ನವದೆಹಲಿ:ರೈಲ್ವೆ ಮಂಡಳಿಯ ಪುನಾರಚನೆಗೆ ಕೊನೆಗೂ ಕೇಂದ್ರ ಸಂಪುಟ ಸಮಿತಿ ಸಮ್ಮತಿ ನೀಡಿದೆ. ಮಂಡಳಿಯ ಪ್ರಪ್ರಥಮ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಆಗಿ ವಿನೋದ್​ಕುಮಾರ್​ ಯಾದವ್​ ನೇಮಕಗೊಂಡಿದ್ದಾರೆ.
ವಿ.ಕೆ. ಯಾದವ್​ 1980ರ ಭಾರತೀಯ ರೈಲ್ವೆ ಎಲೆಕ್ಟ್ರಿಕಲ್​ ಇಂಜಿನಿಯರ್ಸ್​ ಶ್ರೇಣಿಯ ಅಧಿಕಾರಿಯಾಗಿದ್ದಾರೆ. ಹಾಲಿ ರೈಲ್ವೆ ಮಂಡಳಿಯ ಅಧ್ಯಕ್ಷರೂ ಆಗಿದ್ದರು.ಏನಿದು ರೈಲ್ವೆ ಮಂಡಳಿ ಪುನಾರಚನೆ?: ರೈಲ್ವೆಯ ಚಟುವಟಿಕೆಗಳ ಆಧಾರದಲ್ಲಿ ಅದರ ಮುಖ್ಯಸ್ಥರು ಹಾಗೂ ನಾಲ್ಕು ಸದಸ್ಯನ್ನೊಳಗೊಂಡ ಶ್ರೇಣೀಕೃತ ವ್ಯವಸ್ಥೆ ಜಾರಿಗೊಳಿಸಲು 2019ರಲ್ಲಿಯೇ ಸಂಪುಟ ಒಪ್ಪಿಗೆ ನೀಡಿತ್ತು. ಅದರಂತೆ ಮೂಲಸೌಕರ್ಯ, ನಿರ್ವಹಣೆ, ಬಿಜಿನೆಸ್​ ಡೆವಲಪ್​ಮೆಂಟ್​, ರೋಲಿಂಗ್​ ಸ್ಟಾಕ್​ ಹಾಗೂ ಹಣಕಾಸು ವಿಭಾಗವನ್ನು ಒಬ್ಬೊಬ್ಬರು ಮುನ್ನಡೆಸಲಿದ್ದಾರೆ. ಅಂದರೆ ಮಂಡಳಿಯು ಕಾರ್ಪೋರೇಟ್​ ಕಂಪನಿಯ ಸ್ವರೂಪ ಹೊಂದಿದಂತಾಗಲಿದೆ.
ಇದನ್ನೂ ಓದಿ;ವಾಯುಸೇನೆಯ ಬಲಾಢ್ಯ ರಫೇಲ್​ ಯುದ್ಧ ವಿಮಾನಗಳಿಗೆ ಎದುರಾಗಿದೆ ಆಪತ್ತು…!
ಕೇಂದ್ರ ಸರ್ಕಾರವು ಮುಂದಿನ 12 ವರ್ಷಗಳಲ್ಲಿ ರೈಲ್ವೆ ಅಭಿವೃದ್ಧಿಗಾಗಿ 5 ಲಕ್ಷ ಕೋಟಿ ರೂ.ಗಳ ಯೋಜನೆ ರೂಪಿಸಿದೆ. ಸುರಕ್ಷತೆ, ವೇಗ ಹಾಗೂ ಸೇವೆ ಹೆಚ್ಚಳದ ಬಗ್ಗೆ ಯೋಜನೆಗಳಿವೆ. ತ್ವರಿತವಾಗಿ ನಿರ್ಣಯ ಕೈಗೊಳ್ಳುವ ವ್ಯವಸ್ಥೆ ರೂಪಿಸಿದಲ್ಲಿ ಈ ಎಲ್ಲ ಅಭಿವೃದ್ಧಿ ಯೋಜನೆಗಳ ಅನುಷ್ಠಾನ ಸಾಧ್ಯವಾಗಲಿದೆ ಎನ್ನುವುದು ಇದರ ಹಿಂದಿನ ಉದ್ದೇಶವಾಗಿದೆ.
ಪ್ರಸ್ತುತ ರೈಲ್ವೆಯಲ್ಲಿರುವ ಇಲಾಖಾವಾರು ವ್ಯವಸ್ಥೆ ಅದಕ್ಷವಾಗಿದೆ, ಅಧಿಕಾರಕ್ಕೆ ಒಳಜಗಳ ಹೆಚ್ಚಾಗಿದೆ ಎಂಬ ಆರೋಪಗಳು ಕೇಳಿ ಬಂದಿವೆ. ಜತೆಗೆ ನಿರ್ಣಯ ತೆಗೆದುಕೊಳ್ಳಲು ವಿಳಂಬವಾಗುತ್ತಿರುವುದು ಅಭಿವೃದ್ಧಿಯನ್ನು ಕುಂಠಿತಗೊಳಿಸಿವೆ ಎಂಬ ದೂರುಗಳು ವ್ಯಾಪಕವಾಘಿವೆ. ಈ ಕಾರಣಕ್ಕೆ ಆಡಳಿತಾತ್ಮಕ ಸ್ವರೂಪವನ್ನು ಸಂಪೂರ್ಣ ಬದಲಾವಣೆ ಮಾಡಲಾಗುತ್ತಿದೆ.
ಇದನ್ನೂ ಓದಿ;ವಿಮಾನದಾಚೆ ಮನುಷ್ಯ ಹಾರಾಡುತ್ತಿದ್ದುದನ್ನು ನೋಡಿದ ಪೈಲಟ್​ಗಳಿಗೆ ಗಲಿಬಿಲಿ…!
ಅದರಂತೆ ರೈಲ್ವೆಯಲ್ಲಿರುವ ಎಂಟು ಗ್ರೂಪ್​ ಎ ಸೇವೆಗಳನ್ನು ಒಂದುಗೂಡಿಸಿ ಇಂಡಿಯನ್​ ರೈಲ್ವೆ ಮ್ಯಾನೇಜ್​ಮೆಂಟ್​ ಸರ್ವೀಸ್​ (ಐಆರ್​ಎಂಎಸ್​) ಎಂಬ ಕೇಂದ್ರೀಯ ಸೇವೆ ರೂಪಿಸಲು ರೈಲ್ವೆ ಮಂಡಳಿ ನಿರ್ಧರಿಸಿದೆ. ಯಾದವ್​ ಜತೆಗೆ ಮಂಡಳಿಗೆ ಪ್ರದೀಪ್​ಕುಮಾರ್​ (ಮೂಲಸೌಕರ್ಯ), ಪಿ.ಸಿ. ಶರ್ಮ (ಟ್ರ್ಯಾಕ್ಷನ್​ ಆ್ಯಂಡ್​ ರೋಲಿಂಗ್​ ಸ್ಟಾಕ್​), ಪಿ.ಎಸ್​. ಮಿಶ್ರಾ (ನಿರ್ವಹಣೆ ಹಾಗೂ ವಹಿವಾಟು ಅಭಿವೃದ್ಧಿ), ಮಂಜುಳಾ ರಂಗರಾಜನ್​ ಹಣಕಾಸು ವಿಭಾಗದ ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ.
ಅಕ್ಟೋಬರ್​ ಅಂತ್ಯಕ್ಕೆ ಕರೊನಾ ಲಸಿಕೆ ವಿತರಣೆಗೆ ಸಿದ್ಧತೆ ಮಾಡಿಕೊಳ್ಳಿ; 50 ರಾಜ್ಯಗಳಿಗೆ ಸೂಚನೆ ನೀಡಿದ್ಯಾರು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × four =
Remember me
