ಕೋಲ್ಕತ್ತಾ:ಕಾಂಚನಜುಂಗಾ ಎಕ್ಸ್​ಪ್ರೆಸ್​ಗೆ ಗೂಡ್ಸ್​ ರೈಲು ಅಪಘಾತಕ್ಕೀಡಾದ ಸ್ಥಳಕ್ಕೆ ಭೇಟಿ ನೀಡಿರುವ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು, ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ.  ಅಪಘಾತ ನಡೆದ ಸ್ಥಳಕ್ಕೆ ಹೋಗುವ ಮಾರ್ಗ ಕಿರಿದಾಗಿದ್ದು ಬೈಕ್​ನ ಹಿಂದೆ ಕೂತು ಅಶ್ವಿನಿ ವೈಷ್ಣವ್ ಘಟನಾ ಸ್ಥಳ ತಲುಪಿದ್ದಾರೆ. ಈ ವಿಡಿಯೋ ಸಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ:ಜಾರ್ಖಂಡ್​ನಲ್ಲಿ ನಡೆದ ಎನ್‌ಕೌಂಟರ್​ನಲ್ಲಿ ನಾಲ್ವರು ನಕ್ಸಲರ ಹತ್ಯೆ
ಇಂದು (ಸೋಮವಾರ) ಬೆಳಗ್ಗೆ ಪಶ್ಚಿಮ ಬಂಗಾಳದ ನ್ಯೂ ಜಲ್​ಪೈಗುರಿ ಜಿಲ್ಲೆಯ ರಂಗಪಾಣಿ ಬಳಿ ಕಾಂಚನಜುಂಗಾ ಎಕ್ಸ್​ಪ್ರೆಸ್​ಗೆ ಗೂಡ್ಸ್​ ರೈಲು ಡಿಕ್ಕಿ ಹೊಡೆದಿದ್ದು, ಈ ರೈಲು ದುರಂತದಲ್ಲಿ 15 ಜನ ಮೃತಪಟ್ಟಿದ್ದು, 60ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
#WATCH| West Bengal: Railways Minister Ashwini Vaishnaw to shortly visit the Kanchenjunga Express train accident site in Darjeeling district.pic.twitter.com/wmAti3z2MV
— ANI (@ANI)June 17, 2024

ನಿಲ್ದಾಣ ಸಮೀಪ ಸಿಗ್ನಲ್‌ಗಾಗಿ ಕಾಯುತ್ತಿದ್ದ ಕಾಂಚನಜುಂಗಾ ಎಕ್ಸ್‌ಪ್ರೆಸ್‌ ರೈಲಿಗೆ ಹಿಂದಿನಿಂದ ಗೂಡ್ಸ್‌ ರೈಲು ಬಂದು ಡಿಕ್ಕಿ ಹೊಡೆದಿದೆ. ಘಟನೆಯಿಂದ ರೈಲಿನ ಎರಡು ಬೋಗಿಗಳಿಗೆ ಭಾರೀ ಹಾನಿಯಾಗಿದೆ. ಪ್ರಯಾಣಿಕರ ಸಾವು ನೋವು ಹೆಚ್ಚಿನ ಸಂಖ್ಯೆಯಲ್ಲಿರುವ ಸಾಧ್ಯತೆಗಳಿದ್ದು, ಸದ್ಯ ರಕ್ಷಣಾ ಕಾರ್ಯಾಚರಣೆಯು ನಡೆಯುತ್ತಿದೆ.
ಮಾನವ ನಿರ್ಲಕ್ಷ್ಯ ಕಾರಣ?: ಮೇಲ್ನೋಟಕ್ಕೆ ಈ ಅಪಘಾತಕ್ಕೆ ಮಾನವ ದೋಷವನ್ನು ಕಾರಣವೆಂದು ಸೂಚಿಸುತ್ತದೆ. ಸಿಗ್ನಲ್ ನಿರ್ಲಕ್ಷ್ಯವಾಗಿರಬಹುದು. ರೈಲ್ವೆ ಕವಚ ಯೋಜನೆಯನ್ನು ವಿಸ್ತರಿಸುವ ಅಗತ್ಯವಿದೆ ಎಂದು ರೈಲ್ವೆ ಮಂಡಳಿಯ ಅಧ್ಯಕ್ಷ ಮತ್ತು ಸಿಇಒ ಜಯ ವರ್ಮ ಸಿನ್ಹಾ ತಿಳಿಸಿದ್ದಾರೆ.
ಮೃತರಿಗೆ ಪ್ರಧಾನಿ ಮೋದಿ ಪರಿಹಾರ: ಪಶ್ಚಿಮ ಬಂಗಾಳದಲ್ಲಿ ಸಂಭವಿಸಿದ ರೈಲ್ವೆ ಅಪಘಾತದಲ್ಲಿ ಮೃತಪಟ್ಟವರಿಗೆ ಪ್ರಧಾನಿ ಮೋದಿ ಸಂತಾಪ ಸೂಚಿಸಿದ್ದು, ಮೃತರ ಸಂಬಂಧಿಕರಿಗೆ ಪ್ರಧಾನಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದ ತಲಾ 2 ಲಕ್ಷ ರೂಪಾಯಿ, ಗಾಯಗೊಂಡವರಿಗೆ 50,000 ರೂಪಾಯಿ ಪರಿಹಾರವನ್ನು ನೀಡಲಾಗುವುದು ಎಂದು ಘೋಷಣೆ ಮಾಡಿದ್ದಾರೆ.
ಬಿಹಾರ: ಅರ್ಹ ಯುವಕರಿಗೆ ‘ನಿರುದ್ಯೋಗ ಭತ್ಯೆ’ ನೀಡುವುದಾಗಿ ನಿತೀಶ್ ಕುಮಾರ್ ನೇತೃತ್ವದ ಸರ್ಕಾರ ಘೋಷಣೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen − three =
Remember me
