ನವದೆಹಲಿ:ಕೋವಿಡ್​-19 ಪಿಡುಗಿನ ಹಿನ್ನೆಲೆಯಲ್ಲಿ ಸೋಂಕು ಹರಡುವಿಕೆಗೆ ಆಸ್ಪದ ಕೊಡದ ರೀತಿಯ ಹೊಸ ವಿನ್ಯಾಸದ ಎಸಿ ಮತ್ತು ಸಾಮಾನ್ಯ ಬೋಗಿಗಳ ನಿರ್ಮಾಣಕ್ಕೆ ರೈಲ್ವೆ ಇಲಾಖೆ ಮುಂದಾಗಿದೆ. ಕಪುರ್ತಲಾ ರೈಲ್​ ಕೋಚ್​ ಫ್ಯಾಕ್ಟರಿಯಲ್ಲಿ ಸಿದ್ಧವಾಗಿರುವ ಹೊಸ ಮಾದರಿಯ ಎಸಿ ಮತ್ತು ಸಾಮಾನ್ಯ ಬೋಗಿಗಳ ತಯಾರಿಕೆಗೆ ಕ್ರಮವಾಗಿ 6 ಲಕ್ಷ ರೂ. ಮತ್ತು 3 ಲಕ್ಷ ರೂ.ಗಳನ್ನು ಹೆಚ್ಚುವರಿಯಾಗಿ ವ್ಯಯಿಸಲಾಗುತ್ತಿದೆ.
ಹೊಸ ವಿನ್ಯಾಸದ ಕೋಚ್​ಗಳಲ್ಲಿ ಕಾಲಿನಲ್ಲಿ ನಿಯಂತ್ರಿಸಬಹುದಾದ ವಾಷ್​ ಬೇಸಿನ್​ಗಳು, ಡಿಸ್ಪೆನ್ಸರ್​ಗಳು ಮತ್ತು ಶೌಚಗೃಹದ ಫ್ಲಷ್​ಗಳನ್ನು ಅಳವಡಿಸಲಾಗಿದೆ. ಮೊಣಕೈಯಲ್ಲಿ ನಿರ್ವಹಿಸಬಹುದಾದ ಡೋರ್​ ಹ್ಯಾಂಡಲ್​ಗಳನ್ನು ರೂಪಿಸಲಾಗಿದ್ದು, ಹ್ಯಾಂಡ್​ರೈಲ್​ಗಳಿಗೆ ವೈರಾಣುನಿರೋಧಕ ಕೋಟಿಂಗ್​ ನೀಡಲಾಗುತ್ತಿದೆ. ತನ್ಮೂಲಕ ಯಾವುದೇ ಬಗೆಯ ಸೋಂಕು ಹರಡದಂತೆ ಎಚ್ಚರಿಕೆ ವಹಿಸಲಾಗುತ್ತಿದೆ ಎಂದು ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಮಂಗಳವಾರ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಬೆಳಗ್ಗೆ ಪಾಸಿಟಿವ್, ರಾತ್ರಿ ನೆಗೆಟಿವ್, ಜಿಲ್ಲೆಯಲ್ಲಿ ಮತ್ತೆ ಕರೊನಾ ವರದಿ ಗೊಂದಲ
ಪ್ರತಿಯೊಂದು ಬೋಗಿಗಳ ಫಿಕ್ಚರ್​ಗಳಿಗೆ ಟೈಟಾನಿಯಂ ಡೈಆಕ್ಸೈಡ್​ ಕೋಟಿಂಗ್​ ಬಳಿಸಲಾಗಿದೆ. ಎಸಿ ಡಕ್ಟ್​ಗಳಿಗೆ ಪ್ಲಾಸ್ಮಾ ಏರ್​ಎಕ್ವಿಪ್​ಮೆಂಟ್​ ಅಳವಡಿಸಲಾಗಿದ್ದು, ಎಸಿ ಬೋಗಿಗಳ ಒಳಾಂಗಣದಲ್ಲಿನ ಗಾಳಿಯನ್ನು ಐಯೋನೈಸ್ಡ್​ ಏರ್​ ಮೂಲಕ ಸ್ಟರ್​ಲೈಸ್​ ಮಾಡಲಾಗುತ್ತದೆ ಎಂದು ವಿವರಿಸಿದ್ದಾರೆ.ಪ್ರತಿ ಎಸಿ ಬೋಗಿಗೆ ಟೈಟಾನಿಯಂ ಆಕ್ಸೈಡ್​ ಕೋಟಿಂಗ್​ ಮಾಡಲು 2.5 ಲಕ್ಷ ರೂ. ಹಾಗೂ ಪ್ಲಾಸ್ಮಾ ಐಯಾನ್​ ಸಿಸ್ಟಂ ಅಳವಡಿಕೆಗೆ 3ರಿಂದ 3.5 ಲಕ್ಷ ರೂ. ವೆಚ್ಚವಾಗುತ್ತಿದೆ. ಸಾಮಾನ್ಯ ಬೋಗಿಗಳಿಗೆ ಪ್ಲಾಸ್ಮಾ ಐಯಾನ್​ ಸಿಸ್ಟಂ ಅಳವಡಿಸದೇ ಇರುವ ಕಾರಣ 3 ಲಕ್ಷ ರೂ. ಹೆಚ್ಚುವರಿ ವೆಚ್ಚವಾಗುತ್ತಿರುವುದಾಗಿ ಹೇಳಿದ್ದಾರೆ.
ಈ ಖರ್ಚುವೆಚ್ಚವನ್ನು ತಗ್ಗಿಸಲು ಅಗತ್ಯ ಕಾರ್ಯತಂತ್ರ ರೂಪಿಸಲು ರೈಲ್ವೆ ಇಲಾಖೆಯು ಆಂತರಿಕವಾಗಿ ಸಂಶೋಧನೆಗೂ ಒತ್ತು ನೀಡಿದೆ. ಜತೆಗೆ, ಈ ನಿಟ್ಟಿನಲ್ಲಿ ಖಾಸಗಿ ವಲಯದಿಂದಲೂ ಸಲಹೆಗಳನ್ನು ಆಹ್ವಾನಿಸಲಾಗುತ್ತಿದೆ. ಯಾವುದೇ ಸಲಹೆ ನೀಡಿದರೂ ಅದು ದೀರ್ಘಕಾಲಿನ ಪರಿಹಾರವಾಗಿರಬೇಕು ಎಂದು ತಿಳಿಸಿದ್ದಾರೆ.
ಅವಳಿ ಮಕ್ಕಳನ್ನು ಹಡೆದು ರಕ್ತಸ್ರಾವದಿಂದ ನರಳುತ್ತಿದ್ದವಳಿಗೆ ಹೊಸ ಜೀವನ ಕೊಟ್ಟ ನರ್ಸ್​; ವೈದ್ಯರೇ ಬೆರಗಾದರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 + eleven =
Remember me
