ನವದೆಹಲಿ:ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿದಿನ ಹಲವು ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಆ ವಿಡಿಯೋಗಳಲ್ಲಿ ಕೆಲವೊಮ್ಮೆ ನಾವು ನಮ್ಮ ದೇಶದ ಸುಂದರ ನೋಟ ತೋರಿಸಿರುವುದನ್ನು ನೋಡಿರುತ್ತೇವೆ. ಅಂದಹಾಗೆ ಕೆಲವೇ ದಿನಗಳ ಹಿಂದೆ, ಭಾರತದ ಕೊನೆಯ ರಸ್ತೆಯ ವಿಡಿಯೋ ವೈರಲ್ ಆಗಿದ್ದು ಅದನ್ನು ಭಾರತ ಸರ್ಕಾರವು ಹಂಚಿಕೊಂಡಿದೆ. ಆ ಭವ್ಯ ದೃಶ್ಯವನ್ನು ನೋಡಿದ ಜನರು ಮಂತ್ರಮುಗ್ಧರಾಗಿದ್ದಾರೆ. ಇದೀಗ ಈ ವಿಡಿಯೋದಲ್ಲಿ ಏನೆನೆಲ್ಲಾ ನೋಡಬಹುದು ಬನ್ನಿ ನೋಡೋಣ…
ವಿಡಿಯೋ ಹಂಚಿಕೊಂಡ ರೈಲ್ವೆ ಸಚಿವರು
ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋ ಹಂಚಿಕೊಂಡಿದ್ದು, ರೈಲು ಸರೋವರದ ಬಳಿ ಹಾದು ಹೋಗುತ್ತಿರುವುದನ್ನು ನೀವು ವೀಡಿಯೊದಲ್ಲಿ ನೋಡಬಹುದು. ಈ ರೈಲು ಯಾವುದೇ ಸಾಮಾನ್ಯ ಸರೋವರದ ಬಳಿ ಹಾದುಹೋಗುವುದಿಲ್ಲ. ಭಾರತದ ಅತಿದೊಡ್ಡ ಉಪ್ಪು ನೀರಿನ ಸರೋವರದ ಬಳಿ ಹಾದುಹೋಗುತ್ತದೆ. ಡ್ರೋನ್‌ನಿಂದ ರೆಕಾರ್ಡ್ ಆಗಿರುವ ಈ ದೃಶ್ಯ ಖಂಡಿತವಾಗಿಯೂ ನಿಮ್ಮ ಮನ ತಟ್ಟುತ್ತದೆ. ಅಶ್ವಿನಿ ವೈಷ್ಣವ್ ಅವರು ಈ ವಿಡಿಯೋವನ್ನು ಹಂಚಿಕೊಂಡು, ‘ಭಾರತದ ಅತಿದೊಡ್ಡ ಒಳನಾಡಿನ ಉಪ್ಪಿನ ಸರೋವರದಲ್ಲಿ ರಮಣೀಯ ರೈಲು ಪ್ರಯಾಣ’ ಎಂದು ಬರೆದುಕೊಂಡಿದ್ದಾರೆ.
ಈ ವಿಡಿಯೋ ಬರೆಯುವ ತನಕ 2 ಲಕ್ಷದ 43 ಸಾವಿರ ಮಂದಿ ವೀಕ್ಷಿಸಿದ್ದು, ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಇದನ್ನು ನೋಡಿದ ನಂತರ, ಬಳಕೆದಾರರು “ಉತ್ತಮ ನೋಟ ಸರ್”, “ಇದು ತುಂಬಾ ಸುಂದರವಾಗಿದೆ” ಎಂದೆಲ್ಲಾ ಹಾಡಿ ಹೊಗಳುತ್ತಿದ್ದಾರೆ.
Scenic rail journey over India's largest inland salt lake.
📍Rajasthanpic.twitter.com/ibiq9rwFWW
— Ashwini Vaishnaw (@AshwiniVaishnaw)February 14, 2024

ಉಪ್ಪಿನಸರೋವರ ಎಲ್ಲಿದೆ?
ಭಾರತದ ಅತಿದೊಡ್ಡಉಪ್ಪಿನಸರೋವರವುಜೈಪುರದಿಂದ ಸುಮಾರು 80 ಕಿಮೀ ದೂರದಲ್ಲಿ ರಾಜಸ್ಥಾನದಲ್ಲಿದೆ. ಈ ಸರೋವರದ ಹೆಸರು ಸಂಭಾರ್ ಸರೋವರ, ಇದನ್ನು ಸಾಲ್ಟ್ ಲೇಕ್ ಎಂದೂ ಕರೆಯುತ್ತಾರೆ. ಈ ಸರೋವರವು 22.5 ಕಿಲೋಮೀಟರ್ ಪ್ರದೇಶದಲ್ಲಿ ಹರಡಿದೆ. ಈ ಸರೋವರದ ಮೂಲಕ ಪ್ರತಿ ವರ್ಷ 1 ಲಕ್ಷದ 96 ಸಾವಿರ ಟನ್ ಶುದ್ಧ ಉಪ್ಪು ಉತ್ಪಾದನೆಯಾಗುತ್ತದೆ.
ಭಾರೀ ಮಳೆ, ಮಂಜು… ಈ ರಾಜ್ಯಗಳಿಗೆ ಎಚ್ಚರಿಕೆ ನೀಡಿದ ಐಎಂಡಿ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:5 + thirteen =
Remember me
