯಮಂತ್ರಿ ಮತ್ತು ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿದ ಬೆನ್ನಲ್ಲೇ ಇಂದು ಬೆಳಗ್ಗೆ ಅವರನ್ನು ಬಂಧಿಸುವ ಸಾಧ್ಯತೆಯಿದೆ ಎಂಬ ಮಾಹಿತಿ ನಮಗೆ ಲಭಿಸಿದೆ ಎಂದು ಎಎಪಿ ಟ್ವೀಟ್ ಮೂಲಕ ತಿಳಿಸಿತ್ತು. ಇದೀಗ ಈ ಕುರಿತಂತೆ ಜಾರಿ ನಿರ್ದೇಶನಾಲಯದ ಮೂಲಗಳು ಸ್ಪಷ್ಟನೆ ನೀಡಿವೆ.
ಇದನ್ನೂ ಓದಿ:Higher Pension Deadline: ಕೋಟ್ಯಾಂತರ ಜನರಿಗೆ ಹೊಸ ವರ್ಷದ ಉಡುಗೊರೆ ನೀಡಿದ ಇಪಿಎಫ್‌ಒ; ಗಡುವು ವಿಸ್ತರಣೆ
ಆಪಾದಿತ ದೆಹಲಿ ಮದ್ಯ ನೀತಿ ಹಗರಣದಲ್ಲಿ ತಮ್ಮ ಮುಂದೆ ಹಾಜರಾಗುವಂತೆ ಇಡಿ ನೀಡಿದ್ದ ಮೂರನೇ ಸಮನ್ಸ್‌ಗೂ ಕೇಜ್ರಿವಾಲ್ ಪ್ರತಿಕ್ರಿಯಿಸದ ಹಿನ್ನಲೆ ಪಕ್ಷದ ನಾಯಕರಾದ ಅತಿಶಿ, ಸೌರಭ್ ಭಾರದ್ವಾಜ್ ಮತ್ತು ಜಾಸ್ಮಿನ್ ಶಾ ಅರವಿಂದ್​ ಇಡಿ ಅಧಿಕಾರಿಗಳು ದೆಹಲಿ ಸಿಎಂ ಅವರನ್ನು ಬಂಧಿಸಲಿದೆ. ಈ ಬಗ್ಗೆ ಮೂಲಗಳು ನಮಗೆ ಮಾಹಿತಿ ನೀಡಿವೆ ಎಂದು ಟ್ವೀಟ್​ನಲ್ಲಿ (ಪ್ರಸ್ತುತ ಎಕ್ಸ್​) ವ್ಯಕ್ತಪಡಿಸಿದ್ದರು.
ಹಾಗಾದ್ರೆ ಅರವಿಂದ್ ಕೇಜ್ರಿವಾಲ್ ಬಂಧನ ಖಚಿತವೇ? ಎಂಬ ಗೊಂದಲ ಹುಟ್ಟಿಕೊಂಡ ಬೆನ್ನಲ್ಲೇ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗಳು ಭುಗಿಲೆದ್ದಿದೆ. ಈ ಸುದ್ದಿಗಳ ಬೆನ್ನಲ್ಲೇ ಸ್ಪಷ್ಟನೆ ನೀಡಿರುವ ಇಡಿ, ಅರವಿಂದ್ ಕೇಜ್ರಿವಾಲ್ ನಿವಾಸದ ಮೇಲಿನ ದಾಳಿಯ ವರದಿಗಳು ವದಂತಿ ಬಿಟ್ಟರೆ ಬೇರೇನೂ ಅಲ್ಲ! ಇಂದು ಆ ರೀತಿ ಯಾವ ಯೋಜನೆಯೂ ಇಲ್ಲ ಎಂದು ಸ್ಪಷ್ಟಪಡಿಸಿದೆ,(ಏಜೆನ್ಸೀಸ್).
BBKS10: ‘ಎಷ್ಟು ದಿನ ಹೇಳ್ತೀರಾ ಇದನ್ನೇ……’? ಪ್ರತಾಪ್ ಅಳಲಿಗೆ ಇದೇ ಕಾರಣ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − seven =
Remember me
